ತುಮಕೂರು- ಚಕ್ರವರ್ತಿ ಗೆಳೆಯರ ಬಳಗ ತುಮಕೂರು ಇವರ ಆಶ್ರಯದಲ್ಲಿ,ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಸವಿನೆನಪಿಗಾಗಿ,ತುಮಕೂರಿನಲ್ಲಿ ಆಯೋಜಿಸಲಾದ 5 ನೇ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು,ಹಿರಿಯ ಕ್ರೀಡಾಪಟು ಮತ್ತು ಕ್ರೀಡಾ ಪ್ರೋತ್ಸಾಹಕರಾದ ಶ್ರೀಯುತ.ಪಿ.ಎನ್.ಕೃಷ್ಣಮೂರ್ತಿ ಇವರನ್ನು ಅದ್ಧೂರಿಯಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ತುಮಕೂರು ಗ್ರಾಮಾಂತರ ಶಾಸಕರಾದ ಗೌರಿಶಂಕರ್,ಧನಿಯ ಕುಮಾರ್,ಶ್ರೀಧರ್,
ಪ್ರೊ.ಕಿರಣ್,ಚಕ್ರವರ್ತಿ ಗೆಳೆಯರ ಬಳಗದ ನಾಯಕ ಪ್ರಕಾಶ್.ಟಿ.ಸಿ ಮತ್ತು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಚಕ್ರವರ್ತಿ ಪಂದ್ಯಾಟದ ಪ್ರಥಮ ನಗದು ಬಹುಮಾನವನ್ನು ಪ್ರಾಯೋಜಿಸಿ,ಪುತ್ರಿ ಮತ್ತು ಅಳಿಯ,ಕುಟುಂಬ ಸಮೇತರಾಗಿ ಆಗಮಿಸಿದ್ದರು.ಪಂದ್ಯ ಮುಗಿಯುವ ವೇಳೆ ಬೆಳಗ್ಗಿನ ಜಾವ 3 ಗಂಟೆಯಾದರೂ,ಸ್ವಲ್ಪವೂ ಕದಲದೇ ಪಂದ್ಯಾಟ ಸಂಪೂರ್ಣ ವೀಕ್ಷಿಸಿ,ಪ್ರಶಸ್ತಿ ವಿತರಿಸಿ ನಿರ್ಗಮಿಸಿದರು.
ಇವರು ಕಳೆದ ಹಲವಾರು ವರ್ಷಗಳಿಂದ ಚಕ್ರವರ್ತಿ ಗೆಳೆಯರ ಬಳಗದೊಂದಿಗೆ ಪ್ರತಿಯೊಂದು ಪಂದ್ಯಕ್ಕೂ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ.