ಕೊರೋನಾ ರೋಗದ ಪರಿಣಾಮದಿಂದ ಇಡೀ ದೇಶವೇ ತಟಸ್ಥವಾಗಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಸೇವೆಗಾಗಿ ಕಟಿಬಧ್ಧವಾಗಿ ಹಲವಾರು ಸಂಘಟನೆಗಳ ನಿಸ್ವಾರ್ಥ ಸೇವೆಯಲ್ಲಿ ಹಲವಾರು ಉದ್ಯಮಿಗಳು ಕೈಜೋಡಿಸುತ್ತಿದ್ದಾರೆ.
ಅದರಂತೆ ಮಾನವೀಯ ಕೈಂಕರ್ಯದಲ್ಲಿ ಸದಾ ಸಹಕಾರಿಯಾಗಿರುವ,ರಾಷ್ಟ್ರೀಯ ಮಟ್ಟದಲ್ಲಿಯೂ ವಿಶೇಷ ಜವಾಬ್ದಾರಿ ಹೊತ್ತ ನಾಯಕರಾದ ಶ್ರೀ ಸಂತೋಷ್ ಶೆಟ್ಟಿ ದೆಹಲಿ ಇವರು ಕೊಡಮಾಡಿದ ಅಗತ್ಯ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ಇಂದು ಮಾನವೀಯ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕದ ನೇತೃತ್ವದಲ್ಲಿ ಕಂಚಿನಡ್ಕದ ಸುಮಾರು 35 ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕೃಷ್ಣ ಬಂಗೇರ, ಶಂಕರ್ ಕಂಚಿನಡ್ಕ, ಪದ್ಮನಾಭ, ಸಂತೋಷ್ ನಂಬಿಯಾರ್, ಸುನೀಲ್, ಗಣೇಶ್ ಉಪಸ್ಥಿತರಿದ್ದರು.
ಕಂಚಿನಡ್ಕ ತಂಡದ ಕಾರ್ಯದರ್ಶಿಗಳಾದ ಶಂಕರ್ ಪಾಣಾರ ರವರು ಕೊರೋನಾ ದ ಪರಿಣಾಮ ಸಂಕಷ್ಟದ ಪರಿಸ್ಥಿತಿ ಅನುಭವಿಸುತ್ತಿರುವ ದೈವಾರಾಧನೆ ಕಾರ್ಯದಲ್ಲಿ ಶಂಕರ್ ರವರ ಒಡನಾಡಿಗಳು ಹಾಗೂ ಪಾಣಾರ ಮತ್ತು ನಲಿಕೆ ಜನಾಂಗದ 25 ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಿದರು.
ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ ಪಡುಬಿದ್ರಿ ಪರಿಸರದಲ್ಲಿ ಹೊನಲು ಬೆಳಕಿನ ಷಟಲ್,ಕ್ರಿಕೆಟ್ ಹೀಗೆ ಕ್ರೀಡಾ ಚಟುವಟಿಕೆ,ಧಾರ್ಮಿಕ,ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯ ಮಾದರಿ ಸಂಸ್ಥೆ ಎನಿಸಿಕೊಂಡಿದೆ.