27.2 C
London
Friday, July 19, 2024
Home#covid19ಮೊಹಮ್ಮದ್ ಶೀಶ್ ಮತ್ತು ಎ.ಕೆ.ಸ್ಪೋರ್ಟ್ಸ್ ಕ್ಲಬ್ ಉಡುಪಿ ತಂಡದಿಂದ ಕೊರೋನ ಸಂತ್ರಸ್ತರಿಗೆ ನೆರವು. 

ಮೊಹಮ್ಮದ್ ಶೀಶ್ ಮತ್ತು ಎ.ಕೆ.ಸ್ಪೋರ್ಟ್ಸ್ ಕ್ಲಬ್ ಉಡುಪಿ ತಂಡದಿಂದ ಕೊರೋನ ಸಂತ್ರಸ್ತರಿಗೆ ನೆರವು. 

Date:

Related stories

spot_imgspot_img
spot_imgspot_img
spot_imgspot_img
spot_imgspot_img
ಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ, ನಿರ್ಗತಿಕರ ಪಾಲಿನ ಅನ್ನದಾತರಾಗಿ ಸೇವೆ ಸಲ್ಲಿಸುತ್ತಿರುವ
ಮೊಹಮ್ಮದ್ ಶೀಶ್ ಮತ್ತು ಅನ್ಸಾರ್ ಅಹಮದ್.
ಕೆಲಸವಿಲ್ಲದೆ  ಪರದಾಡುವ ಕೊರೋನ ವೈರಸ್ ನ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಮಧ್ಯಮ ವರ್ಗದ ಸ್ವಾಭಿಮಾನಿ ಜನರು ಹಸಿವಿನಿಂದ ಬಳಲುತ್ತಿದ್ದರೂ  ಹೇಳಲು ಇಚ್ಛಿಸದ ಅದೆಷ್ಟೋ ಜನರಿಗೆ ಆಶಾಕಿರಣವಾಗಿ ಆಶ್ರಯಧಾತರಾಗಿ ಬಡವರ ಕೂಲಿಕಾರ್ಮಿಕರ ಹಸಿವನ್ನು ನೀಗಿಸಲು ಕೆಲವು ಸಮಾನ ಮನಸ್ಕರ ತಂಡವೊಂದು ಸದ್ದಿಲ್ಲದೇ ಕೆಲಸ ಮಾಡುತ್ತಾ ಇದೆ.
 ಉಡುಪಿಯಲ್ಲಿ 25 ಜನರ ತಂಡವನ್ನು ರಚಿಸಿ ಕೊಂಡು ನಗರದಾದ್ಯಂತ ಕೂಲಿಕಾರ್ಮಿಕರಿಗೆ ಅಶಕ್ತರಿಗೆ ಉಡುಪಿಯ ಖಾದರ್ ಬಿಲ್ಡಿಂಗ್ ನಲ್ಲಿ ಮದ್ಯಾಹ್ನ ಮತ್ತು  ರಾತ್ರಿಯ ಊಟದ ತಯಾರಿ ಮಾಡಿಕೊಂಡು ಸುಮಾರು ಒಂದು ದಿನಕ್ಕೆ 1500 ಕ್ಕಿಂತಲೂ ಅಧಿಕ ಮಂದಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದು 21 ದಿನಗಳಲ್ಲಿ  ಸುಮಾರು  30,000 ಕ್ಕೂ ಹೆಚ್ಚಿನ ಜನರಿಗೆ ಊಟ ನೀಡಲಾಗಿದೆ.
ಉಡುಪಿ, ಬೀಡಿನಗುಡ್ಡೆ, ಮಣಿಪಾಲ,ಕರಾವಳಿ ಬೈಪಾಸ್,ನಿಟ್ಟೂರು,ಅಂಬಾಗಿಲು ಅಲ್ಲದೆ ಪರಿಸರದ ಅನೇಕ ಕೇರಿಗಳ ಅಶಕ್ತರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶುಚಿತ್ವವನ್ನು ಗಮನದಲ್ಲಿಟ್ಟುಕೊಂಡು, ಜೊತೆಗೆ ಅನೇಕರಿಗೆ ಆಹಾರವನ್ನು ಉಚಿತವಾಗಿ ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಕೂಡ ಮಾಡುತ್ತಿದ್ದಾರೆ.
ಸಸ್ಯಾಹಾರ ಮತ್ತು ಮಾಂಸಾಹಾರ ಹೀಗೆ ಎರಡು ರೀತಿಯಲ್ಲಿಯೂ ಊಟದ ವ್ಯವಸ್ಥೆ ಮಾಡಲಾಗಿದ್ದು, ವೆಜ್ ಪುಲಾವ್, ಬೇಯಿಸಿದ ಮೊಟ್ಟೆ, ಪ್ರಾಯೋಜಕರು ನೀಡುವ ಸಹಾಯದಿಂದ ಹಣ್ಣು ಹಂಪಲು, ತರಕಾರಿ, ಕಲ್ಲಂಗಡಿ ಹಣ್ಣು ನೀಡಿ ಸಹಕರಿಸುತ್ತಿದ್ದಾರೆ.
ಜಾತಿಧರ್ಮದ ಭೇದವಿಲ್ಲದೆ ಲಾಕ್ ಡೌನ್ ಆದ ದಿನದಿಂದ ಇಂದಿನವರೆಗೆ ಸೇವೆ ಸಲ್ಲಿಸುತ್ತಿರುವ ಈ ಸೇವೆಗೆ ರಾಜಸ್ಥಾನ ಮಾರ್ವಾಡಿ ಸಮುದಾಯದವರು ಮತ್ತು ಸ್ಥಳೀಯ ಬಾಂಧವರು
ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದು 21 ದಿನಗಳ ಯೋಜನೆಯೊಂದಿಗೆ ಆರಂಭವಾದ ಈ ಸೇವೆ ಅವಶ್ಯಕತೆ ಇದ್ದಲ್ಲಿ ಇನ್ನೂ ಮುಂದುವರಿಸುವ ಯೋಚನೆ ಇದೆ ಎಂದು ಮೊಹಮ್ಮದ್ ಶೀಶ್ ಅವರು ತಿಳಿಸಿದ್ದಾರೆ . ಅವರ ಈ ಸೇವೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರದ ಅವಶ್ಯಕತೆ ಇದ್ದು ಆಸಕ್ತರಿಂದ ಸಹಾಯವನ್ನು ನಿರೀಕ್ಷಿಸಲಾಗಿದೆ.
ಇಂದು ಊಟ ಹಂಚುವ ಸ್ಥಳಕ್ಕೆ ಫೈರ್ ಬ್ರಿಡ್ಜ್ ಅವರ ಕಡೆಯಿಂದ ರಾಸಾಯನಿಕ ಸಿಂಪಡಿಸುವ ಕಾರ್ಯಕ್ರಮ ನಡೆದಿದ್ದು ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಘಟಕ ಮತ್ತು ಕಾರ್ಮಿಕ ನಿಗಮ ಅವರು ಸೇರಿರುವ ಎಲ್ಲಾ ಕಾರ್ಮಿಕರಿಗೆ ಡೆಟ್ಟಾಲ್ ಸಾಬೂನು ಮತ್ತು ಮುಖಕ್ಕೆ ಹಾಕುವ ಮಾಸ್ಕ್ ವಿತರಣಾ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಬೀದಿ ಬದಿಗಳಲ್ಲಿ ಮಲಗುವ ಜನರಿಗೆ ಕಂಬಳಿ ಮತ್ತು ಸೀರೆಯನ್ನು ಹಂಚಲಾಯಿತು.
ಇಂದು ಅಂಬೇಡ್ಕರ್ ಜಯಂತಿಯ ಅಂಗವಾಗಿ ನೆರೆದ ಎಲ್ಲಾ ಕಾರ್ಮಿಕರಿಗೆ ಸಂವಿಧಾನದ ಪೀಠಿಕೆಯನ್ನು ಪ್ರಮಾಣ ಮಾಡಿಸಿ ದೇಶದ ಸಂವಿಧಾನದ ಮಹತ್ವದ ಅರಿವು ಮೂಡಿಸಲಾಯಿತು.
ಸಾರ್ವಜನಿಕ ದಾನಿಗಳಿಂದ ಹಸಿದವರಿಗೆ ಮಧ್ಯವರ್ತಿಗಳ ರೀತಿಯಲ್ಲಿ ಸಹಕರಿಸುತ್ತಿರುವ ಈ ತಂಡದ ರೂವಾರಿ ಮೊಹಮ್ಮದ್ ಶೀಶ್ ಅವರು ಸ್ವತಃ ಒಬ್ಬ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿ. ಇವರು ಕಟ್ಟಿದ ಸಂಸ್ಥೆ ಕಳೆದ 21 ವರ್ಷಗಳಲ್ಲಿ ರಂಗ ಕಪ್, ಸ್ಪಾರ್ಕ್, ಸಾಗರ, ತೀರ್ಥಹಳ್ಳಿ, ಉಳ್ಳಾಲ, ಶ್ಯಾಮಸುಂದರ್ ಟ್ರೋಫಿ, ಮಂಗಳೂರು ಫೆಸ್ಟಿವಲ್ ಟ್ರೋಫಿ, ಸೂರಲ್ಪಾಡಿ, ಸ್ವಾಮಿ ಗಂಗೊಳ್ಳಿ, ಉದ್ಯಾವರ, ಕಟಪಾಡಿ, ಟೊರ್ಪೆಡೋಸ್, ಚಕ್ರವರ್ತಿ, ದಾವಣಗೆರೆ, ಪಡುಬಿದ್ರಿ, ಶಿವಮೊಗ್ಗ, ಕೊಪ್ಪ, ಚಿಕ್ಕಮಗಳೂರು, ಕೋಲಾರ, ಮೈಸೂರು, ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಷ್ಠಿತ ಟ್ರೋಫಿ ಸಹಿತ 350 ಕ್ಕಿಂತ ಹೆಚ್ಚು ಪ್ರಶಸ್ತಿ ಪಡೆದ ತಂಡ.
ವಿಶ್ವ, ಸಚಿನ್, ಸಂಪತ್, ಮನೋಹರ್,ಅಪ್ಪು,
ಮೊಹಮ್ಮದ್ ಆರಿಫ್ ರಂತಹ ದೈತ್ಯ ಪ್ರತಿಭೆಗಳನ್ನು ರಾಜ್ಯಕ್ಕೆ ಪರಿಚಯಿಸಿದ ಸಂಸ್ಥೆ “ಎ. ಕೆ. ಸ್ಪೋರ್ಟ್ಸ್ ಕ್ಲಬ್” ತಂಡದ ರೂವಾರಿ ಇವರು.2018 ರಲ್ಲಿ M.P.L ಸೀಸನ್ 4 ರಲ್ಲಿ ಕೂಡ ಎ.ಕೆ‌.ಸ್ಪೋರ್ಟ್ಸ್ ತಂಡ ಭಾಗವಹಿಸಿತ್ತು.ತಂಡದ ಆಟಗಾರರನ್ನು ಮಕ್ಕಳಂತೆ ಪ್ರೀತಿಸುವ ವ್ಯಕ್ತಿ ಮೊಹಮ್ಮದ್ ಶ್ರೀಶ್.
ಈ ಸೇವೆ ನಿರಂತರ ಸಾಗಲಿದ್ದು,ಸಂತೃಸ್ತ ಜನರು ಈ ಕೆಳಗೆ ಕಾಣಿಸಿದ ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.
ಮೊಹಮ್ಮದ್ ಶೀಶ್- 9535356747,ಅನ್ಸಾರ್ ಅಹಮ್ಮದ್-9743285855
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

seven − four =