ಬ್ರಹ್ಮಾವರ : “ಕ್ರೀಡೆ ಅನ್ನುವುದು ನಿರಂತರ ಅಭ್ಯಾಸದಿಂದ ಆರಂಭಗೊಂಡು, ಸಾಮಾನ್ಯ ವ್ಯಕ್ತಿಯೋರ್ವನು ಕೂಡ ಅಸಾಮಾನ್ಯ ಸಾಧನೆಯೊಂದಿಗೆ ತನ್ನ ಬಹುದೊಡ್ಡ ಆಸ್ತಿಯನ್ನಾಗಿಸಿಕೊಳ್ಳಬಲ್ಲ ಶಕ್ತಿ ಹೊಂದಿದೆ, ಪ್ರತಿ ಕಠಿಣ ಪ್ರಯತ್ನವು ಫಲದ ನೆರಳಾಗಿ ಮುಂದೊಂದು ದಿನ ನಮ್ಮನ್ನು ಕ್ರೀಡೆಯೊಂದಿಗೆ ವಿಶ್ವವೇ ಕೊಂಡಾಡುವಂತೆ ಬೆಳೆಸಿ ಮುನ್ನಡೆಸುವ ಮಹಾನ್ ಶಕ್ತಿ ಕ್ರೀಡೆ ಗಿದೆ, ಸೋಲು ಗೆಲುವು ಸಾಮಾನ್ಯವಾದರೂ ಸೋತವರು ಕುಗ್ಗದೆ, ಗೆದ್ದವರು ಬೀಗದೆ ಮುನ್ನಡೆಯುತ್ತ ಮತ್ತೆ ಮುಂದಿನ ಹಂತದ ಕಠಿಣ ತಯಾರಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ಮುಂದಿನ ಗೆಲುವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬ್ರಹ್ಮಾ ವರದ ಎಸ್ ಎಂ ಎಸ್ ಕಾಲೇಜು ಮೈದಾನದಲ್ಲಿ ನಡೆದ ಅಖಿಲ ಭಾರತ ಮಹಿಳಾ ಟಿ ಟ್ವೆಂಟಿ ಕರಾವಳಿ ಪ್ರೀಮಿಯರ್ ಲೀಗ್ – 2025 ರ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕರಾದ ಯಶಪಾಲ್ ಸುವರ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಆಯೋಜಕರು, ಹಾಗೂ ಕೋಚ್ ಆದ ಲಿಂಗಪ್ಪ.ಬಿ ಹಾಗೂ ಎಸ್.ಎಮ್.ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್ ಅವರು ಮಾತನಾಡುತ್ತಾ “ಇಲ್ಲಿಯವರೆಗೂ ವಿವಿಧ
ಪ್ರಕಾರಗಳ ಟೂರ್ನಮೆಂಟ್ ಗಳನ್ನು ಆಯೋಜನೆ ಮಾಡಿದ್ದೆವಾದರೂ ಮಹಿಳಾ ಟಿ ಟ್ವೆಂಟಿ ಒಂದು ಹೊಸ ಪ್ರಯೋಗವಾಗಿ ಆಯೋಜನೆಗೊಳಿಸಿ ಯಶಸ್ವಿಯಾಗಿ ಸಂಪನ್ನಗೊಳಿಸಿದ ಆತ್ಮತೃಪ್ತಿ ನಮ್ಮದು” ಎಂದು ಹರ್ಷ ವ್ಯಕ್ತ ಪಡಿಸಿದರು.
ವಿವಿಧ ರಾಜ್ಯಗಳಿಂದ ಆಗಮಿಸಿದ 8 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಬಲಿಷ್ಠ ತೆಲಂಗಾಣ ತಂಡವನ್ನು ಆತಿಥೇಯ ತಂಡ ಕರ್ನಾಟಕ ಅರ್ಬನ್ ತಂಡವು ಮಣಿಸಿ ವಿಜಯ ಪತಾಕೆಯನ್ನು ಹಾರಿಸಿತು, ತೆಲಂಗಾಣ ತಂಡ ರನ್ನರ್ ಅಪ್ ಗೆ ತೃಪ್ತಿ ಪಟ್ಟುಕೊಂಡರೆ 3 ನೇ ಸ್ಥಾನಿಗರಾಗಿ ವಿದರ್ಭ ಹಾಗೂ ಚತುರ್ಥ ಸ್ಥಾನವನ್ನು ಗುಜರಾತ್ ತಂಡ ತಮ್ಮದಾಗಿಸಿಕೊಂಡರು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ, ಪ್ರೋ. ಎಂ ಸಿ ಮಥಯಿಸ್, ರಾಜೇಶ್ ಶೆಟ್ಟಿ, ಸಂದೀಪ್ ಆರ್, ಬಿಜು ನಾಯರ್,ಸುಧಾಕರ್ ಕೊಟ್ಟಾರಿ, ಮಹೇಶ್ ಶೆಟ್ಟಿ, ಚೇತನ್ ಶೆಟ್ಟಿ ಎನ್.ನಾರಾಯಣ,ಪ್ರಸಾದ್ ಬ್ರಹ್ಮಾವರ,ಮಂಜುನಾಥ್, ಶಬೀರ್ ನವಾಬ್, ನಿತ್ಯಾನಂದ ಬಿ ಆರ್, ಅಲನ್ ರೋಹಿತ್,ರೋಹನ್ ರೋಡ್ರಿಗಸ್,ಸುರೇಶ್ ಮಂಗಳೂರು,ಲಕ್ಷ್ಮೀದಾಸ್ ಮಂಗಳೂರು,ಪ್ರವೀಣ್ ಡಿಸೋಜಾ,ಎಸ್.ಎಮ್.ಎಸ್ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜೋಮೋಳ್ ಕೆ.ವೈ,ಬಾಲಕೃಷ್ಣ ಮಣಿಪಾಲ್,ಜಯಕೃಷ್ಣ ಬ್ರಹ್ಮಾವರ,ರತ್ನಾಕರ ಶೆಟ್ಟಿ ಬ್ರಹ್ಮಾವರ,ಬಿ.ಬಿ.ಸಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಕಿಶನ್ ಕುಮಾರ್ ಬಿರ್ತಿ,ಗೌರವ ಸಲಹೆಗಾರರಾದ ಶ್ಯಾಮರಾಜ್ ಬಿರ್ತಿ,ಸಿರಿಲ್ ಡಿಸೋಜಾ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.ಬಿ.ಬಿ.ಸಿ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಶಶಿರಾಜ್ ಸಮಾರೋಪ ಸಮಾರಂಭ ನಿರೂಪಿಸಿದರು.