#covid19ಕೊರೋನಾ ಸಂತೃಸ್ತರಿಗಾಗಿ ಮಿಡಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮತ್ತು ಪ್ರತಿಭಾ ಕುಳಾಯಿ 

ಕೊರೋನಾ ಸಂತೃಸ್ತರಿಗಾಗಿ ಮಿಡಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮತ್ತು ಪ್ರತಿಭಾ ಕುಳಾಯಿ 

-

- Advertisment -spot_img
ಜನತಾ ಕರ್ಫ್ಯೂ ಗಾಗಿ ನಾವೇ ಸ್ವಯಂ ಪ್ರೇರಣೆಯಿಂದ ದೇಶದ ಸುರಕ್ಷತೆಗಾಗಿ ಅತೀ ಅಗತ್ಯವಾಗಿ ಸಹಕಾರ ನೀಡಬೇಕಾಗಿದೆ. ಇದು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ ಬದಲಾಗಿ ಇಡೀ ವಿಶ್ವಕ್ಕೆ ಮಹಾಮಾರಿಯಾಗಿ ಪರಿಣಮಿಸಿದೆ. ಈ ಮಹಾಮಾರಿಯನ್ನು ದೂರಮಾಡಲು ನಾವೆಲ್ಲ ಕಂಕಣ ಬದ್ಧರಾಗೋಣ – ಟೊರ್ಪೆಡೋಸ್ ಗೌತಮ್ ಶೆಟ್ಟಿ.
ಬನ್ನಿ ನಾವೆಲ್ಲ ಸೇರಿ ದೇಶಕ್ಕಾಗಿ ಏನಾದರೂ ಮಾಡಬೇಕು ನಮ್ಮ ದೇಶದಲ್ಲಿ  ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ನಮ್ಮಿಂದ ಸಹಾಯ ಆಗಬೇಕು.
ಕೊರೋನ ವೈರಸ್ ದೂರವಾಗಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಲಾಕ್ ಡೌನ್ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಎದುರಿಸುತ್ತಿರುವ ಅನಾನುಕೂಲತೆಗಳು, ಕೆಲಸವಿಲ್ಲದೆ ಪರದಾಡುವ ಅನೇಕ ಜನ ಸಾಮಾನ್ಯರಿಗೆ ನೆರವಾಗುವ  ನಿಟ್ಟಿನಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ತೆರಿಗೆ ಮತ್ತು ಹಣಕಾಸು ಅಪೀಲು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರು ಆದ ಶ್ರೀಮತಿ ಪ್ರತಿಭಾ ಕುಳಾಯಿಯವರು ಮೂಲ್ಕಿ ನಗರ ಪಂಚಾಯತ್ ನ ಕೆ.ಎಸ್.ರಾವ್ ನಗರ ಪ್ರದೇಶಗಳಲ್ಲಿ ಸುಮಾರು 400 ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನು ನಡೆಸಿ ಕೊಟ್ಟರು.ಸಹನೆ ತುಂಬಿದ ಮಾತಿನಿಂದ ಇನ್ನೊಬ್ಬರ ಕಷ್ಟಕ್ಕೆ ಮರುಗುವ, ಅನೇಕ ಕೂಲಿ ಕಾರ್ಮಿಕರಿಗೆ  ನಿರ್ಗತಿಕರಿಗೆ, ಕೆಲಸ ಇಲ್ಲದೆ ಪರದಾಡುವ ಅನೇಕ ಕುಟುಂಬಗಳಿಗೆ ಸಹಾಯ ಮಾಡುವುದರ ಜೊತೆಗೆ ಗ್ರಹ ಬಳಕೆಯ ಅಗತ್ಯ ಸಾಮಗ್ರಿಗಳನ್ನು ನೀಡಿ ಉದಾರತೆಯನ್ನು ಮೆರೆದಿದ್ದಾರೆ.
ಇವರ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿ ಕೆಲಸ ಮಾಡುವ ಇನ್ನೋರ್ವ ವ್ಯಕ್ತಿ
ಟೊರ್ಪೆಡೋಸ್ ಗೌತಮ್ ಶೆಟ್ಟಿ ಕುಂದಾಪುರ.
ಬದುಕಿನಲ್ಲಿ ಬರುವ ಕಷ್ಟಗಳು ಸಾಧನೆಗೆ ಸೋಪಾನಗಳು. ಅನ್ನ ಕೊಡುವ ಉದ್ಯೋಗ, ಜನ್ಮ ಕೊಟ್ಟ ಅಮ್ಮನಂತೆ ಎಂದು ನಂಬಿದ ನಿಷ್ಠಾವಂತ ಇದೀಗ ದೇಶವೇ ಕೊರೋನ ಮಹಾಮಾರಿಗೆ ತುತ್ತಾಗಿರುವ ಸಂಧರ್ಭದಲ್ಲಿ ಸಂಘ ಸಂಸ್ಥೆಗಳ ಜೊತೆ ಕೈ ಜೋಡಿಸಿ ಜಾತಿ ಧರ್ಮದ ಭೇದವಿಲ್ಲದೆ ಸಹಾಯದ ನೆಪದಲ್ಲಿ ಎಲ್ಲಾ ವರ್ಗದ ಜನರಿಗೂ ಪ್ರೇರಕ ಶಕ್ತಿಯಾಗಿ ನಿಂತು ಅವರ ಕಷ್ಟಗಳಿಗೆ ನೆರವಾಗುವ ಮೂಲಕ ಬೆಳಕಾಗಿದ್ದಾರೆ.
ಕೊರೋನದ ಭೀಕರತೆಯ ನಡುವೆಯೂ ತಮ್ಮ ಪರಿಸರದ ಬಡವರ್ಗದ ಅನೇಕ ಕುಟುಂಬಗಳ ಜನರಿಗೆ ಸಹಾಯ ಮಾಡುತ್ತಾ ಇದ್ದಾರೆ.
ಸಮಾಜದಲ್ಲಿ ತುಂಬಿರುವ ನಕಾರಾತ್ಮಕ ಭಾವನೆಗಳನ್ನು ದೂರವಾಗಿಸುವ ಕೆಲಸ ನಮ್ಮಿಂದಾಗಲಿ ವಿಶ್ವದಾದ್ಯಂತ ಹರಡಿರುವ ಕೊರೋನ ವೈರಸ್ ದೂರವಾಗಿಸುವ ಪ್ರಯತ್ನದ ಜೊತೆಗೆ ನೂರು ಮನಸ್ಸುಗಳು ನೂರು ಭಾವಗಳು ಸೇರಿ ಸುಂದರ ದೇಶವನ್ನು ಕಟ್ಟುವಲ್ಲಿ ಪ್ರಯತ್ನ ಪಡೋಣ ಅನ್ನುವ ಧ್ಯೇಯವನ್ನು ಮುಂದಿಟ್ಟುಕೊಂಡು ಕೊರೋನ ವೈರಸ್ ದೂರವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮೂಲ್ಕಿ ನಗರ ಪಂಚಾಯತ್ ನ ಸದಸ್ಯರಾದ ಮಂಜುನಾಥ ಕಂಬಾರ, ಮಾಜಿ ಸದಸ್ಯರಾದ ಅಶೋಕ್ ಪೂಜಾರ್, ಕಾಂಗ್ರೆಸ್ ನಾಯಕರಾದ ಶಮೀರ್. ಮೊದಲಾದವರು ಉಪಸ್ಥಿತರಿದ್ದರು.
ಈ ಸೇವೆಯನ್ನು ಇನ್ನಷ್ಟು ದಿನಗಳ ಕಾಲ ನಡೆಸಲಾಗುತ್ತಿದ್ದು,ಸಂತೃಸ್ತರು ಈ ಕೆಳಗಿನ ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.
ಸಂಪರ್ಕ ದೂರವಾಣಿ ಸಂಖ್ಯೆ
ಶ್ರೀ ಗೌತಮ್ ಶೆಟ್ಟಿ :9845121498
ಪ್ರತಿಭಾ ಕುಳಾಯಿ :9964756410
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

three × 2 =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you