ಕ್ರಿಕೆಟ್ಹಾಗಾದರೆ, ವಿರಾಟ್ ಕೊಹ್ಲಿಯನ್ನು ಹಣಿಯಲೆಂದೇ ತಂದ ನಿಯಮ ಈಗೆಲ್ಲಿ ಹೋಯಿತು..?

ಹಾಗಾದರೆ, ವಿರಾಟ್ ಕೊಹ್ಲಿಯನ್ನು ಹಣಿಯಲೆಂದೇ ತಂದ ನಿಯಮ ಈಗೆಲ್ಲಿ ಹೋಯಿತು..?

-

- Advertisment -spot_img

ಒಬ್ಬ ಬೆಳೆಯುತ್ತಿದ್ದಾನೆ ಎಂದರೆ ಅವನನ್ನು ತುಳಿಯಲು ಹತ್ತಾರು ಮಂದಿ ನಿಂತು ಬಿಡುತ್ತಾರೆ. ತುಳಿಯಲು ನಿಂತವರನ್ನೇ ತುಳಿಯುತ್ತಾ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ದಾರಿ ತುಳಿದವನು ವಿರಾಟ್ ಕೊಹ್ಲಿ. ಇಂಥಾ ವಿರಾಟನನ್ನೂ ಅದೊಂದು ಕಾರಣ ನೀಡಿ ಬಗ್ಗಿಸಿದ್ದರು, ಮದ್ದಾನೆಯನ್ನು ಬಗ್ಗಿಸಿದಂತೆ.

ಅವತ್ತು ಯಾವ ನಿಯಮವನ್ನು ಮುಂದೊಡ್ಡಿ ವಿರಾಟ್ ಕೊಹ್ಲಿಯ ಕೈಯಿಂದ ನಾಯಕತ್ವವನ್ನು ಕಿತ್ತುಕೊಳ್ಳಲಾಗಿತ್ತೋ, ಅದೇ ನಿಯಮವನ್ನು ಕ್ರಿಕೆಟ್ ಬಾಸ್’ಗಳು ಈಗ ಕಾಲಡಿ ಹಾಕಿ ತುಳಿದು ಬಿಟ್ಟಿದ್ದಾರೆ.

2021ರಲ್ಲಿ ವಿರಾಟ್ ಕೊಹ್ಲಿ ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸಿದಾಗ ಹಲವರು ಸಹಜವಾಗಿಯೇ ಹುಬ್ಬೇರಿಸಿದ್ದರು. ಭಾರತ ಕ್ರಿಕೆಟ್ ತಂಡದ most successful captain (ಐಸಿಸಿ ಟ್ರೋಫಿ ಗೆಲ್ಲಲಿಲ್ಲ ಎಂಬುದನ್ನು ಬದಿಗಿಟ್ಟು) ಹೀಗೇಕೆ ಮಾಡಿದ ಎಂಬ ಅಚ್ಚರಿ ಹಲವರಿಗೆ.

ಆದರೆ ಕೊಹ್ಲಿ clear ಆಗಿ ಹೇಳಿದ್ದ ಅವತ್ತು. ‘ನನ್ನ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಟಿ20 ತಂಡದ ನಾಯಕತ್ವ ತ್ಯಜಿಸುತ್ತಿದ್ದೇನೆ’ ಎಂದು. ಟಿ20 ಕ್ರಿಕೆಟ್’ನಲ್ಲಿ ಆಟಗಾರನಾಗಿದ್ದುಕೊಂಡು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್’ನಲ್ಲಿ ನಾಯಕನಾಗಿ ಮುಂದುವರಿಯುವುದು ವಿರಾಟ್ ಕೊಹ್ಲಿಯ ಲೆಕ್ಕಾಚಾರವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ವಿರಾಟನ ತಲೆಯಿಂದ ಏಕದಿನ ನಾಯಕತ್ವದ ಕಿರೀಟವೂ ಕಳಚಿ ಬಿಟ್ಟಿತ್ತು.. ಅಲ್ಲಲ್ಲ.. ಆ ಕಿರೀಟವನ್ನು ಕಸಿದುಕೊಂಡು ಬಿಟ್ಟರು. ವಿರಾಟ್ ಏಕದಿನ ಕ್ರಿಕೆಟ್’ನಲ್ಲಿ ನಾಯಕನಾಗಿ ಮುಂದುವರಿಯಲು ಬಯಸಿದಾಗ ‘’ಇಲ್ಲ, ಇಲ್ಲ.. ವೈಟ್ ಬಾಲ್ ಕ್ರಿಕೆಟ್’ನಲ್ಲಿ ಇಬ್ಬರು ನಾಯಕರಿರಲು ಸಾಧ್ಯವೇ ಇಲ್ಲ’’ ಎಂದ ಬಿಸಿಸಿಐ, ಕೊಹ್ಲಿ ಜೊತೆ ಚರ್ಚೆಯನ್ನೇ ನಡೆಸದೆ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ಬಿಟ್ಟಿತ್ತು. ಬಿಸಿಸಿಐನ ಏಕಪಕ್ಷೀಯ ನಿರ್ಧಾರದಿಂದ ನೊಂದುಕೊಂಡ ವಿರಾಟ್ 2022ರ ಜನವರಿ 16ರಂದು ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿ ಬಿಟ್ಟ.

ಆದರೆ ಈಗ…?

ಟಿ20 ಹಾಗೂ ಏಕದಿನ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಕ ಮಾಡಲಾಗಿದೆ ಮತ್ತು ಇದು ಮುಂದಿನ ವರ್ಷದವರೆಗೆ ಮುಂದುವರಿಯಲಿದೆ.

ಹಾಗಾದರೆ..
White ball cricketಗೆ ಒಬ್ಬನೇ ನಾಯಕನಿರಬೇಕೆಂಬ ಬಿಸಿಸಿಐ ನಿಲುವು ಈಗೆಲ್ಲಿ ಹೋಯಿತು..? ಅವತ್ತು ಇದೇ ಕಾರಣಕ್ಕೆ ಅಲ್ಲವೇ ಕೊಹ್ಲಿ ಕೈಯಿಂದ ಏಕದಿನ ತಂಡದ ನಾಯಕತ್ವವನ್ನು ಕಸಿದುಕೊಂಡದ್ದು..?

ಅಂದರೆ, ವಿರಾಟ್ ಕೊಹ್ಲಿಯನ್ನು ಹಣಿಯುವುದಕ್ಕೆಂದೇ 2 ವರ್ಷಗಳ ಹಿಂದೆ ಆ ನಿರ್ಧಾರ ತೆಗೆದುಕೊಳ್ಳಲಾಗಿತ್ತೇ..?

ಹೌದು.. ಅವತ್ತು ಟಿ20 ನಾಯಕತ್ವ ತ್ಯಜಿಸುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ಜೊತೆ ಚರ್ಚಿಸಿರಲಿಲ್ಲ. ಏಕಾಏಕಿ ತನ್ನ ನಿರ್ಧಾರ ಪ್ರಕಟಿಸಿ ಬಿಟ್ಟಿದ್ದ. ಬಿಸಿಸಿಐ ಕೂಡ ಅಷ್ಟೇ.. ಕೊಹ್ಲಿಯನ್ನು ಏಕಾಏಕಿ ಏಕದಿನ ತಂಡದ ನಾಯಕತ್ವದಿಂದ ಕಿತ್ತು ಹಾಕಿತ್ತು. ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದವರು ಬಂಗಾಳದ ಹುಲಿ ಸೌರವ್ ಗಂಗೂಲಿ. ನಾಯಕರಾಗಿದ್ದಾಗ ಪ್ರತೀ ಹಂತದಲ್ಲೂ ಆಟಗಾರರ ಬೆನ್ನಿಗೆ ನಿಲ್ಲುತ್ತಿದ್ದ, ಆಟಗಾರರಿಗಾಗಿ ಬಿಸಿಸಿಐ ಬಾಸ್’ಗಳನ್ನೇ ಎದುರು ಹಾಕಿಕೊಳ್ಳಲು ಹಿಂದೇಟು ಹಾಕದ ಗಂಗೂಲಿ, ಅದೇ ಬಿಸಿಸಿಐಗೆ ಬಾಸ್ ಆದಾಗ ತಾವೊಬ್ಬ ಕ್ರಿಕೆಟಿಗನೆಂಬುದನ್ನು ಮರೆತು ಶುದ್ಧ ಆಡಳಿತಗಾರನಾಗಿ ವರ್ತಿಸಿದ್ದರು. ಆ ದಿನ ವಿರಾಟ್ ಕೊಹ್ಲಿಯನ್ನು ಕರೆದು ‘’ಏನು ನಿನ್ನ ಸಮಸ್ಯೆ’’ ಎಂದು ಕೇಳುವ, ದಬಾಯಿಸುವ ಅಧಿಕಾರ ಮತ್ತು ಹಕ್ಕು ಸೌರವ್ ಗಂಗೂಲಿಯವರಿಗಿತ್ತು. ಕಾರಣ, ಅವರು ಭಾರತ ತಂಡದ ನಾಯಕರಾಗಿದ್ದಾಗ ಇಂಥದ್ದೇ ಸನ್ನಿವೇಶಗಳನ್ನು ಎದುರಿಸಿಕೊಂಡು ಬಂದಿದ್ದವರು. ಆದರೆ ಗಂಗೂಲಿ ಹಾಗೆ ಮಾಡಲಿಲ್ಲ.. ಇತ್ತ ವಿರಾಟ್ ಕೊಹ್ಲಿಯೂ ಹಠಕ್ಕೆ ಬಿದ್ದು ಬಿಟ್ಟ. ‘ಕರೆದು ಮಾತಾಡದ ಇವರ ಜೊತೆ ನಾನೇಕೆ ಮಾತಾಡಲಿ’ ಎಂಬ ಹಮ್ಮು ಅವನಿಗೆ.

ಅಲ್ಲಿಂದ ಶುರುವಾದ ಗಂಗೂಲಿ ಮತ್ತು ಕೊಹ್ಲಿಯ ಮನಸ್ತಾಪ ಎಲ್ಲಿಯವರೆಗೆ ಹೋಯಿತು ಎಂದರೆ ಐಪಿಎಲ್ ಪಂದ್ಯವೊಂದರಲ್ಲಿ ಇಬ್ಬರೂ ಎದುರು-ಬದುರಾದಾಗ ಮುಖ ತಿರುಗಿಸಿಕೊಂಡು ನಿಂತಿದ್ದರು.

ಕಾಲ ಬದಲಾಗುತ್ತಿದ್ದಂತೆ ಬಿಸಿಸಿಐ ನಿಲುವು ಕೂಡ ಬದಲಾಗಿದೆ. ‘ಏಕದಿನ ತಂಡದ ನಾಯಕನಾಗಿ ಮುಂದುವರಿಯುತ್ತೇನೆ’ ಎಂದು ಕೊಹ್ಲಿ ಹೇಳಿದಾಗ, white ball ಕ್ರಿಕೆಟ್’ಗೆ ಒಬ್ಬನೇ ನಾಯಕನಿರಬೇಕೆಂದು ಹೇಳಿದ್ದವರು ವರಸೆ ಬದಲಿಸಿದ್ದಾರೆ.

ಹೌದು.. ಈಗ ಎರಡೂ ತಂಡಗಳಿಗೆ ಒಬ್ಬನೇ ನಾಯಕನನ್ನು ನೇಮಕ ಮಾಡುವ ಪರಿಸ್ಥಿತಿಯಲ್ಲಿ ಬಿಸಿಸಿಐ ಕೂಡ ಇಲ್ಲ. ಕಾರಣ, ರೋಹಿತ್ ಶರ್ಮಾ T20I ಕ್ರಿಕೆಟ್’ಗೆ ವಿದಾಯ ಹೇಳಿದ್ದಾನೆ. ಟಿ20 ತಂಡಕ್ಕೆ ಹೊಸ ನಾಯಕ ಬಂದಿದ್ದಾನೆ. ಹಾಗಂತ ಏಕದಿನ ತಂಡಕ್ಕೂ ಅವನನ್ನೇ ಕ್ಯಾಪ್ಟನ್ ಮಾಡುವ ಸ್ಥಿತಿಯಿಲ್ಲ. ಆದರೆ ಇದೇ ನಿರ್ಧಾರವನ್ನೂ ಅವತ್ತೂ ತೆಗೆದುಕೊಳ್ಳುವ ಅವಕಾಶವಿತ್ತು.

ಆದರೆ ಹಾಗಾಗಲಿಲ್ಲ… ಕಾರಣ, ಆಗ ಅದು ವಿರಾಟ್ ಕೊಹ್ಲಿಗೆ ಸಂಬಂಧಿಸಿದ ವಿಚಾರವಾಗಿತ್ತು. ಕೊಹ್ಲಿಯನ್ನು ಹಣಿಯಲೆಂದೇ ಕೆಲವರು ನಿರ್ಧಾರ ಮಾಡಿ ಬಿಟ್ಟಿದ್ದರು.

ಅಂದ ಹಾಗೆ, ‘ನಾಯಕ ಕೊಹ್ಲಿ’ಯನ್ನು ಹಣಿಯುವಲ್ಲಿ ಯಶಸ್ವಿಯಾದವರಿಗೆ ‘ಆಟಗಾರ ಕೊಹ್ಲಿ’ಯನ್ನು ಹಣಿಯಲು ಸಾಧ್ಯವೇ..? ಅದು ಇವರ ಹಣೆಯಲ್ಲೇ ಬರೆದಿಲ್ಲ ಬಿಡಿ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

18 − two =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you