9.9 C
London
Thursday, October 3, 2024
Home#covid19ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ವತಿಯಿಂದ ದಿನ ಬಳಕೆಯ ಸಾಮಗ್ರಿಗಳನ್ನು ಒಳಗೊಂಡ ಆಹಾರ ಕಿಟ್ ವಿತರಣೆ

ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ವತಿಯಿಂದ ದಿನ ಬಳಕೆಯ ಸಾಮಗ್ರಿಗಳನ್ನು ಒಳಗೊಂಡ ಆಹಾರ ಕಿಟ್ ವಿತರಣೆ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ತಡಂಬೈಲ್ ನ ವೀರಕೇಸರಿ ತಂಡದಿಂದ 170 ಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ದಿನ ನಿತ್ಯದ ಬಳಕೆಯ ಸಾಮಗ್ರಿಗಳಾದ ಅಕ್ಕಿ ಸಕ್ಕರೆ ತರಕಾರಿಗಳನ್ನು ತಂಡದ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
1979 ರಲ್ಲಿ ಒಂದೊಳ್ಳೆಯ ಉದ್ದೇಶದಿಂದ ಆರಂಭವಾದ ಈ ಸಂಸ್ಥೆ ಪ್ರಾರಂಭದ ಹಂತದಲ್ಲಿ ಕಬಡ್ಡಿ ಮತ್ತು ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸುತ್ತಾ ಬಂದಿದ್ದು ನಂತರದ ದಿನಗಳಲ್ಲಿ ಸುಧಾಕರ್ ಅವರ ಸಾರಥ್ಯ ದಲ್ಲಿ ರಾಜ್ಯ ಮಟ್ಟದಲ್ಲಿ ಕ್ರಿಕೆಟ್ ತಂಡವನ್ನು ಕಟ್ಟಿ ರಾಜ್ಯದ ಮೂಲೆ ಮೂಲೆಗಳಲ್ಲಿ ವೀರ ಕೇಸರಿ ತನ್ನ ಶೌರ್ಯ ಮೆರೆಯುವಲ್ಲಿ ಯಶಸ್ವಿಯಾಗಿತ್ತು.
ಸಾಗರದಲ್ಲಿ 1 ಪ್ರಥಮ ಪ್ರಶಸ್ತಿ ಸಹಿತ 2 ಸಲ ದ್ವಿತೀಯ ಪ್ರಶಸ್ತಿ,
ಹೊಸನಗರದಲ್ಲಿ 2  ದ್ವಿತೀಯ,ಗಂಗೊಳ್ಳಿಯಲ್ಲಿ 2 ದ್ವಿತೀಯ,ಉದ್ಯಾವರ,ಬೆಳಪು, ಚಕ್ರವರ್ತಿ ಕುಂದಾಪುರ, ಉಳ್ಳಾಲ, ಮಲ್ಪೆ ಸೇರಿ ಹಲವಾರು ಕಡೆಗಳಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದದ್ದು ಪ್ರಮುಖವಾಗಿದೆ.
90 ರ ದಶಕದಲ್ಲಿ ರಾಜ್ಯಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಯಶಸ್ಸು ಕಂಡ ವೀರಕೇಸರಿ ಪಡೆ ಸುಧಾಕರ್ ರವರ ಮಾರ್ಗದರ್ಶನದಲ್ಲಿ ತೇಜಪಾಲ್ ಪುತ್ರನ್, ವಿಶ್ವನಾಥ್ ಬೈಕಂಪಾಡಿ, ಪದ್ಮನಾಭ್, ಪುಂಡಲೀಕ ಹೊಸಬೆಟ್ಟು,
ವಿಶ್ವನಾಥ್ ಮಂಗಳೂರು,ಜುಲ್ಫಿಕರ್ ಆಲಿ ಭುಟ್ಟೋ,ಯಶ್ ಪಾಲ್,ಕಿರಣ್,ಪಿ.ವಿ‌.ದಿನೇಶ್,
ರಮೇಶ್,ಶರೀಫ್,
ಕಣ್ಣನ್ ನಾಯರ್, ಉಮೇಶ್, ದಯಾನಂದ್, ಅಶ್ವಥ್, ಶ್ರೀಕಾಂತ್, ಸೂರಜ್, ಸುರೇಂದ್ರ, ಶೈಲೇಶ್ ಹೆಜಮಾಡಿ,ಪುನೀತ್,ಪ್ರಮಿತ್,
ರಾಘು ಕಾಪು, ಹರೀಶ್ ಬೈಕಂಪಾಡಿ, ವೆಂಕಪ್ಪ, ಸಂಪತ್ ಶೆಟ್ಟಿ,ಸುಧೀರ್,
ದಿನೇಶ್‌.ಆರ್.ಶೆಟ್ಟಿ,ನರೇಶ್ ಬಜ್ಪೆ ಮತ್ತು ಸಂದೇಶ್ ಈ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದರು.
ಕಳೆದ 10 ವರ್ಷಗಳಿಂದ ಕ್ರಿಕೆಟ್ ನಿಂದ ಸಂಸ್ಥೆಯು ದೂರ ಸರಿದಿದ್ದರೂ ಸಾಮಾಜಿಕ ಧಾರ್ಮಿಕ ಸೇವೆಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು ಜನಹಿತ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಅತ್ಯಂತ ಶಿಸ್ತಿನ ತಂಡ ಎಂಬ ಹಿರಿಮೆಯನ್ನು ಗಳಿಸಿದ್ದಾರೆ. ಸ್ಥಳೀಯ ಹಲವಾರು ಪಂದ್ಯದಲ್ಲಿ ಗೆಲುವು ಸಾಧಿಸಿ ಮೆರೆದ ಈ ತಂಡ
1998 ರಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿ ಸಹಿತ ಕಬಡ್ಡಿ,ಹಗ್ಗಜಗ್ಗಾಟ ಹೀಗೆ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಪ್ರಾಯೋಜಿಸಿದ್ದಾರೆ.
ಈ ಸೇವೆಯನ್ನು ಮುಂದಿನ ಎರಡು ವಾರಗಳ ನಂತರವೂ ನೀಡುವ ಆಶಯ ವ್ಯಕ್ತಪಡಿಸಿದ್ದಾರೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

seven + 15 =