ಕ್ರಿಕೆಟ್ಆರ್.ಸಿ.ಬಿ ಯಾವತ್ತೂ ಮರೆಯದ..ಮರೆಯಲಾಗದ.. ಮರೆಯಬಾರದ ಮಾಣಿಕ್ಯ..!

ಆರ್.ಸಿ.ಬಿ ಯಾವತ್ತೂ ಮರೆಯದ..ಮರೆಯಲಾಗದ.. ಮರೆಯಬಾರದ ಮಾಣಿಕ್ಯ..!

-

- Advertisment -spot_img

ಆರ್.ಸಿ.ಬಿ ಯಾವತ್ತೂ ಮರೆಯದ..ಮರೆಯಲಾಗದ.. ಮರೆಯಬಾರದ ಮಾಣಿಕ್ಯ..!

ಅವನ ಜೀವನವೇ ಹೋರಾಟ.. ಕೈ ಹಿಡಿದ ಪತ್ನಿಯಿಂದ ಮೋಸ..
ಪ್ರಾಣ ಸ್ನೇಹಿತನಿಂದ ನಂಬಿಕೆ ದ್ರೋಹ.. ಜೀವನವನ್ನೇ ಕೊನೆಗಾಣಿಸಿ ಬಿಡಬೇಕೆಂಬ ಜಿಗುಪ್ಸೆ.. ಹತಾಶೆ.. ಮನೆಯ ನಾಲ್ಕು ಗೋಡೆಗಳ ಮಧ್ಯೆ ತನ್ನನ್ನು ಬಂಧಿಸಿಕೊಂಡು ಪ್ರತೀ ದಿನ ಮಾನಸಿಕ ಚಿತ್ರಹಿಂಸೆ ಅನುಭವಿಸಿದ್ದವನು ಅಲ್ಲಿಂದ ಎದ್ದು ಬಂದು ಇಟ್ಟ ಒಂದೊಂದು ಹೆಜ್ಜೆಯೂ ಚರಿತ್ರೆ..

ಆಟಗಾರನಾಗಿ ಕ್ರಿಕೆಟ್ ಬದುಕಿನ ಕೊನೆಯ ಅಧ್ಯಾಯ ಆರಂಭಿಸಿದ್ದವನಿಗೆ ಅವಕಾಶ ಕೊಟ್ಟದ್ದು ರಾಯಲ್ ಚಾಲೆಂಜರ್ಸ್..

ಬೆಂಗಳೂರು ಬಳಗ ಸೇರಿಕೊಂಡವನು ಹೊಸ ಇತಿಹಾಸವನ್ನೇ ಬರೆದು ಬಿಟ್ಟ. ಅಲ್ಲಿಂದ ಒಂದು ಹೆಜ್ಜೆ ಮುಂದಿಟ್ಟವನು ನಂಬಲಸಾಧ್ಯ ರೀತಿಯಲ್ಲಿ ಭಾರತ ಪರ 12 ವರ್ಷಗಳ ನಂತರ ಟಿ20 ವಿಶ್ವಕಪ್ ಆಡಿದ.. ಮತ್ತೆರಡು ವರ್ಷ ಆರ್.ಸಿ.ಬಿ ಪರ ಆಟ.. ಕಳೆದ ವರ್ಷ ನಿವೃತ್ತಿ ಘೋಷಿಸಿದವನು ರಾಯಲ್ ಚಾಲೆಂಜರ್ಸ್ ತಂಡದ ಮಾರ್ಗದರ್ಶಕ ಜವಾಬ್ದಾರಿ ಹೊತ್ತುಕೊಳ್ಳುತ್ತಾನೆ.

ಆ ಕ್ಷಣ ಮತ್ತದೇ ಕುಹಕ, ಮತ್ತದೇ ಮೂದಲಿಕೆ..
‘’17 ವರ್ಷಗಳಲ್ಲಿ ಎಂತೆಂಥವರ ಕೈಯಲ್ಲಿ ಏನೂ ಆಗಲಿಲ್ಲ, ಈಗ ಇವನೇನು ಮಾಡಿಯಾನು..?’ ಎಂದವರಿಗೆ ಉತ್ತರ ಕೊಟ್ಟಿದ್ದಾನೆ ಅವನು.. ಅಂದ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿದವನ ಹೆಸರು ಡಿ.ಕೆ.. ದಿನೇಶ್ ಕಾರ್ತಿಕ್..

ರಾಯಲ್ ಚಾಲೆಂಜರ್ಸ್’ನ ಯಶೋಗಾಥೆಯ ಶ್ರೇಯಸ್ಸು ನಿಸ್ಸಂದೇಹವಾಗಿ ಆಟಗಾರರದ್ದು. ಆದರೆ ಒಬ್ಬ ಡಿ.ಕೆ ಸಾಹೇಬನ ಪಾತ್ರವನ್ನು ಮರೆತು ಬಿಟ್ಟರೆ ಅದು ಸಾಧುವಲ್ಲ.

‘’17 ವರ್ಷಗಳಲ್ಲಿ ಆಗದ್ದು ಈಗೇಕೆ ಸಾಧ್ಯವಾಯಿತು’’ ಎಂಬ ಪ್ರಶ್ನೆಗೆ ಉತ್ತರ ದಿನೇಶ್ ಕಾರ್ತಿಕ್.
ಮೆಂಟರ್ ಆಗಿ ಆರ್.ಸಿ.ಬಿ ತಂಡದಲ್ಲಿ ಹೊಸ ಜವಾಬ್ದಾರಿಗೆ ಹೆಗಲಾಗಿದ್ದ ಡಿ.ಕೆ ಪ್ಲಾನ್ ಆಫ್ ಆ್ಯಕ್ಷನ್ ಸ್ಪಷ್ಟ ಇತ್ತು. ಪ್ರತೀ ಬಾರಿ ದೊಡ್ಡ ಸ್ಟಾರ್’ಗಳ ಹಿಂದೆ ಬಿದ್ದು ಅವರಿಗೆ ಕೋಟಿ ಕೋಟಿ ಸುರಿದು ಕೈ ಸುಟ್ಟುಕೊಳ್ಳುತ್ತಿದ್ದ ಆರ್.ಸಿ.ಬಿ ಈ ಬಾರಿ ಆ ತಪ್ಪು ಮಾಡಲಿಲ್ಲ. ಕಾರಣ, ಅಲ್ಲಿ ದಿನೇಶ್ ಕಾರ್ತಿಕ್ ಕುಳಿತಿದ್ದ.

‘’ಖ್ಯಾತಿಗಿಂತ ಕೌಶಲ್ಯ ಮುಖ್ಯ’’ ಎಂಬ ಸತ್ಯವೇ ಆರ್.ಸಿ.ಬಿಯನ್ನು ಈ ಬಾರಿ ಚಾಂಪಿಯನ್ ಆಗಿಸಿದ್ದು. ಅದಿಲ್ಲದೇ ಹೋಗಿದ್ದರೆ ಒಬ್ಬ ಕೃಣಾಲ್ ಪಾಂಡ್ಯ, ಒಬ್ಬ ಭುವನೇಶ್ವರ್ ಕುಮಾರ್, ಒಬ್ಬ ಜಿತೇಶ್ ಶರ್ಮಾ, ಒಬ್ಬ ಫಿಲ್ ಸಾಲ್ಟ್, ಒಬ್ಬ ಸುಯಾಶ್ ಶರ್ಮಾ ಆರ್.ಸಿ.ಬಿ ತಂಡ ಸೇರಿಕೊಳ್ಳಲು ಸಾಧ್ಯವೇ ಇರಲಿಲ್ಲ.
ಇದರ ಸಂಪೂರ್ಣ ಶ್ರೇಯ ಸಲ್ಲಬೇಕಿರುವುದು ದಿನೇಶ್ ಕಾರ್ತಿಕ್’ಗೆ.

ಮತ್ತೊಂದು ವಿಚಾರವನ್ನು ಇಲ್ಲಿ ಹೇಳಲೇಬೇಕು. ಹಿಂದೊಮ್ಮೆ ಆರ್.ಸಿ.ಬಿ ಪರ ಆಡಿ 2016ರ ಫೈನಲ್ ಸೋಲಿಗೆ ಕಾರಣನಾಗಿದ್ದ ಶೇನ್ ವಾಟ್ಸನ್ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್’ಗೆ ಕಪ್ ಗೆಲ್ಲಿಸುತ್ತಾನೆ. ‘ಆರ್.ಸಿ.ಬಿಗೂ ಸಿ.ಎಸ್.ಕೆಗೂ ಏನು ವ್ಯತ್ಯಾಸ’ ಎಂದು ಕೇಳಿದ ಪ್ರಶ್ನೆಗೆ ಆತ ಕೊಟ್ಟ ಉತ್ತರವೇನು ಗೊತ್ತೇ..? ‘’ಅಲ್ಲಿ ನನ್ನ ಪಾತ್ರದ ಬಗ್ಗೆ, ಜವಾಬ್ದಾರಿ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇಲ್ಲಿ ಆ ಸ್ಪಷ್ಟತೆ ಇದೆ’’ ಎಂದು.

ಈ ಬಾರಿ ಆರ್.ಸಿ.ಬಿ ಆಟಗಾರರಿಗೆ ಆ ಸ್ಪಷ್ಟತೆಯನ್ನು ದಿನೇಶ್ ಕಾರ್ತಿಕ್ ಸ್ಪಷ್ಟವಾಗಿ ಕೊಟ್ಟು ಬಿಟ್ಟಿದ್ದ. ಫಲಿತಾಂಶ ಕಣ್ಣ ಮುಂದೆಯೇ ಇದೆ.

 

LEAVE A REPLY

Please enter your comment!
Please enter your name here

seventeen − 8 =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you