ಸಾಧನೆ ಮಾಡಲು ಛಲ ಬೇಕು, ಮಾಡಿಯೇ ತೀರುತ್ತೇನೆ ಅನ್ನುವ ಹಠ ಇರಬೇಕು. ಸಾಧಕರಿಗೆ ಇದು ಅಸಾಧ್ಯವೇನು ಅಲ್ಲ.
ಛಲ ಮತ್ತು ಹಠ ಇವೆರಡು ಸೇರಿದರೆ ಸಾಧನೆ ಅಸಾಧ್ಯ ಅಲ್ಲ, ಇದಕ್ಕೆ ಸಾಕ್ಷಿ ಎಂಬಂತೆ ತನ್ನ ಕಿರೀಟಕ್ಕೆ ಆರನೆಯ ವಿಶ್ವ ದಾಖಲೆಯ ಗರಿಯನ್ನು ಏರಿಸಿಕೊಳ್ಳಲು ಅಣಿಯಾಗಿರುವ ಬಾಲೆ, ಐದು ವಿಶ್ವದಾಖಲೆಗಳ ಸರದಾರಿಣಿ, ನಾಟ್ಯ ಮಯೂರಿ ಬಿರುದಾಂಖಿತೆ, ಯೋಗರತ್ನ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ತನುಶ್ರೀ ಪಿತ್ರೋಡಿ ಸಾಕ್ಷಿ.
ಇದೇ ಫೆಬ್ರುವರಿ ತಿಂಗಳ ಆರನೆಯ ತಾರೀಕು ಉಡುಪಿಯ ಸಂತ ಸಿಸಿಲೀಸ್ ಸಮೂಹ ಸಂಸ್ಥೆಯ ಸಭಾಭವನದಲ್ಲಿ “Most Backwards Body Skip in One Minute” ಮಾಡುವುದರ ಮೂಲಕ Golden Book Of World Record ಮಾಡಲು ಸಜ್ಜಾಗಿದ್ದಾಳೆ.
ಅತೀ ಸಣ್ಣ ವಯಸ್ಸಿನಲ್ಲೇ ಯೋಗಾಭ್ಯಾಸ ನಿರತಳಾಗಿರುವ ಈಕೆಗೆ ಹೆತ್ತವರ ಮತ್ತು ಯೋಗ ಗುರುಗಳ ಪ್ರೋತ್ಸಾಹ ನಿರಂತರವಾಗಿ ಇರುವುದರಿಂದ ಸಾಧನೆ ಮಾಡಲು ಸಾಧ್ಯ ಎಂದು ಆಕೆ ಹೇಳುತ್ತಾಳೆ.
ತನುಶ್ರೀಯ ಕಿರೀಟಕ್ಕೆ ಆ ಗರಿಯು ಸಂದಲಿ ಇದು ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ ಪ್ರೀತಿಯ ಶುಭ ಹಾರೈಕೆ.
ಕೋಟ ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣ