ಬೆಂಗಳೂರು-ಇಲ್ಲಿನ ಪೀಣ್ಯ 2 ನೇ ಹಂತದ ಬಳಿ ಫ್ರೆಂಡ್ಸ್ ಬೆಂಗಳೂರು ತಂಡದ ಹೊಸದಾಗಿ ನಿರ್ಮಿಸಿದ ಮೈದಾನದಲ್ಲಿ ಆಯೋಜಿಸಿದ ದಾಖಲೆಯ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ದಿನವಾದ ಇಂದು, ಮೊದಲ ಸುತ್ತಿನ ಪಂದ್ಯದಲ್ಲಿ ಜಾನ್ಸನ್ ಹಂಗಳೂರು ಮತ್ತು ದಾವಣಗೆರೆ ಇಲೆವೆನ್ ಗೆಲುವು ದಾಖಲಿಸಿದೆ.
ಜಾನ್ಸನ್ ಕುಂದಾಪುರ-ಎಸ್.ಝಡ್.ಸಿ.ಸಿ ಬೆಂಗಳೂರು ತಂಡವನ್ನು ಹಾಗೂ ದಾವಣಗೆರೆ ಇಲೆವೆನ್ ಶ್ರೀನಿವಾಸಪುರ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದೆ.
ಜಾನ್ಸನ್ ಕುಂದಾಪುರ ಮುಂದಿನ ಪಂದ್ಯದಲ್ಲಿ ಜೈ ಕರ್ನಾಟಕ ಬೆಂಗಳೂರು ತಂಡವನ್ನು ಎದುರಿಸಲಿದ್ದು,ದಾವಣಗೆರೆ ಇಲೆವೆನ್ ಮುಂದಿನ ಪಂದ್ಯ ಕಾಮಾಕ್ಷಿ ರಾಹುಲ್ ಇಲೆವೆನ್ ತಂಡವನ್ನು ಎದುರಿಸಲಿದೆ.