9.9 C
London
Tuesday, November 5, 2024
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಸ್ಟಾರ್ ಕಾಮೆಂಟೇಟರ್ಸ್ ವತಿಯಿಂದ ವೀಕ್ಷಕ ವಿವರಣೆಗಾರರಿಗಾಗಿ KTCPL ಟ್ರೋಫಿ- 2024 ಸೀಸನ್ 2

ಸ್ಟಾರ್ ಕಾಮೆಂಟೇಟರ್ಸ್ ವತಿಯಿಂದ ವೀಕ್ಷಕ ವಿವರಣೆಗಾರರಿಗಾಗಿ KTCPL ಟ್ರೋಫಿ- 2024 ಸೀಸನ್ 2

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ಉಡುಪಿಯ ಯುವ ವೀಕ್ಷಕ ವಿವರಣೆಗಾರರಾದ ಬಾನು ಪ್ರಕಾಶ್ ಪೆರಂಪಳ್ಳಿ ಮತ್ತು ಹುಸೈನ್ ಮಣಿಪುರ ಇವರು ಕಳೆದು ವರ್ಷ ರಾಜ್ಯದ ಎಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ವೀಕ್ಷಕ ವಿವರಣೆಗಾರರನ್ನು ಒಗ್ಗೂಡಿಸಿ ‘ ಸ್ಟಾರ್ ಕಾಮೆಂಟೇಟರ್ಸ್ ‘ ಎಂಬ ಗ್ರೂಪನ್ನು ರಚಿಸಿ ವೀಕ್ಷಕ ವಿವರಣೆಗಾರರಿಗೋಸ್ಕರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದರು.

ಇದೀಗ ಸ್ಟಾರ್ ಕಾಮೆಂಟೇಟರ್ಸ್ ಗ್ರೂಪ್ KTCPL ಎರಡನೇ ಆವೃತ್ತಿಗೆ ವೇದಿಕೆಯಾಗಲಿದೆ.
ಅದ್ದೂರಿಯ ‘KTCPL ಟ್ರೋಫಿ- 2024 ಸೀಸನ್ 2 ‘ ಎನ್ನುವ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಆಯೋಜಿಸಲು ಇವರು ಸನ್ನದ್ದರಾಗಿದ್ದಾರೆ. ಅಕ್ಟೋಬರ್ 1 ಮತ್ತು 2 ತಾರೀಖಿನಂದು ಉಡುಪಿಯ ದೊಡ್ಡಣ್ಣ ಗುಡ್ಡೆ ನಗರಸಭಾ ಮೈದಾನದಲ್ಲಿ ಈ ಟೂರ್ನಮೆಂಟ್ ನಡೆಯಲಿದೆ.

ಇದು ಕರ್ನಾಟಕ ರಾಜ್ಯದ ಕ್ರಿಕೆಟ್ ವೀಕ್ಷಕ ವಿವರಣೆ ಗಾರರಿಗೋಸ್ಕರ, ವೀಕ್ಷಕ ವಿವರಣೆಗಾರರಿಂದಲೇ ಆಯೋಜಿಸಿರುವ ಪಂದ್ಯಾವಳಿ. ರಾಜ್ಯದ ವಿವಿಧ ಭಾಗಗಳಿಂದ ಹಲವು ಕಾಮೆಂಟೇಟರ್ ಗಳು ಈಗಾಗಲೇ ಈ ಪಂದ್ಯಾವಳಿಯ ಬಿಡ್ಡಿಂಗ್ ಪ್ರಕ್ರಿಯೆಗಾಗಿ ನೊಂದಾಯಿಸಿಕೊಂಡಿದ್ದಾರೆ. ಹತ್ತು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು ಪ್ರತಿಯೊಂದು ತಂಡಕ್ಕೂ ಮಾಲೀಕರು, ಸಹಮಾಲೀಕರು ಮತ್ತು ಐಕಾನ್ ಆಟಗಾರರು ಇರುತ್ತಾರೆ. ಪ್ರತಿ ತಂಡಕ್ಕೂ ಆಟಗಾರರನ್ನು ಹರಾಜು ಮೂಲಕ ಆಯ್ಕೆ ಮಾಡಲಾಗಿದೆ. ವಿಜೇತರಾದವರಿಗೆ ಟ್ರೋಫಿಗಳು ಮತ್ತು ನಗದು ಬಹುಮಾನ ನಿಗದಿಗೊಳಿಸಲಾಗಿದೆ.

ಇದುವರೆಗೆ ಕೈಯಲ್ಲಿ ಮೈಕ್ ಹಿಡಿದು ವ್ಯಾಖ್ಯಾನ ನೀಡುತ್ತಿದ್ದ ಪ್ರತಿಭಾವಂತ ಕಾಮೆಂಟೇಟರ್ ಗಳು ಬ್ಯಾಟ್ ಮತ್ತು ಬಾಲ್ ಹಿಡಿದು ಈ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ. ಉಡುಪಿ, ಕುಂದಾಪುರ, ಮಂಗಳೂರು, ಮೈಸೂರ್, ಬೆಂಗಳೂರು, ಚಿಕ್ಕಮಗಳೂರು ಹೀಗೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ವೀಕ್ಷಕ ವಿವರಣೆಗಾರರು ಆಗಮಿಸಿ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ. ಆಯೋಜಕರ ಪ್ರಕಾರ, ಈ ಪಂದ್ಯಾವಳಿಯ ಉದ್ದೇಶವು ಎಲ್ಲಾ ಹಿರಿಯ ಮತ್ತು ಕಿರಿಯ ವೀಕ್ಷಕ ವಿವರಣೆಗಾರರನ್ನು ಒಗ್ಗೂಡಿಸುವುದು. ಕಳೆದ ಬಾರಿಯು ಕೂಡ ಇದೇ ತರಹದ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಸಂಘಟಕರಾದ ಬಾನು ಪ್ರಕಾಶ್ ಪೆರಂಪಳ್ಳಿ ಮತ್ತು ಹುಸೈನ್ ಮಣಿಪುರ ಇವರಿಗೆ ಸಲ್ಲುತ್ತದೆ.

ಟೆನಿಸ್ ಬಾಲ್ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪಂದ್ಯಾವಳಿಯನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸಬೇಕಾಗಿ ಸ್ಟಾರ್ ಕಾಮೆಂಟೇಟರ್ಸ್ ಗ್ರೂಪ್ ನ ಸರ್ವ ಸದಸ್ಯರು ವಿನಂತಿಸಿದ್ದಾರೆ.

Latest stories

LEAVE A REPLY

Please enter your comment!
Please enter your name here

nine + 5 =