GSB ಪ್ರೀಮಿಯರ್ ಲೀಗ್ ಕಳೆದ 7 ವರ್ಷಗಳಿಂದ ಜನರಿಗೆ ಮನರಂಜನೆ ನೀಡುತ್ತಿದೆ ಮತ್ತು ಇದು GSB ಗಳ ದೊಡ್ಡ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಜಿಪಿಎಲ್ ದೇಶದ ವಿವಿಧ ಭಾಗಗಳ 16 ಜಿಎಸ್‌ಬಿ ತಂಡಗಳ ವಿರುದ್ಧ ಪ್ಲೇಆಫ್‌ಗಳ ಹೋರಾಟವಾಗಿದೆ. ಫೆಬ್ರವರಿ ಅವಧಿಯಲ್ಲಿ ಜಿ. ಸ್. ಬಿ ಗಳಿಗೆ GPL ಪರಿಪೂರ್ಣವಾದ ಔತಣವಾಗಿದೆ. ಅನೇಕ ಯುವ ಭಾರತೀಯ GSB ಕ್ರಿಕೆಟಿಗರಿಗೆ ತಮ್ಮ ಕ್ರಿಕೆಟ್ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶಗಳನ್ನು ನೀಡಲಾಗುತ್ತದೆ ಮತ್ತು ಅನುಭವಿ ಆಟಗಾರರ ಅಡಿಯಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.ಹಾಗಾಗಿ ಇದು ಯುವ GSB ಆಟಗಾರರಿಗೆ ತಮ್ಮ ಕ್ರಿಕೆಟ್ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶಗಳನ್ನು ನೀಡುವ ಪಂದ್ಯಾವಳಿಯಾಗಿದೆ.
GPL ನಲ್ಲಿ ಕಳೆದ ಕೆಲವು ಋತುಗಳಲ್ಲಿ ಅವರ ಉತ್ತಮ ಪ್ರದರ್ಶನದ ನಂತರ ಅನೇಕ ಆಟಗಾರರನ್ನು ತಕ್ಷಣವೇ ವಿವಿಧ ಜನಪ್ರಿಯ ತಂಡಗಳಿಗೆ ಆಯ್ಕೆ ಮಾಡಲಾಯಿತು. ಡಾ.ವಿನೋದ್ ನಾಯಕ್ ಮಣಿಪಾಲ, ಶರತ್ ಪ್ರಭು ಮುಲ್ಕಿ, ಚಿರಾಗ್ ಶಾನಭಾಗ್ ಮುಂಬೈ, ಪ್ರಸಾದ್ ನಾಯಕ್ ಮುಂಬೈ, ಪದ್ಮನಾಭ ಪೈ ಕೋಟ, ವಿಘ್ನೇಶ್ ಭಟ್ ಕೋಟೇಶ್ವರ, ವಿವೇಕ್ ಕೋಟ, ಸೂರಿ ಸಾಸ್ತಾನ, ವಿಘ್ನೇಶ್ ಶೆಣೈ ಕಾರ್ಕಳ,ಪುಂಡಲೀಕ ಪೈ, ಶಿವಾನಂದ (ಅರ್ಚಿತ್) ಮುಂತಾದ ಆಟಗಾರರು ಜಿಪಿಎಲ್ ಮೂಲಕ ಜನರಲ್ಲಿ ಹೆಚ್ಚು ಜನಪ್ರಿಯರಾದರು ಮತ್ತು ಮೆಚ್ಚಿನವರಾದರು. ಜಿಎಸ್‌ಬಿ ಕೋಟಾ ಜಿಪಿಎಲ್‌ನ 1ನೇ ಆವೃತ್ತಿಯ ವಿಜೇತರು. ಪ್ರಸ್ತುತ ಮುಂಬೈ ಪಲ್ಟಾನ್ಸ್ ಎರಡು GPL ಪ್ರಶಸ್ತಿಗಳನ್ನು ಹೊಂದಿರುವ ಏಕೈಕ ತಂಡವಾಗಿದೆ. ಕೊಡಿಯಾಲ್ ಸೂಪರ್‌ಕಿಂಗ್ಸ್ ಎರಡು ಬಾರಿ ಫೈನಲ್‌ಗೆ ತಲುಪಿದ್ದರೂ, ಅವರು ಎಂದಿಗೂ ಜಿಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಮತ್ತು ಅವರು 7 ನೇ ಆವೃತ್ತಿಯ ಕಪ್ ಎತ್ತುವ ನಿರೀಕ್ಷೆಯಲ್ಲಿದ್ದಾರೆ.
ಆರ್ಚ್ ಫಾರ್ಮಲಾಬ್ಸ್ GPL ಉತ್ಸವ 2023 ಕ್ಕೆ ಇನ್ನೂ ಕೆಲವೇ ಕೆಲವು ದಿನಗಳು ಉಳಿದಿವೆ.
GPL 2023 ಟೂರ್ನಮೆಂಟ್ ನಲ್ಲಿ ಭಾಗವಹಿಸುವ ತಂಡಗಳು ಈ ರೀತಿ ಇವೆ.
1. ಒಳಲಂಕೆ ಫೈಟರ್ಸ್ರ್ ಮುಲ್ಕಿ.
2.ಅಭರಣ ಡೈಮಂಡ್ಸ್ ಉಡುಪಿ
3.ಉಡುಪಿ ಬ್ಲಾಸ್ಟರ್ಸ್
4.ಕೊಡಿಯಾಲ್ ಸೂಪರ್ ಕಿಂಗ್ಸ್
5. ಡೆಡ್ಲಿ ಪ್ಯಾಂಥರ್ಸ್ ( ರಿ) ಕೊಡಿಯಾಲ್
6. ಟೀಮ್ ಮಹಾಲಸಿ
7.ಮುಂಬೈ ಪಲ್ಟಾನ್ಸ್
8. ವೀರ ವೆಂಕಟೇಶ ವಾರಿಯರ್ಸ್ ಮಂಗಳೂರು
9.ಮಲ್ಪೆ ಯುನೈಟೆಡ್
10.UK ಏಕಾದಶ ಸಾರಸ್ವತ್
11 ಪರ್ಲ್ ಸಿಟಿ ಕ್ರಿಕೆಟರ್ಸ್ ಪುತ್ತೂರು
12. ಜಿ.ಸ್.ಜಿ ರಾಯಲ್ಸ್ ಕೊಡಿಯಾಲ್
13. ರೈಸಿಂಗ್ ಸ್ಟಾರ್ಸ್ ಮಂಗಳೂರು
14. ರಾಯಲ್ ಚಾಲೆಂಜರ್ಸ್ ಬಾಲಾಂಬೆಟ್ಟು
15. ಟೀಮ್ ABNG
16. ಜೈಕಾರ್ ಸ್ಟ್ರೈಕರ್ಸ್ರ್ ಮೂಡಬಿದ್ರಿ
ಒಳಲಂಕೆ ಫೈಟರ್ಸ್ರ್ ಮುಲ್ಕಿ. ಕಳೆದ ಬಾರಿಯ ಚಾಂಪಿಯನ್ ತಂಡ. ಶರತ್ ಪ್ರಭು ಮುಲ್ಕಿ( ಬುಲ್ಲಿ) ಎಂದಿನಂತೆ ಈ ಬಾರಿಯೂ ಕೂಡ ತಂಡದ ನಾಯಕತ್ವವನ್ನು ವಹಿಸಲಿದ್ದುಈ ತಂಡದ ಐಕಾನ್ ಆಟಗಾರ ಆಗಿರುತ್ತಾರೆ. ಜಿಪಿಎಲ್ ನ ಕ್ರಿಕೆಟ್ ಇತಿಹಾಸದಲ್ಲೇ ಸರಣಿ ಶ್ರೇಷ್ಠ ಆಟಗಾರನಾಗಿ ಎರಡು ಬಾರಿ ದ್ವಿ ಚಕ್ರ ವಾಹನವನ್ನು ಪಡಕೊಂಡಂಥ ಹೆಗ್ಗಳಿಕೆಗೆ ಪಾತ್ರನಾಗಿರುವ ಕಪ್ತಾನ , ಆಲ್ ರೌಂಡರ್ ಆಟಗಾರ ಶರತ್ ಪ್ರಭು ಮುಲ್ಕಿ, ಈ ತಂಡದ ಬೆನ್ನೆಲುಬು. ಗಣೇಶ್ ಮಲ್ಯ ಟೀಮ್ ಮಾಲೀಕರಾಗಿದ್ದು ಹರೀಶ್ ಶೆಣೈ, ರಮಾನಾಥ್ ಪೈ ಮತ್ತುರಾಮಚಂದ್ರ ಕಾಮತ್ ಸಹ-ಮಾಲೀಕರು ಆಗಿರುತ್ತಾರೆ. ಆಕ್ರಮಕ ಸ್ಪೋಟಕ ಆಟ ಆಡಬಲ್ಲ ಎಡಗೈ ಬ್ಯಾಟ್ಸ್‌ಮನ್ ವಿಘ್ನೇಶ್ ಭಟ್ ಕೋಟೇಶ್ವರ, ಲೆಫ್ಟಿ ವಿಶ್ವನಾಥ ಕಾಮತ್ (ಮುಲ್ಕಿಯ ಜಯಸೂರ್ಯ), ಆಲ್ ರೌಂಡರ್ ಆದಿತ್ಯ ಪೈ ಕುಂದಾಪುರ, ಶರತ್ ಪ್ರಭು ಸಹೋಧರ ಸುಹಾಸ್ ಪ್ರಭು ಇವರುಗಳು ಈ ತಂಡದ ಮಹಾನ್ ಅಸ್ತ್ರಗಳು.
ಅಭರಣ ಡೈಮಂಡ್ಸ್ ಉಡುಪಿ ಕಳೆದ ಬಾರಿ ಸೆಮಿ ಫೈನಲ್ ವರೆಗೆ ತಲುಪಿದಂತಹ ತಂಡ. ಆಲ್ ರೌಂಡರ್ ಆಟಗಾರ ಸುರೇಂದ್ರ ಪೈ ಸಾಸ್ತಾನ ( ಸೂರಿ ಸಾಸ್ತಾನ) ಈ ಟೀಮ್ ನ ನಾಯಕ. ಹೊಡೆಬಡಿಯ ದಾಂಡಿಗ ಪದ್ಮನಾಭ ಪೈ ಕೋಟ, ಶ್ರೇಷ್ಟ ಬೌಲರ್ ವಿವೇಕ್ ಪೈ ಕೋಟ, ಅಂಶು ಕೋಟೇಶ್ವರದ ಪರವಾಗಿ ಆಡಿದ ಹಿರಿಯ ಅನುಭವಿ ಆಟಗಾರ , ಪುರುಷೋತ್ತಮ ಕಾಮತ್ ಕೋಟೇಶ್ವರ ಇವರುಗಳು ಈ ತಂಡದ ಪ್ರಮುಖ ಆಟಗಾರರು. ಉಡುಪಿಯ ಚಿನ್ನಾಭರಣ ಮಳಿಗೆಯ ಉದ್ಯಮಿಗಳಾಗಿರುವ ಸುಭಾಸ್. ಎಂ ಕಾಮತ, ಮಹೇಶ್ ಎಮ್ ಕಾಮತ್, ಸಾಥ್ವಿಕ್ ಎಸ್. ಕಾಮತ್ ಮತ್ತು ಆಕರ್ಷ್ ಎಂ .ಕಾಮತ ಈ ತಂಡದ ಮಾಲೀಕರುಗಳು.
ಉಡುಪಿ ಬ್ಲಾಸ್ಟರ್ಸ್ ಈ ಬಾರಿಯ GPL ನ ಹಾಟ್ ಫೇವರಿಟ್ಸ್ ಗಳಲ್ಲಿ ಮತ್ತ್ತೊಂದು. ಸ್ಪಾರ್ಕ್ಸ್ ಉಡುಪಿ ತಂಡದ ಪರವಾಗಿ ಆಡಿದಂತಹ ಡಾಕ್ಟರ್ ವಿನೋದ್ ನಾಯಕ್ ಈ ತಂಡದ ಕ್ಯಾಪ್ಟನ್. ಅದೇ ಸ್ಪಾರ್ಕ್ಸ್ ನಲ್ಲಿ ಆಡಿದಂಥ ಪ್ಲೇಯರ್ ವಿಶ್ವನಾಥ್ ಶೆಣೈ ಈ ತಂಡದ ಭರವಸೆಯ ಆಟಗಾರ. ಯುವ ಆಟಗಾರ ವಿವೇಕ್ ಪ್ರಭು ಅಂಬಾಗಿಲು ಕೂಡ ಈ ಬಾರಿ ಉಡುಪಿ ಬ್ಲಾಸ್ಟರ್ಸ್ ಪರವಾಗಿ ಆಡಲಿದ್ದಾರೆ. ಡಾಕ್ಟರ್ ರಾಜೇಶ್ ಭಕ್ತ ಹಾಗೂ ಉಡುಪಿಯ ಉದ್ಯಮಿ ಪ್ರಶಾಂತ್ ಬಾಳಿಗ ಈ ತಂಡದ ಮಾಲೀಕರುಗಳು.
ಕೊಡಿಯಾಲ್ ಸೂಪರ್ ಕಿಂಗ್ಸ್: ಜಿ.ಪಿ.ಲ್. ನ ಎಲ್ಲಾಆವೃತ್ತಿಯಲ್ಲೂ ಆಡಿದಂತ ಹ ಮಂಗಳೂರಿನ ಏಕ ಮಾತ್ರ ತಂಡ ಅದು ಕೊಡಿಯಾಲ್ ಸೂಪರ್ ಕಿಂಗ್ಸ್. ಹೆಸರೇ ಹೇಳುವಂತೆ ಇವರು ಕಿಂಗ್ಸ್ ಗಳು. ಆದರೆ ಅದ್ಯಾಕೋ ಅದ್ರಷ್ಟ ಇವರಿಗೆ ಸಾಥ್ ನೀಡುತ್ತಾ ಇಲ್ಲ.ಈ ಮುಂಚೆ ಎರಡು ಬಾರಿ ಫೈನಲ್ ಪ್ರವೇಶಿಸಿತ್ತು ಆದರೆ ಫೈನಲ್ ನಲ್ಲಿ ಸೋಲನ್ನು ಕಂಡಿತ್ತು. ಕಳೆದ ಬಾರಿ ಈ ತಂಡದ ಐಕಾನ್ ಆಟಗಾರನಾಗಿ ಆಡಿ ಸರ್ವಾಂಗೀಣ ಪ್ರದರ್ಶನವನ್ನು ತೋರ್ಪಡಿಸಿದ ಗಣೇಶ್ ನಾಯಕ್ ಕೋಟ ಈ ಬಾರಿಯೂ ಕೂಡ ನಾಯಕನ ಜವಾಬ್ಧಾರಿಯನ್ನು ವಹಿಸಿಕೊಂಡು ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಇದಕ್ಕೆ ಪೂರಕವಾಗಿ ತಂಡದ ಮಾಲೀಕರು ಮಾರೂರ್ ಅಜಿತ್ ಪೈ, ಕೋ ಓನರ್ಸ್ ಪಿ.ಗೌತಮ್ ಶೆಣೈ, ಯು ಚೈತನ್ಯ ನಾಯಕ್ ಮತ್ತುಕೆ ಉಲ್ಲಾಸ್ ಪ್ರಭು ತಮ್ಮ ತಂಡ ಪ್ರಶಸ್ತಿಯನ್ನು ಗೆಲ್ಲಲೇಬೇಕು ಎಂಬ ಆಶಯದೊಂದಿಗೆ ತಂಡಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಡೆಡ್ಲಿ ಪ್ಯಾಂಥರ್ಸ್ ( ರಿ) ಕೊಡಿಯಾಲ್: ಕಳೆದ ಬಾರಿಯ ರನ್ನರ್ ಅಪ್ ಪ್ರಶಸ್ತಿಯನ್ನು ಪಡಕೊಂಡಂತಹ ಡೆಡ್ಲಿ ಪ್ಯಾಂಥರ್ಸ್ ತಂಡದ ಮಾಲಿಕರು ಕೆ.ಪಿ. ಪ್ರಶಾಂತ್ ರಾವ್,ಸುರೇಶ್ ವಿ ಕಾಮತ್,ಸಂದೇಶ್ ಶೆಣೈ ಇವರುಗಳು, ವಿಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಕಾರ್ಕಳದ ವಿಘ್ನೇಶ್ ಶೆಣೈ ಇವರನ್ನು ಐಕಾನ್ ಆಟಗಾರನಾಗಿ ಆಯ್ಕೆ ಮಾಡಿದ್ದು, ವಿಘ್ನೇಶ್ ಶೆಣೈಗೆ ನಾಯಕತ್ವದ ಜವಾಬ್ದಾರಿ ಯನ್ನುನೀಡಿದೆ.
ಟೀಮ್ ಮಹಾಲಸಿ: ಬಿರುಸಿನ ಆಟವನ್ನು ಆಡಬಲ್ಲಂತಹ ಪುಂಡಲೀಕ ಪೈ ಈ ಸಲ ಈ ತಂಡದ ಕಪ್ತಾನ. ಭರ್ಜರಿ ಆಟವನ್ನು ತೋರ್ಪಡಿಸಬಲ್ಲ ಅನಂತೇಶ್ ಪೈ,ರಜತ್ ಶೆಣೈ ಮಂಜೇಶ್ವರ ಈ ತಂಡಕ್ಕೆ ಉತ್ತಮ ಆಸರೆಯಾಗಿರುತ್ತಾರೆ. ಆದೇ ರೀತಿ ಕಲಾತ್ಮಕ ಆಟವನ್ನು ಆಡಬಲ್ಲಂತಹ ಮುಲ್ಕಿಯ ಹಿರಿಯ ಆಟಗಾರರು ಗಣೇಶ್ B ಕಾಮತ್, ಸತೀಶ್ ಕಾಮತ ಕೋಟೇಶ್ವರ ಈ ತಂಡಕ್ಕೆ ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು. ಒಟ್ಟ್ಟಾರೆಯಾಗಿ ಪ್ರಶಸ್ತಿಯನ್ನು ಗೆಲ್ಲುವ ತಂಡಗಳಲ್ಲಿ ಟೀಮ್ ಮಹಾಲಸಿ ಕೂಡ ಒಂದು ಪ್ರಬಲವಾದ ತಂಡವಾಗಿ ಮೂಡಿಬರುವ ಎಲ್ಲಾ ಲಕ್ಷಣ ಗಳು ಕೂಡ ಇವೆ. ಚಂದ್ರಕಾಂತ ಶೆಣೈ, ನವೀನ್ ಶೆಣೈ ಈ ತಂಡದ ಮಾಲೀಕರು.
ಮುಂಬೈ ಪಲ್ಟಾನ್ಸ್ ಹೊರ ರಾಜ್ಯದಿಂದ ಪ್ರತಿ ಬಾರಿಯೂ ಜಿ.ಪಿ.ಲ್. ಪ್ರತಿನಿಧಿಸುವ ಪ್ರಬಲ ತಂಡ.ಎಡಗೈ ಬ್ಯಾಟ್ಸ್ ಮ್ಯಾನ್ ಚಿರಾಗ್ ಶಾನಭಾಗ್ ಮುಂಬೈ ಟೀಮ್ ನ ಟ್ರಂಪ್ ಕಾರ್ಡ್ ಆಗಿದ್ದು, ಪ್ರಸಾದ್ ನಾಯಕ್ ಅವರಂತಹ ವಿಸ್ಪೋಟಕ ಬ್ಯಾಟ್ಸಮನ್ ಕಮ್ ಸ್ಪಿನ್ ಬೌಲರ್ ತಂಡದ ಪ್ರಮುಖ ಅಸ್ತ್ರಗಳು. ದೀಪಕ್ ಶೆನೊಯ್, ಅಮಿತ್ ಶೆನೊಯ್, ಶ್ರೀನಿವಾಸ್ ಕಾಮತ, ಆಶಿಶ್ ಕಾಮತ ತಂಡದ ವ್ಯವಸ್ಥಾಪಕರುಗಳು.
ವೀರ ವೆಂಕಟೇಶ ವಾರಿಯರ್ಸ್ ಮಂಗಳೂರು: ಕಳೆದ 30+ ವರ್ಷಗಳಿಂದ ದೊಡ್ಡ ಹೆಸರುವಾಸಿಯಾದ ತಂಡ. ಕ್ರಿಕೆಟಿಗ ಅನಂತರಾಯ ಪೈ ಈ ಬಾರಿ ಈ ತಂಡದ ಮಾಲಕರು ಆಗಿದ್ದು ಪಾಂಡುರಂಗ ಕಿಣಿ ಮತ್ತುಹರೀಶ್ ಜಿ ಕಾಮತ್ ಸಹ ಮಾಲೀಕರು ಆಗಿರುತ್ತಾರೆ.ಯುವ ಆಟಗಾರ ಲಕ್ಷ್ಮೀಶ್ ಬಾಳಿಗ ತಂಡವನ್ನು ಮುನ್ನಡೆಸಲಿದ್ದಾರೆ.
ಮಲ್ಪೆ ಯುನೈಟೆಡ್ ಮೊದಲ ಬಾರಿಗೆ ಜಿ.ಪಿ.ಎಲ್ ನಲ್ಲಿ ಬಾಗವಹಿಸುವ ಹೊಸ ತಂಡವಾಗಿರುತ್ತದೆ.ಸುಬ್ರಮಣ್ಯ ಭಂಡಾರ್ಕರ್,ಅನಿಲ್. ವಿ.ಕಾಮತ,ಪವನ್ ಕಿಣಿ, ಜಯಂತ್ ನಾಯಕ ಟೀಮ್ ಓನರ್ಸ್ ಗಳು ಮತ್ತು ಸುನಿಲ್ ಶೆಣೈ ಐಕಾನ್ ಆಟಗಾರ.
UK ಏಕಾದಶ ಸಾರಸ್ವತ್ ಉತ್ತರ ಕನ್ನಡದಿಂದ ಪ್ರಥಮಬಾರಿ ಜಿ.ಪಿ.ಲ್. ಸ್ಪರ್ಧೆಯಲ್ಲಿ ಬಾಗವಹಿಸುತ್ತಿರುವ ತಂಡವಾಗಿದೆ. ಕಳೆದ ಬಾರಿ ಡೆಡ್ಲಿ ಪ್ಯಾಂಥರ್ಸ್ ಮಂಗಳೂರಿನ ತಂಡದ ನಾಯಕನಾಗಿ ಉತ್ತಮ ನಿರ್ವಹಣೆ ತೋರ್ಪಡಿಸಿದ ಅತುಲ್ ಪ್ರಭು ಸಾರಥ್ಯದಲ್ಲಿ, ಪ್ರಕಾಶ್ ನಾಯಕ್ ಮಾಲಕತ್ವದ ಉತ್ತರ ಕನ್ನಡ ಏಕಾದಶ ಸಾರಸ್ವತ್ ತಂಡ ಉತ್ತಮ ಪ್ರದರ್ಶನವನ್ನು ತೋರಿಸುವ ನಿಟ್ಟನಲ್ಲಿ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾ ಇದೆ.
ಪರ್ಲ್ ಸಿಟಿ ಕ್ರಿಕೆಟರ್ಸ್ ಪುತ್ತೂರು ಈ ಸಲ ಶಶಿಧರ್ ನಾಯಕ್, ಕೇದಾರ್ ಪ್ರಭು, ರಾಮನಾಥ್ ಭಟ್, ಅನಿಲ್ ನಾಯಕ್ ಇವರುಗಳ ಮುಂದಾಳುತ್ವದಲ್ಲಿ ಐಕಾನ್ ಪ್ಲೇಯರ್ ರಾಕೇಶ್ ಕಾಮತ ನೇತ್ರತ್ವದಲ್ಲಿ ಪಂದ್ಯಾಟವನ್ನು ಆಡಲಿದೆ.
ಜಿ.ಸ್.ಜಿ ರಾಯಲ್ಸ್ ಕೊಡಿಯಾಲ್- ಎಂ. ರಾಧಾ ಕೃಷ್ಣ ಶೆಣೈ ನಾಯಕತ್ವದ ಈ ತಂಡ ಎಂ. ರಾಮನಾಥ್ ಶೆಣೈ ಹಾಗೂ ಏನ್ ಶಾಂತಾನಂದ್ ಕಾಮತ ಅವರ ಮಾಲೀಕತ್ವದ ತಂಡವಾಗಿ ಜಿ.ಪಿ.ಎಲ್ ಪ್ರತಿನಿಧಿಸುತ್ತಾ ಇದ್ದಾರೆ.
ರೈಸಿಂಗ್ ಸ್ಟಾರ್ಸ್ ಮಂಗಳೂರು: ದಿನೇಶ್ ಪೈ, ಸುಬ್ರಹ್ಮಣ್ಯ ಕಾಮತ್, ನಾಗರಾಜ್ ಪೈ, ಸುಧೀರ್ ರಾಜ್ ಇವರುಗಳ ಮಾಲೀಕತ್ವದ ಈ ತಂಡದ ನಾಯಕನಾಗಿಗಿ ಜವಾಬ್ಧಾರಿಯನ್ನು ವಹಿಸಿದ ಐಕಾನ್ ಪ್ಲೇಯರ್ ಗುರುದಾಸ್ ರವಿದಾಸ್ ಶೆಣೈ.
ರಾಯಲ್ ಚಾಲೆಂಜರ್ಸ್ ಬಾಲಾಂಬೆಟ್ಟು: ದೀಪಕ್ ಕಾಮತ ನಾಯಕತ್ವದ ಈ ತಂಡದ ಓನರ್ ಗಳಾಗಿ ಅರವಿಂದ್ ಪೈ, ಸಂದೀಪ್ ಪೈ, ಶ್ರೀನಿವಾಸ್ ಪೈ, ಸುನಿಲ್ ಪೈ ಇವರುಗಳು ಯುವ ಆಟಗಾರರ ಒಂದು ಹೊಸ ತಂಡವನ್ನು ಕಟ್ಟಿ ಮೊದಲ ಬಾರಿಗೆ ಜಿ. ಪಿ. ಲ್ ನಲ್ಲಿ ಪಾಲು ಗೊಳ್ಳುತ್ತಾ ಇದ್ದಾರೆ.
ಟೀಮ್ ABNG: ಇತ್ತೀಚಿನ ದಿನಗಳಲ್ಲಿ ಎಲ್ಲಾ ಜಿ.ಸ್.ಬಿ ಟೂರ್ನಮೆಂಟ್ ಗಳಲ್ಲಿ ಭಾಗವಹಿಸುತ್ತಿರುವ ಒಂದು ತಂಡ ಅದು ಟೀಮ್ ABNG. ಅಭಿಜಿತ್ ಶೆಣೈ ಇವರು ಕಟ್ಟಿ ಬೆಳೆಸಿದಂಥ ಒಂದು ತಂಡ . ಶ್ರೀನಿವಾಸ್ ಪೈ, ಅರ್ಜುನ್ ಶೆಣೈ, ಶ್ರೀಧರ್ ಭಕ್ತ ಈ ತಂಡದ ಸಹ ಮಾಲೀಕರುಗಳು. ಮುಂಬೈ ಮೂಲದ ಆಟಗಾರ ಆದಿತ್ಯ ಸಖರ್ ದಾಂಡೆ ಈ ಬಾರಿ ಟೀಮ್ ಏ.ಬಿ.ಏನ್.ಜಿ ಬಂಟ್ವಾಳ ದ ಪರವಾಗಿ ಐಕಾನ್ ಪ್ಲೇಯರ್ ಆಗಿ ಆಡುವರು.
ಜೈಕಾರ್ ಸ್ಟ್ರೈಕರ್ಸ್ರ್ ಮೂಡಬಿದ್ರಿ: ಕೆನರಾ ಬ್ಯಾಂಕ್ ತಂಡವನ್ನು ಪ್ರತಿನಿಧಿಸುವ ಹಿರಿಯ ಆಟಗಾರರು ದೇವದಾಸ್ ನಾಯಕ್ ಮತ್ತೊಮ್ಮೆ ಐಕಾನ್ ಆಟಗಾರನಾಗಿ ಈ ತಂಡಕ್ಕೆ ನಾಯಕತ್ವವನ್ನು ವಹಿಸಲಿದ್ದು ದಿನೇಶ್ ಮಲ್ಯ ಹಾಗೂ ರಮಾನಾಥ್ ಕಿಣಿ ತಂಡದ ಮಾಲಕರಾಗಿ ಬೆಂಬಲ ನೀಡಲಿದ್ದಾರೆ
ಒಟ್ಟಾರೆಯಾಗಿ ಹೇಳುವುದಾದರೆ ಏಳನೆಯ ಆವೃತ್ತಿಯ ಈ ಒಂದು ಜಿ.ಪಿ.ಲ್ ಟೂರ್ನಮೆಂಟ್ ಗೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, GPLನ ಎಲ್ಲಾ ಕ್ರೀಡಾ ಪ್ರೇಮಿಗಳು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ.
ಜಿ.ಪಿ.ಎಲ್ ನ ಏಳನೆಯ ಆವೃತ್ತಿಯ ಟೂರ್ನಮೆಂಟ್ ಬಹಳಷ್ಟುಯಶಸ್ವಿಯಾಗಿ ನಡೆಯಲಿ ಎಂಬುದು ಸ್ಪೋರ್ಟ್ಸ್ ಕನ್ನಡ ದ ಹಾರೈಕೆ.
ಸುರೇಶ್ ಭಟ್ ಮುಲ್ಕಿ