ಉದ್ಯಾವರ-ರಾಜ್ಯದ ಶಿಸ್ತುಬದ್ಧ ಸಂಸ್ಥೆಯೆಂದೇ ಪ್ರಸಿದ್ಧಿ ಗಳಿಸಿದ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ 2024-26 ನೇ ಸಾಲಿನ ಅಧ್ಯಕ್ಷರಾಗಿ ಸಂದೀಪ್ ಕುಂದರ್ ಆಯ್ಕೆಯಾಗಿದ್ದಾರೆ.
ಸಂದೀಪ್ ಕುಂದರ್ ಬಾಲ್ಯದ ದಿನದಿಂದಲೇ ಸಂಸ್ಥೆಯ ಸದಸ್ಯರಾಗಿದ್ದು,ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ತಂಡದ ಪ್ರಮುಖ ಆಟಗಾರನಾಗಿ ಹಲವಾರು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು.ಸಂಸ್ಥೆಯ ಪ್ರತಿಯೊಂದು ಸಾಮಾಜಿಕ ಕೈಂಕರ್ಯದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಶ್ರೀ ವೆಂಕಟರಮಣ ಭಜನಾ ಮಂದಿರ ಪಿತ್ರೋಡಿ (ರಿ) ಇದರ ಅಂಗಸಂಸ್ಥೆಯಾದ ಈ ಸಂಸ್ಥೆ ತನ್ನ 37 ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.
*ನೂತನ ಪದಾಧಿಕಾರಿಗಳು*
ಗೌರವ ಅಧ್ಯಕ್ಷರು-ಗೋಪಾಲ ಅಮೀನ್, ಚಂದ್ರ ಬಂಗೇರ, ಅಧ್ಯಕ್ಷರು-ಸಂದೀಪ್ ಕುಂದರ್, ಉಪಾಧ್ಯಕ್ಷರು-ವಿಜಯ್ ಕೋಟ್ಯಾನ್, ಕಾರ್ಯದರ್ಶಿ-ಪ್ರಕಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿ -ಹರಿಶ್ಚಂದ್ರ, ಕೋಶಾಧಿಕಾರಿ -ಲೋಕೇಶ್ ಸುವರ್ಣ,ಕ್ರೀಡಾ ಕಾರ್ಯದರ್ಶಿ-ಪ್ರವೀಣ್ ಕುಮಾರ್, ಕ್ರೀಡಾ ಜೊತೆ ಕಾರ್ಯದರ್ಶಿ-ಸುರೇಶ್, ಸಾಂಸ್ಕೃತಿಕ ಕಾರ್ಯದರ್ಶಿ -ಉಮೇಶ್ ಕರ್ಕೇರ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ-ಶಶಿಕಾಂತ್,ಗೌರವ ಸಲಹೆ ಗಾರರು-ಜಿತೇಂದ್ರ ಶೆಟ್ಟಿ,ನವೀನ್ ಸಾಲ್ಯಾನ್,ಉದಯ ಕುಮಾರ್, ಸತೀಶ್ ಕುಂದರ್, ಸಂತೋಷ್ ಕುಂದರ್,ಗಂಗಾಧರ್ ಕರ್ಕೇರ,ರೋಯ್,ರಕ್ಷಿತ್,ವಾಸು ಸಾಲ್ಯಾನ್, ನಾಗೇಶ್ ಮೈಂದನ್,ಕಮಿಟಿ ಸದಸ್ಯರಾಗಿ -ಕಿರಣ್ ಕೋಟ್ಯಾನ್,ಅನಿಲ್ ಕೋಟ್ಯಾನ್,ಯುವರಾಜ್ ಸಾಲ್ಯಾನ್,ಸಂತೋಷ್ ಕೋಟ್ಯಾನ್,ಪದ್ಮನಾಭ ಬಂಗೇರ, ಜಗದೀಶ್ ಕೋಟ್ಯಾನ್,ರಾಲ್ವಿನ್ ,ಜುನೈದ್ ಆಯ್ಕೆಯಾಗಿದ್ದಾರೆ.