
ಸಾಲಿಗ್ರಾಮದಲ್ಲಿ “ ವಿಶ್ವ ವೃಷ್ಠಿ ಟ್ರೋಫಿ 2026” ಕ್ರಿಕೆಟ್ ಪಂದ್ಯಾಟ – ಮಾರ್ಚ್ 14 ಮತ್ತು 15 ರಂದು ಭರ್ಜರಿ ಆಯೋಜನೆ
ಕ್ರೀಡಾಭಿಮಾನಿಗಳಿಗೆ ರೋಮಾಂಚನ ಮೂಡಿಸುವ ಕ್ರಿಕೆಟ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಸಾಲಿಗ್ರಾಮದ ವೃಷ್ಠಿ (Vrishti) ಸಂಸ್ಥೆಯ ವತಿಯಿಂದ “ವಿಶ್ವ ವೃಷ್ಠಿ ಟ್ರೋಫಿ – 2026” ಎಂಬ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 14 ಮತ್ತು 15 ರಂದು ಸಾಲಿಗ್ರಾಮದಲ್ಲಿ ನಡೆಯಲಿದೆ. ಸಂಸ್ಥೆಯ 20ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾಕೂಟವಾಗಿರಲಿದೆ.

ಈ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ತಂಡಗಳು ಭಾಗವಹಿಸಲಿವೆ. ಪಂದ್ಯಾವಳಿಯ ಒಟ್ಟು ಬಹುಮಾನ ಮೊತ್ತ ಗಮನಸೆಳೆಯುವಂತಿದ್ದು, ಪ್ರಥಮ ಬಹುಮಾನ ₹1,33,333 ಹಾಗೂ ದ್ವಿತೀಯ ಬಹುಮಾನ ₹77,777 ಎಂದು ಘೋಷಿಸಲಾಗಿದೆ. ಇದರಿಂದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ಉತ್ಸಾಹ ಹೆಚ್ಚಾಗಿದೆ.

ಮಾರ್ಚ್ 14 ರಂದು ನಡೆಯುವ ಪಂದ್ಯಗಳು open to all ಆಗಿರಲಿದ್ದು, ಮಾರ್ಚ್ 15 ರಂದು ವಿಶ್ವಕರ್ಮ ಸಮಾಜ ಭಾಂಧವರಿಗಾಗಿ ನಡೆಯಲಿದೆ.ಫೈನಲ್ ಬಳಿಕ ವೃಷ್ಠಿ ಸಂಸ್ಥೆಯ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ವಿಶೇಷ ಅತಿಥಿಗಳ ಸಮ್ಮುಖದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡವು 5 ಓವರ್‌ಗಳ ಆಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾಗುತ್ತದೆ. ಸೆಮಿಫೈನಲ್ ಪಂದ್ಯದಲ್ಲಿ ಪರಾಜಿತ ತಂಡಗಳಿಗೆ ವಿಶೇಷ ಬಹುಮಾನವೂ ನೀಡಲಾಗುತ್ತದೆ.
ಈ ಟೂರ್ನಿಯ ನೇತೃತ್ವವನ್ನು ಶ್ರೀ ವಿಜಯೇಂದ್ರ ಆಚಾರ್ಯ ವಹಿಸಿಕೊಂಡಿದ್ದು, ಸ್ಥಳೀಯ ಕ್ರೀಡಾಭಿಮಾನಿಗಳು ಮತ್ತು ಯುವಕರಿಂದ ಈ ಪಂದ್ಯಾವಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ ಕೆ.ಎಮ್.ಗಣೇಶ್ ಆಚಾರ್ಯ ಕುಂಭಾಶಿ ( 9448912173), ಮನೋಜ್ (9964479993), ಅಶ್ವಿನ್ (8553621789), ಸುಬ್ರಹ್ಮಣ್ಯ (9108199121) ಮತ್ತು ವಿಜಯೇಂದ್ರ (8296550621) ಅವರನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಸಾಲಿಗ್ರಾಮದಲ್ಲಿ ನಡೆಯಲಿರುವ ಈ ಕ್ರಿಕೆಟ್ ಹಬ್ಬ ಕ್ರೀಡಾಪ್ರಿಯರಿಗೆ ಹೊಸ ಉತ್ಸಾಹ ತುಂಬುವುದರ ಜೊತೆಗೆ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ಈ ಪಂದ್ಯಾವಳಿ ವಿಶ್ವಕರ್ಮ ಕ್ರಿಕೆಟ್ ಇತಿಹಾಸದಲ್ಲಿಯೂ ಒಂದು ಮಹತ್ವದ ಮೈಲಿಗಲ್ಲಾಗಲಿದೆ.
ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ‘ಸ್ಪೋರ್ಟ್ಸ್ ಕನ್ನಡ’ ಚಾನೆಲ್ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.




