ಬೆಂಗಳೂರು- ಮೋದಿ ಕ್ರಿಕೆಟ್ ಕಪ್ 2023 ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 16 ರಿಂದ 17 ರವರೆಗೆ ಬೆಂಗಳೂರಿನ ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ (ಶಾಲಿನಿ) ಮೈದಾನದಲ್ಲಿ ನಡೆಯಲಿದೆ.
ಈ ಕ್ರಿಕೆಟ್ ಪಂದ್ಯಾವಳಿಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ತೇಜಸ್ವಿ ಸೂರ್ಯರವರು ಆಯೋಜಿಸಿದ್ದಾರೆ.
ಇದು ಉಚಿತ ಪ್ರವೇಶ ಶುಲ್ಕ ಹೊಂದಿರುವ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯಾಗಿದ್ದು,ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರ ಸಾರಥ್ಯದಲ್ಲಿ ನಡೆಯಲಿದೆ. ದಕ್ಷಿಣ ಬೆಂಗಳೂರಿನಾದ್ಯಂತ ಒಟ್ಟು 64 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಪ್ರತಿ ತಂಡದಲ್ಲೂ ಕರ್ನಾಟಕದ 3 ಐಕಾನ್ ಆಟಗಾರರು ಪ್ರತಿನಿಧಿಸಲಿದ್ದಾರೆ. ಪಂದ್ಯಾವಳಿಯು ನಾಲ್ಕು ಬೇರೆ ಬೇರೆ ಮೈದಾನಗಳಲ್ಲಿ ನಡೆಯಲಿದೆ.
ಪಂದ್ಯಾವಳಿಯ ವಿಜೇತರು ಟ್ರೋಫಿ ಮತ್ತು 1,00,000 ನಗದು ಬಹುಮಾನವನ್ನು ಪಡೆಯುತ್ತಾರೆ. ರನ್ನರ್ಸ್ ಅಪ್ ತಂಡವು 50,000 ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆಯುತ್ತದೆ. ಮ್ಯಾನ್ ಆಫ್ ದಿ ಸೀರೀಸ್ ಆಟಗಾರ, ಅತ್ಯುತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಆಕರ್ಷಕ ಟ್ರೋಫಿಯನ್ನು ಪಡೆಯುತ್ತಾರೆ. ನಾಕೌಟ್ ಪಂದ್ಯಾವಳಿಯಲ್ಲಿ ವಿಜೇತರ ಟ್ರೋಫಿಗಾಗಿ ಒಟ್ಟು 64 ತಂಡಗಳು ಸೆಣಸಲಿವೆ. ಬಸವನಗುಡಿ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಚಿಕ್ಕಪೇಟೆ, ಗೋವಿಂದರಾಜ ನಗರ, ಜಯನಗರ, ಪದ್ಮನಾಭನಗರ, ವಿಜಯನಗರ ಅಸೆಂಬ್ಲಿ ಕಾನ್ಸ್ಟಿಟ್ಯೂಷನ್ ಗೆ ಸೇರಿದ ಆಟಗಾರರ ತಂಡಗಳು ಭಾಗವಹಿಸಲಿವೆ. ಚಂದ್ರಗುಪ್ತ ಮೌರ್ಯ (ಶಾಲಿನಿ) ಮೈದಾನದಲ್ಲಿ ನಡೆಯುವ ಪಂದ್ಯಗಳನ್ನು ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ವಿವೇಕ್ ಗೌಡ @ 9611260592 ಅಥವಾ ಪವನ್ ವಸಿಷ್ಠ @ 9611018831 ಇವರನ್ನು ಸಂಪರ್ಕಿಸಬಹುದಾಗಿದೆ.