ಜನತಾ ಕರ್ಫ್ಯೂ ಗಾಗಿ ನಾವೇ ಸ್ವಯಂ ಪ್ರೇರಣೆಯಿಂದ ದೇಶದ ಸುರಕ್ಷತೆಗಾಗಿ ಅತೀ ಅಗತ್ಯವಾಗಿ ಸಹಕಾರ ನೀಡಬೇಕಾಗಿದೆ. ಇದು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ ಬದಲಾಗಿ ಇಡೀ ವಿಶ್ವಕ್ಕೆ ಮಹಾಮಾರಿಯಾಗಿ ಪರಿಣಮಿಸಿದೆ. ಈ ಮಹಾಮಾರಿಯನ್ನು ದೂರಮಾಡಲು ನಾವೆಲ್ಲ ಕಂಕಣ ಬದ್ಧರಾಗೋಣ – ಟೊರ್ಪೆಡೋಸ್ ಗೌತಮ್ ಶೆಟ್ಟಿ.
ಬನ್ನಿ ನಾವೆಲ್ಲ ಸೇರಿ ದೇಶಕ್ಕಾಗಿ ಏನಾದರೂ ಮಾಡಬೇಕು ನಮ್ಮ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ನಮ್ಮಿಂದ ಸಹಾಯ ಆಗಬೇಕು.
ಕೊರೋನ ವೈರಸ್ ದೂರವಾಗಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಲಾಕ್ ಡೌನ್ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಎದುರಿಸುತ್ತಿರುವ ಅನಾನುಕೂಲತೆಗಳು, ಕೆಲಸವಿಲ್ಲದೆ ಪರದಾಡುವ ಅನೇಕ ಜನ ಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ರಾಜ್ಯ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ತೆರಿಗೆ ಮತ್ತು ಹಣಕಾಸು ಅಪೀಲು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರು ಆದ ಶ್ರೀಮತಿ ಪ್ರತಿಭಾ ಕುಳಾಯಿಯವರು ಮೂಲ್ಕಿ ನಗರ ಪಂಚಾಯತ್ ನ ಕೆ.ಎಸ್.ರಾವ್ ನಗರ ಪ್ರದೇಶಗಳಲ್ಲಿ ಸುಮಾರು 400 ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನು ನಡೆಸಿ ಕೊಟ್ಟರು.ಸಹನೆ ತುಂಬಿದ ಮಾತಿನಿಂದ ಇನ್ನೊಬ್ಬರ ಕಷ್ಟಕ್ಕೆ ಮರುಗುವ, ಅನೇಕ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ, ಕೆಲಸ ಇಲ್ಲದೆ ಪರದಾಡುವ ಅನೇಕ ಕುಟುಂಬಗಳಿಗೆ ಸಹಾಯ ಮಾಡುವುದರ ಜೊತೆಗೆ ಗ್ರಹ ಬಳಕೆಯ ಅಗತ್ಯ ಸಾಮಗ್ರಿಗಳನ್ನು ನೀಡಿ ಉದಾರತೆಯನ್ನು ಮೆರೆದಿದ್ದಾರೆ.
ಇವರ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿ ಕೆಲಸ ಮಾಡುವ ಇನ್ನೋರ್ವ ವ್ಯಕ್ತಿ
ಟೊರ್ಪೆಡೋಸ್ ಗೌತಮ್ ಶೆಟ್ಟಿ ಕುಂದಾಪುರ.
ಬದುಕಿನಲ್ಲಿ ಬರುವ ಕಷ್ಟಗಳು ಸಾಧನೆಗೆ ಸೋಪಾನಗಳು. ಅನ್ನ ಕೊಡುವ ಉದ್ಯೋಗ, ಜನ್ಮ ಕೊಟ್ಟ ಅಮ್ಮನಂತೆ ಎಂದು ನಂಬಿದ ನಿಷ್ಠಾವಂತ ಇದೀಗ ದೇಶವೇ ಕೊರೋನ ಮಹಾಮಾರಿಗೆ ತುತ್ತಾಗಿರುವ ಸಂಧರ್ಭದಲ್ಲಿ ಸಂಘ ಸಂಸ್ಥೆಗಳ ಜೊತೆ ಕೈ ಜೋಡಿಸಿ ಜಾತಿ ಧರ್ಮದ ಭೇದವಿಲ್ಲದೆ ಸಹಾಯದ ನೆಪದಲ್ಲಿ ಎಲ್ಲಾ ವರ್ಗದ ಜನರಿಗೂ ಪ್ರೇರಕ ಶಕ್ತಿಯಾಗಿ ನಿಂತು ಅವರ ಕಷ್ಟಗಳಿಗೆ ನೆರವಾಗುವ ಮೂಲಕ ಬೆಳಕಾಗಿದ್ದಾರೆ.
ಕೊರೋನದ ಭೀಕರತೆಯ ನಡುವೆಯೂ ತಮ್ಮ ಪರಿಸರದ ಬಡವರ್ಗದ ಅನೇಕ ಕುಟುಂಬಗಳ ಜನರಿಗೆ ಸಹಾಯ ಮಾಡುತ್ತಾ ಇದ್ದಾರೆ.
ಸಮಾಜದಲ್ಲಿ ತುಂಬಿರುವ ನಕಾರಾತ್ಮಕ ಭಾವನೆಗಳನ್ನು ದೂರವಾಗಿಸುವ ಕೆಲಸ ನಮ್ಮಿಂದಾಗಲಿ ವಿಶ್ವದಾದ್ಯಂತ ಹರಡಿರುವ ಕೊರೋನ ವೈರಸ್ ದೂರವಾಗಿಸುವ ಪ್ರಯತ್ನದ ಜೊತೆಗೆ ನೂರು ಮನಸ್ಸುಗಳು ನೂರು ಭಾವಗಳು ಸೇರಿ ಸುಂದರ ದೇಶವನ್ನು ಕಟ್ಟುವಲ್ಲಿ ಪ್ರಯತ್ನ ಪಡೋಣ ಅನ್ನುವ ಧ್ಯೇಯವನ್ನು ಮುಂದಿಟ್ಟುಕೊಂಡು ಕೊರೋನ ವೈರಸ್ ದೂರವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮೂಲ್ಕಿ ನಗರ ಪಂಚಾಯತ್ ನ ಸದಸ್ಯರಾದ ಮಂಜುನಾಥ ಕಂಬಾರ, ಮಾಜಿ ಸದಸ್ಯರಾದ ಅಶೋಕ್ ಪೂಜಾರ್, ಕಾಂಗ್ರೆಸ್ ನಾಯಕರಾದ ಶಮೀರ್. ಮೊದಲಾದವರು ಉಪಸ್ಥಿತರಿದ್ದರು.
ಈ ಸೇವೆಯನ್ನು ಇನ್ನಷ್ಟು ದಿನಗಳ ಕಾಲ ನಡೆಸಲಾಗುತ್ತಿದ್ದು,ಸಂತೃಸ್ತರು ಈ ಕೆಳಗಿನ ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.
ಸಂಪರ್ಕ ದೂರವಾಣಿ ಸಂಖ್ಯೆ
ಶ್ರೀ ಗೌತಮ್ ಶೆಟ್ಟಿ :9845121498
ಪ್ರತಿಭಾ ಕುಳಾಯಿ :9964756410