Home ಕ್ರಿಕೆಟ್ ಮಾಜಿ ಕ್ರಿಕೆಟಿಗ ಶ್ರೀ ಕೃಷ್ಣಮಠಕ್ಕೆ ಭೇಟಿ

ಮಾಜಿ ಕ್ರಿಕೆಟಿಗ ಶ್ರೀ ಕೃಷ್ಣಮಠಕ್ಕೆ ಭೇಟಿ

ಮಾಜಿ ಕ್ರಿಕೆಟಿಗ ಶ್ರೀ ಕೃಷ್ಣಮಠಕ್ಕೆ ಭೇಟಿ

ಮಾಜಿ ಕ್ರಿಕೆಟಿಗ ಶ್ರೀ ಕೃಷ್ಣಮಠಕ್ಕೆ ಭೇಟಿ

ಟೀಮ್‌ ಇಂಡಿಯಾ ಮಾಜಿ ಆಟಗಾರ, ಶ್ರೇಷ್ಠ ಕ್ರಿಕೆಟಿಗ, ಶ್ರೇಷ್ಠ ವಿಮರ್ಶಕ ಮತ್ತು ಕ್ರಿಕೆಟ್ ಪಂಡಿತ ವಿವಿಎಸ್ ಲಕ್ಷ್ಮಣ್ ಕುಟುಂಬ ಸಮೇತವಾಗಿ ಉಡುಪಿಯ ಕೆಲವು ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿದರು.

ಶೃಂಗೇರಿ, ಹೊರನಾಡು ಕ್ಷೇತ್ರಗಳ ದರ್ಶನದ ಬಳಿಕ ಬುಧವಾರ (ಡಿ. 25) ವಿವಿಎಸ್‌ ಲಕ್ಷ್ಮಣ್‌ ಹಾಗೂ ಅವರ ಪತ್ನಿ ಜಿಆರ್‌ ಶೈಲಜಾ, ಪುತ್ರ ಸರ್ವಜಿತ್‌ ಲಕ್ಷ್ಮಣ್‌ ಹಾಗೂ ಪುತ್ರಿ ಅಚಿಂತ್ಯಾ ಲಕ್ಷ್ಮಣ್‌ ಜೊತೆಗೂಡಿ ಶ್ರೀ ಕೃಷ್ಣ ಮುಖ್ಯಪ್ರಾಣನ ದರ್ಶನ ಮಾಡಿ ಆ ಬಳಿಕ ಪರ್ಯಾಯ ಪುತ್ತಿಗೆ ಮಠದವರು ನಡೆಸುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಪರ್ಯಾಯ ಮಠದ ವತಿಯಿಂದ ಈ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.

ಅದಾದ ಬಳಿಕ ಅಮೃತೇಶ್ವರಿ ದೇವಸ್ಥಾನ ಕೋಟ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿ ಸಿದ್ದಿ ವಿನಾಯಕ ದೇವಸ್ಥಾನ, ನಂತರ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಗಳಿಗೆ ಭೇಟಿ ನೀಡಿದರು.

ಬುಧವಾರ ರಾತ್ರಿ ಅವರು ಕೊಲ್ಲೂರು ವಸತಿ ಗ್ರಹದಲ್ಲಿ ವಾಸ್ತವ್ಯ ಹೂಡಿ ಗುರುವಾರ ಬೆಳಿಗ್ಗೆ ಅಲ್ಲಿ ಮೂಕಾಂಬಿಕಾ ದೇವಿಯ ದರ್ಶನ ಮಾಡಿದರು. ಆ ಬಳಿಕ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ಮತ್ತು ಗೋಕರ್ಣಕ್ಕೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here

one + 16 =

ಮಾಜಿ ಕ್ರಿಕೆಟಿಗ ಶ್ರೀ ಕೃಷ್ಣಮಠಕ್ಕೆ ಭೇಟಿ

ಮಾಜಿ ಕ್ರಿಕೆಟಿಗ ಶ್ರೀ ಕೃಷ್ಣಮಠಕ್ಕೆ ಭೇಟಿ ಟೀಮ್‌ ಇಂಡಿಯಾ ಮಾಜಿ ಆಟಗಾರ, ಶ್ರೇಷ್ಠ ಕ್ರಿಕೆಟಿಗ, ಶ್ರೇಷ್ಠ ವಿಮರ್ಶಕ ಮತ್ತು ಕ್ರಿಕೆಟ್ ಪಂಡಿತ ವಿವಿಎಸ್ ಲಕ್ಷ್ಮಣ್ ಕುಟುಂಬ ಸಮೇತವಾಗಿ ಉಡುಪಿಯ ಕೆಲವು ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿದರು. ಶೃಂಗೇರಿ, ಹೊರನಾಡು ಕ್ಷೇತ್ರಗಳ ದರ್ಶನದ ಬಳಿಕ ಬುಧವಾರ (ಡಿ. 25) ವಿವಿಎಸ್‌ ಲಕ್ಷ್ಮಣ್‌ ಹಾಗೂ ಅವರ ಪತ್ನಿ ಜಿಆರ್‌ ಶೈಲಜಾ, ಪುತ್ರ ಸರ್ವಜಿತ್‌ ಲಕ್ಷ್ಮಣ್‌ ಹಾಗೂ ಪುತ್ರಿ ಅಚಿಂತ್ಯಾ ಲಕ್ಷ್ಮಣ್‌ ಜೊತೆಗೂಡಿ ಶ್ರೀ ಕೃಷ್ಣ ಮುಖ್ಯಪ್ರಾಣನ ದರ್ಶನ ಮಾಡಿ ಆ ಬಳಿಕ ಪರ್ಯಾಯ ಪುತ್ತಿಗೆ ಮಠದವರು ನಡೆಸುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಪರ್ಯಾಯ ಮಠದ ವತಿಯಿಂದ ಈ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು. ಅದಾದ ಬಳಿಕ ಅಮೃತೇಶ್ವರಿ ದೇವಸ್ಥಾನ ಕೋಟ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಹಟ್ಟಿಯಂಗಡಿ ಸಿದ್ದಿ ವಿನಾಯಕ ದೇವಸ್ಥಾನ, ನಂತರ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಗಳಿಗೆ ಭೇಟಿ ನೀಡಿದರು. ಬುಧವಾರ ರಾತ್ರಿ ಅವರು

Send this to a friend