ಕ್ರಿಕೆಟ್ಲೆಜೆಂಡ್ಸ್ ಟ್ರೋಫಿ 2025 – ಉಡುಪಿ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬ

ಲೆಜೆಂಡ್ಸ್ ಟ್ರೋಫಿ 2025 – ಉಡುಪಿ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬ

-

- Advertisment -spot_img

 

ಲೆಜೆಂಡ್ಸ್ ಟ್ರೋಫಿ 2025 – ಉಡುಪಿ ಕ್ರಿಕೆಟ್ ಅಭಿಮಾನಿಗಳಿಗೆ ಕ್ರಿಕೆಟ್ ಹಬ್ಬ

ಉಡುಪಿ: ಲೆಜೆಂಡ್ ಕ್ರಿಕೇಟರ್ಸ್ ಉಡುಪಿ ವತಿಯಿಂದ ಆಯೋಜನೆಯಾಗುತ್ತಿರುವ ಲೆಜೆಂಡ್ಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್ ನವೆಂಬರ್ 9, 2025ರಂದು ನೇಜಾರು ಮೈದಾನದಲ್ಲಿ ಜರುಗಲಿದೆ. ಈ ಬಾರಿ ವಿಶೇಷವಾಗಿ 40+ ಮತ್ತು 45+ ವಯೋಮಾನದ ಆಟಗಾರರಿಗೆ ಅವಕಾಶ ಕಲ್ಪಿಸಿ 90 ರ ದಶಕದ ಹಳೆಯ ನೆನಪುಗಳನ್ನು ಮೂಡಿಸುವ 8 ತಂಡಗಳ ನಡುವಿನ ನಾಕೌಟ್ ಪಂದ್ಯಾವಳಿ ರೂಪದಲ್ಲಿ ಟೂರ್ನಮೆಂಟ್ ನಡೆಯಲಿದೆ.

ಟೂರ್ನಮೆಂಟ್‌ನಲ್ಲಿ 8 ಓವರ್‌ಗಳ ಪಂದ್ಯಾವಳಿಗಳು ನಡೆಯಲಿದ್ದು, ಪ್ರತಿಯೊಂದು ತಂಡದಲ್ಲಿ 3 ಆಟಗಾರರು ಕಡ್ಡಾಯವಾಗಿ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. 45+ ವಿಭಾಗದ ಆಟಗಾರರಿಗೆ 8 ಕಡ್ಡಾಯ ಅವಕಾಶಗಳನ್ನು ನೀಡಲಾಗಿದೆ. ಪಂದ್ಯಗಳಲ್ಲಿ 40+ ಆಟಗಾರರಿಂದ  2 ಓವರ್‌ಗಳು ಬೌಲಿಂಗ್ ಮಾಡುವುದು ಕಡ್ಡಾಯವಾಗಿದೆ.

ವಿಜೇತರಿಗೆ ₹25,000 ನಗದು ಬಹುಮಾನ ಹಾಗೂ ಆಕರ್ಷಕ ಶೀಲ್ಡ್, ರನ್ನರ್-ಅಪ್ ತಂಡಕ್ಕೆ ₹15,000 ನಗದು ಬಹುಮಾನ ನೀಡಲಾಗುತ್ತದೆ. ಜೊತೆಗೆ ಉಚಿತ ಎಂಟ್ರಿ ಫೀ ನೀಡಿರುವುದು ಆಟಗಾರರ ಪಾಲಿಗೆ ಇನ್ನಷ್ಟು ಸಂತೋಷ ತಂದಿದೆ.

ಈ ಟೂರ್ನಮೆಂಟ್‌ನ ಮುಖ್ಯ ಉದ್ದೇಶ ಕ್ರಿಕೆಟ್ ಅಭಿಮಾನಿಗಳಿಗೆ ಹಾಗೂ ಹಿರಿಯ ಆಟಗಾರರಿಗೆ ವೇದಿಕೆ ಒದಗಿಸಿ, ಆರೋಗ್ಯ ಮತ್ತು ಕ್ರೀಡಾ ಮನೋಭಾವವನ್ನು ಉತ್ತೇಜಿಸುವುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:

ಮಿಥುನ್ – 9880377126 | ಅಜೀಜ್ – 9972541847

 

 

 

2 COMMENTS

LEAVE A REPLY

Please enter your comment!
Please enter your name here

one × 3 =

Latest news

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

  ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ ಐದನೇ ಆವೃತ್ತಿಯ...
- Advertisement -spot_imgspot_img

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉಡುಪಿ ಜಿಲ್ಲೆಯ ಮಲ್ಪೆಯ...

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ ಕಾಮಧೇನು‌ ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ನಂಚಾರು ಇಲ್ಲಿರುವ ಗೋವುಗಳಿಗಾಗಿ 12 ನೇ...

Must read

- Advertisement -spot_imgspot_img

You might also likeRELATED
Recommended to you