ಕ್ರಿಕೆಟ್ಫಾಲ್ಕನ್ ಕ್ಲಬ್ ನ ಆಂಬುಲೆನ್ಸ್ ಸಾರ್ವಜನಿಕ ಸೇವೆಗೆ ನೀಡುವ ಸದುದ್ದೇಶ-ಇಂದಿನಿಂದ ಕುಂದಾಪುರದಲ್ಲಿ‌...

ಫಾಲ್ಕನ್ ಕ್ಲಬ್ ನ ಆಂಬುಲೆನ್ಸ್ ಸಾರ್ವಜನಿಕ ಸೇವೆಗೆ ನೀಡುವ ಸದುದ್ದೇಶ-ಇಂದಿನಿಂದ ಕುಂದಾಪುರದಲ್ಲಿ‌ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬ “ಗೋಲ್ಡನ್ ಟ್ರೋಫಿ”

-

- Advertisment -spot_img
ಕುಂದಾಪುರ-ಇಲ್ಲಿನ ತೆಕ್ಕಟ್ಟೆ ಕನ್ನುಕೆರೆ ಪರಿಸರದ ಹಿರಿಯ ತಂಡ ದಿ ಫಾಲ್ಕನ್ ಕ್ಲಬ್ ತೆಕ್ಕಟ್ಟೆ.1986 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಕರ್ನಾಟಕ ಮಾತ್ರವಲ್ಲದೇ ಕೊಲ್ಲಿ ರಾಷ್ಟ್ರಗಳಲ್ಲಿ ಕೂಡ ಊರಿನ ಆಟಗಾರರ ಫಾಲ್ಕನ್ ತಂಡ ಹೊಂದಿದ್ದು ಅನೇಕ ಕ್ರಿಕೆಟ್ ಪಂದ್ಯಾಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಹಾಗೂ ಕ್ರಿಕೆಟ್,ವಾಲಿಬಾಲ್ ಹೀಗೆ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸಿದ ಸಂಸ್ಥೆ ಕೂಡ ಹೌದು.ಕ್ರೀಡೆ ಮಾತ್ರವಲ್ಲದೇ ಸದ್ದಿಲ್ಲದೇ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಫಾಲ್ಕನ್ ತಂಡ ಬಡವರ ವೈದ್ಯಕೀಯ ನೆರವಿಗಾಗಿ ಆ್ಯಾಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿದ್ದು,ಕೊರೋನಾ ಸಂದರ್ಭ ಕೋವಿಡ್ ಸಂತ್ರಸ್ತರ ಮನೆ ಮನೆಗೆ ಕಿಟ್ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದೆ.ಬಡ ಕುಟುಂಬದ ವಿದ್ಯಾಭ್ಯಾಸಕ್ಕೂ ಕೂಡ ಈ ಸಂಸ್ಥೆ ಸಹಾಯಹಸ್ತ ನೀಡಿದೆ.
ಫಾಲ್ಕನ್ ಕ್ರಿಕೆಟ್ ಕ್ಲಬ್ ಇದೀಗ ತನ್ನ ಸೇವಾ ಪರಿಧಿಯನ್ನು ವಿಸ್ತರಿಸುವ ಸದುದ್ದೇಶ-ಆಂಬುಲೆನ್ಸ್ ವಾಹನ ಸುಸ್ಥಿತಿ ಹಾಗೂ ನಿರ್ವಹಣೆಯೊಂದಿಗೆ ಸಾರ್ವಜನಿಕ ಸೇವೆಗೆ ಉಪಯೋಗಿಸಲು
ಇಂದಿನಿಂದ (ಫೆಬ್ರವರಿ 3,4 ಮತ್ತು 5) ಕುಂದಾಪುರದ ಗಾಂಧಿಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಫಾಲ್ಕನ್ ಟ್ರೋಫಿ-2023”
ಆಯೋಜಿಸಿದ್ದಾರೆ.
ಮೂರು ದಿನಗಳ‌ ಕಾಲ‌ ಹೊನಲು ಬೆಳಕಿನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಈ ಕ್ರಿಕೆಟ್ ಪಂದ್ಯಾಟವನ್ನು ಇಂದು ಸಂಜೆ  ದೋಹಾ ಕತಾರ್ ನ ಗೋಲ್ಡನ್ ಟ್ರೇಡಿಂಗ್  ಮತ್ತು ಡೆಕೋರೇಶನ್ ನ ಮಾಲೀಕರಾದ ಅಸ್ಮತ್ ಆಲಿ ಉದ್ಘಾಟಿಸಲಿದ್ದಾರೆ.ಸಮಾಜ ಸೇವಕರು ಎಮ್.ಶಿವರಾಮ್ ಶೆಟ್ಟಿ (ಮಹಾದೇವಿ ಪ್ರಸಾದ್ ಮಲ್ಯಾಡಿ) ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಕೋಟ ರಾಮಕೃಷ್ಣ ಆಚಾರ್ ಮತ್ತು ಗಣ್ಣರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಂದು ಸುನಾಮಿ ಕಿಟ್ಟಿ ಅಭಿನಯದ “ಕೋರ” ಚಿತ್ರ ತಂಡ ಭಾಗವಹಿಸಲಿದೆ.
ಫಾಲ್ಕನ್ ಗೋಲ್ಡನ್ ಟ್ರೋಫಿ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಹೊರರಾಜ್ಯ ಮತ್ತು ಕರ್ನಾಟಕದ ಒಟ್ಟು 22 ಪ್ರತಿಷ್ಠಿತ ತಂಡಗಳು ಭಾಗವಹಿಸಲಿದ್ದು,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ಸಾಗಲಿದೆ. ಪ್ರಥಮ ಪ್ರಶಸ್ತಿ ವಿಜೇತ ತಂಡ 3,03,333 ರೂ ನಗದು,ದ್ವಿತೀಯ ಸ್ಥಾನಿ 2,02,222 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಉಡುಗೊರೆ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗುವ ಆಟಗಾರ 55,055 ರೂ ನಗದು ಬಹುಮಾನ ಪಡೆಯಲಿದ್ದಾರೆ ಎಂದು ದಿ ಫಾಲ್ಕನ್ ಕ್ಲಬ್ ಅಧ್ಯಕ್ಷ ಸಲಾಂ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

11 − 5 =

Latest news

BetPlay Casino: Juegos de Acción Rápida para el Pulso Moderno

1. Welcome to the Quick‑Hit ZoneEn una era donde una pausa para café puede convertirse en una sesión de...

Slot Bunny Casino: Your Fast‑Track Slot Experience

1. Why Short, High‑Intensity Sessions MatterSlot Bunny casino isn’t about marathon gaming marathons; it’s built for players who crave...

ಹರಿದ ಸ್ಲಿಪ್ಪರ್.. ಹರಕಲು ಸೈಕಲ್.. ಪೀಣ್ಯ to ಟೀಮ್ ಇಂಡಿಯಾ via ಚಿನ್ನಸ್ವಾಮಿ..!

ಹರಿದ ಸ್ಲಿಪ್ಪರ್.. ಹರಕಲು ಸೈಕಲ್.. ಪೀಣ್ಯ to ಟೀಮ್ ಇಂಡಿಯಾ via ಚಿನ್ನಸ್ವಾಮಿ..! ಇದು ಕರ್ನಾಟಕದ ಶ್ರೇಷ್ಠ ಕ್ರಿಕೆಟ್ ಯೋಧನ ‘ದೊಡ್ಡ’ ಕಥೆ..!   ಇವತ್ತು ಕರ್ನಾಟಕದ The most...

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ **ಮಂಗಳೂರು, ಜೂನ್ 29:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ...
- Advertisement -spot_imgspot_img

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್.

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್. ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು. ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್...

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...

Must read

- Advertisement -spot_imgspot_img

You might also likeRELATED
Recommended to you