ವೈದಿಕ ಕ್ರೀಡೋತ್ಸವ–2026
7ನೇ ವರ್ಷದ ವೈದಿಕ ಕ್ರೀಡೋತ್ಸವಕ್ಕೆ ಸಿದ್ಧತೆ
ಬರಿಮಾರು:
ವೈದಿಕ ಪರಂಪರೆ, ಸಂಸ್ಕೃತಿ ಹಾಗೂ ಕ್ರೀಡಾ ಮನೋಭಾವನೆಯನ್ನು ಒಗ್ಗೂಡಿಸುವ ವೈದಿಕ ಕ್ರೀಡೋತ್ಸವ–2026 ಈ ಬಾರಿ 7ನೇ ವರ್ಷದ ಸಂಭ್ರಮದೊಂದಿಗೆ ಮಾರ್ಚ್ 15ರಂದು (ಆದಿತ್ಯವಾರ) ಏಕಾದಶಿ ದಿನದಂದು ಆಯೋಜಿಸಲಾಗುತ್ತಿದೆ.
ಪ್ರತಿ ವರ್ಷವೂ ಶ್ರೀ ಮಹಾಮಾಯಾ ದೇವಸ್ಥಾನ ಬರಿಮಾರು ಮೈದಾನದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಈ ವೈದಿಕ ಕ್ರೀಡೋತ್ಸವವು ವೈದಿಕ ಕ್ರೀಡಾಪಟುಗಳಲ್ಲಿ ಶಿಸ್ತು, ಆರೋಗ್ಯ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶ ಹೊಂದಿದ್ದು, ಈ ಬಾರಿಯೂ ಕ್ರಿಕೆಟ್ ಟೂರ್ನಮೆಂಟ್ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳ ಮೂಲಕ ವಿಶಿಷ್ಟವಾಗಿ ಜರಗಲಿದೆ.

ಈ ಕ್ರೀಡೋತ್ಸವಕ್ಕೆ ಸಂಬಂಧಿಸಿದ ಆಟಗಾರರ ನೋಂದಣಿ ಪ್ರಕ್ರಿಯೆಯನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಆಯೋಜಕರಾದ ಪಂಡಿತ್ ಕಾಶಿನಾಥ್ ಆಚಾರ್ಯ ಇವರು ತಿಳಿಸಿದ್ದಾರೆ. ಸ್ಪರ್ಧೆಗಳ ವಿವರಗಳು, ಭಾಗವಹಿಸುವ ಅರ್ಹತೆ, ನೋಂದಣಿ ವಿಧಾನ ಹಾಗೂ ಬಹುಮಾನಗಳ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ವೈದಿಕ ಕ್ರೀಡೋತ್ಸವ–2026ಕ್ಕೆ ಕ್ರೀಡಾಭಿಮಾನಿಗಳು ಹಾಗೂ ಭಾಗವಹಿಸಲು ಆಸಕ್ತರಾದವರು ಹೆಚ್ಚಿನ ಮಾಹಿತಿಗಾಗಿ ಮುಂದಿನ ಪ್ರಕಟಣೆಗಳನ್ನು ಗಮನಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.