ಮಂಗಳೂರು: ಪಠ್ಯ ಚಟುವಟಿಕೆಗಳು ಜೀವನಕ್ಕೆ ಎಷ್ಟು ಮೌಲ್ಯಗಳನ್ನು ತಿಳಿಸಿ ಕೊಡುತ್ತದೆಯೋ ಅಷ್ಟೇ ಮಹತ್ವವನ್ನು ಕ್ರೀಡೆಗಳೂ ತಿಳಿಸುತ್ತದೆ.ವ್ಯಕ್ತಿತ್ವ ಬೆಳವಣಿಗೆಗೆ ಮುಖ್ಯ ಪಾತ್ರ ವಹಿಸುವ ಕಬಡ್ಡಿಯಿಂದ ಸರ್ವತೋಮುಖ ಅಭಿವೃದ್ದಿ ಸಾಧ್ಯ.
ಅಷ್ಟೇ ಅಲ್ಲದೇ ಕಬಡ್ಡಿ ಪಂದ್ಯಾಟಕ್ಕೆ ನಡೆಸಿದ ಪೂರ್ವ ತಯಾರಿ ಇತರರಿಗೂ ಮಾದರಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಎನ್ ಶಶಿಕುಮಾರ್ ಐ.ಪಿ.ಎಸ್ ಶ್ಲಾಘನೆ ವ್ಯಕ್ತಪಡಿಸಿದರು. ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್ ಇಲ್ಲಿ ನಡೆಯುತ್ತಿರುವ ಮಣೇಲ್ ಶ್ರೀನಿವಾಸ್ ನಾಯಕ ಸ್ಮಾರಕ ಅಂತರ್ ಕಾಲೇಜು ಪದವಿ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗೌರವ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಡಾ. ಜೆರಾಲ್ಡ್ ಸಂತೋಷ್ ಡಿ’ ಸೋಜಾ ಮಾತನಾಡಿ ಆಟದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ.ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬಹು ಮುಖ್ಯ.ದೈಹಿಕ ಕ್ಷಮತೆಯ ಈ ಆಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.
ವೇದಿಕೆಯಲ್ಲಿ ವುಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿರುವ ಮಣೇಲ್ ಅಣ್ಣಪ್ಪ ನಾಯಕ್,ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಸಂಚಾಲಕರಾಗಿರುವ ಜೀವನ್ ದಾಸ್ ನಾರಾಯಣ್, ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಡಾ.ಮೋಲಿ.ಎಸ್.ಚೌಧರಿ, ಉಪನ್ಯಾಸಕ ಸಂಯೋಜಕರಾಗಿರುವ ಡಾ.ರೀಮಾ ಆಗ್ನೆಸ್ ಫ್ರ್ಯಾಂಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು. ಅವಂತಿಕಾ ಪ್ರಾರ್ಥಿಸಿ,ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಡಾ.ಮೋಲಿ.ಎಸ್ ಚೌಧರಿ ಸ್ವಾಗತಿಸಿದರು.ಕಾಲೇಜಿನ ಉಪನ್ಯಾಸಕರಾಗಿರುವ ಶ್ರೀಮತಿ ನಂದಿತಾ ಸುನಿಲ್ ಕಾರ್ಯಕ್ರಮ ನಿರೂಪಿಸಿದರು.