ಜೈ ಗಣೇಶ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಬಡಗುಬೆಟ್ಟು ಪ್ರೀಮಿಯರ್ ಲೀಗ್ ಸೀಸನ್-1 ಪಂದ್ಯಾವಳಿಯನ್ನು ಜನವರಿ 17 ರಂದು 80 ನೇ ಬಡಗುಬೆಟ್ಟು ಸಾನದ ಬಾಕಿಮಾರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
80 ನೇ ಬಡಗುಬೆಟ್ಟು ಗ್ರಾಮದ 60 ಕ್ಕೂ ಮಿಕ್ಕಿದ ಆಟಗಾರರನ್ನೊಳಗೊಂಡ
5 ತಂಡಗಳು (5 ಫ್ರಾಂಚೈಸಿ) ಈ ಪಂದ್ಯಾಕೂಟದಲ್ಲಿ ಭಾಗವಹಿಸಲಿದ್ದು,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ.
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
1)ಕಲ್ಲಪಾಪು ಕನ್ಸ್ಟ್ರಕ್ಷನ್ ಮಾಲೀಕರಾದ ಸಂದೀಪ್ ಶೆಟ್ಟಿ ಮಾಲೀಕತ್ವದ ಶ್ರೀಕಾ ರೇಂಜರ್ಸ್
2)ಜನನಿ ಮಹೇಶ್ ಶೆಟ್ಟಿ ಮಾಲೀಕತ್ವದ ಶ್ರೀ ವಿನಾಯಕ ಕ್ರಿಕೆಟರ್ಸ್
3)ಮಹೇಶ್ ನಾಯಕ್ ಹಾಗೂ ಅರುಣ್ ನಾಯಕ್ ಮಾಲೀಕತ್ವದ ವಿಕ್ರಮ್ ಆಲಂಬಿ.
4)ಆಟೋಪಾಯಿಂಟ್ ಉಡುಪಿ ಮಾಲೀಕರಾದ ಕಬಿಯಾಡಿ ಶುಭಕರ ಶೆಟ್ಟಿ ಮಾಲೀಕತ್ವದ ಆಟೋಪಾಯಿಂಟ್ ಕಬಿಯಾಡಿ
5)ಕರುಣಾಕರ್ ಮಡಿವಾಳ್ ಮಾಲೀಕತ್ವದ ಬಬ್ಬುಸ್ವಾಮಿ ಕ್ರಿಕೆಟರ್ಸ್.