ಕ್ರಿಕೆಟ್ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ; NIPM ಮಂಗಳೂರು ಚಾಪ್ಟರ್‌ನಿಂದ...

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ; NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ

-

- Advertisment -spot_img

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ

NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ

ಮಂಗಳೂರು:
ಮಾನವ ಸಂಪನ್ಮೂಲ ಕ್ಷೇತ್ರದ ಪ್ರಮುಖ ಸಂಘಟನೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (NIPM) ಮಂಗಳೂರು ಚಾಪ್ಟರ್ ವತಿಯಿಂದ ಎರಡು ದಿನಗಳ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಕಾರ್ಪೊರೇಟ್ ಕ್ರಿಕೆಟ್ ಟೂರ್ನಿ ಭರ್ಜರಿಯಾಗಿ ಆರಂಭಗೊಂಡಿದೆ. ಮಂಗಳೂರಿನ ಎನ್‌ಎಂಪಿಎ (NMPA) ಮೈದಾನದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಹಲವು ಪ್ರಮುಖ ಕಂಪನಿಗಳ ತಂಡಗಳು ಭಾಗವಹಿಸಿ ಕ್ರೀಡಾ ಮನೋಭಾವವನ್ನು ಮೆರೆದಿವೆ.

ಈ ಟೂರ್ನಿಗೆ ONGC MRPL, BASF – The Chemical Company, Chair Studio ಮತ್ತು GAIL–GMPL ಸಂಸ್ಥೆಗಳು ಪ್ರಾಯೋಜಕರಾಗಿ ಸಹಕಾರ ನೀಡಿವೆ.

ಪಂದ್ಯಾವಳಿಯಲ್ಲಿ ದಿ ಮಣಿಪಾಲ್ ಗ್ರೂಪ್ – ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್,   ರೊಬೋಸಾಫ್ಟ್ (Emotion Engineering & Design), ಪ್ರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ ಕ್ರಿಕೆಟ್ ಕ್ಲಬ್, MRPL, ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ, ಸಿಂಜೆನ್, ಕ್ಯಾಂಪ್ಕೋ 11, ಕಾರ್ಡೊಲೈಟ್ – Chemistry for Tomorrow, ಸೊಲಾರಾ – Active Pharma Science, ಐಡಿಯಲ್ ಚಿಕನ್ – Fresh N Tasty, EML – ಈಸ್ವರಿ ಗ್ಲೋಬಲ್ ಮೆಟಲ್ ಇಂಡಸ್ಟ್ರೀಸ್ ಲಿಮಿಟೆಡ್, ಆಳ್ವಾಸ್ ಎಜುಕೇಶನ್ ಫೌಂಡೇಶನ್, GAIL–GMPL, ಕೋಂಕಣ್ ಸ್ಪೆಶೆಲಿಟಿ ಪಾಲಿ ಪ್ರೋಡಕ್ಟ್ಸ್ ಪ್ರೈವೆಟ್ ಲಿಮಿಟೆಡ್, ಎ.ಜೆ. ಹಾಸ್ಪಿಟಲ್ ಹಾಗೂ ಕೆನರಾ ಲೈಟಿಂಗ್ ಸೇರಿದಂತೆ ಅನೇಕ ಸಂಸ್ಥೆಗಳ ತಂಡಗಳು ಭಾಗವಹಿಸಿವೆ.

ಟೂರ್ನಿಯ ಉದ್ಘಾಟನೆಯನ್ನು ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷ ಯು.ಟಿ. ಖಾದರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಡೋ ಲೈಟ್ ಸಂಸ್ಥೆಯ ದಿವಾಕರ್ ಕದ್ರಿರೋಷನ್ ಕ್ಯಾಟಲಿನೊ (MRPL), ಹಾಗೂ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಭಾಧ್ಯಕ್ಷರು, ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲಗಳ ಮಹತ್ವ ಅಪಾರವಾಗಿದ್ದು, ಇಂತಹ ಕ್ರೀಡಾ ಕಾರ್ಯಕ್ರಮಗಳು ಸಂಸ್ಥೆಗಳ ನಡುವೆ ಸ್ನೇಹಭಾವ ಮತ್ತು ತಂಡದ ಮನೋಭಾವವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಜೊತೆಗೆ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಆಯೋಜಕರನ್ನು ಅವರು ಪ್ರಶಂಸಿಸಿದರು.

ಟೂರ್ನಿಯ ಮುಂದಿನ ಹಂತದ ಪಂದ್ಯಗಳು ಭಾನುವಾರ ನಡೆಯಲಿದ್ದು, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ನಂತರ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಟೂರ್ನಿಯ ವಿಜೇತ ತಂಡಕ್ಕೆ ₹33,333 ನಗದು ಬಹುಮಾನ ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ₹22,222 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೂ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು.

ಕಾರ್ಪೊರೇಟ್ ಕ್ಷೇತ್ರದ ಹಲವಾರು ಪ್ರಮುಖ ತಂಡಗಳು ಪಾಲ್ಗೊಂಡಿರುವ ಈ ಕ್ರಿಕೆಟ್ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬುದನ್ನು ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಟೂರ್ನಿಯ ಪ್ರಸಾರ ಹಕ್ಕುದಾರರಾಗಿ ‘ಸ್ಪೋರ್ಟ್ಸ್ ಕನ್ನಡ’ ಸಹಕರಿಸುತ್ತಿದ್ದು, ಪಂದ್ಯಾವಳಿಯ ಪ್ರಸಾರ ವ್ಯವಸ್ಥೆಗೆ ಬೆಂಬಲ ನೀಡುತ್ತಿದೆ.

 

LEAVE A REPLY

Please enter your comment!
Please enter your name here

three × 1 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you