ದುಬೈನಲ್ಲಿ ಸನ್‌ರೈಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

ದುಬೈನಲ್ಲಿ ಸನ್‌ರೈಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

ದುಬೈನಲ್ಲಿ ಸನ್‌ರೈಸ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

ದುಬೈ ಟೆನಿಸ್ ಬಾಲ್ ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊಸ ಉತ್ಸಾಹ ತುಂಬುವಂತಹ ಟೂರ್ನಿಗೆ ವೇದಿಕೆ ಸಿದ್ಧವಾಗುತ್ತಿದೆ. “ಸನ್‌ರೈಸ್ ಟ್ರೋಫಿ 2025 – ಸೀಸನ್ 1” ಎಂಬ 40 ಯಾರ್ಡ್ಸ್ ಫ್ಲಡ್ಲೈಟ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನವೆಂಬರ್ 8 ಮತ್ತು 9 ರಂದು ಅಬುಹೈಲ್‌ನ ಸ್ಪೋರ್ಟ್ಸ್‌ಬೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಈ ಕ್ರಿಕೆಟ್ ಟೂರ್ನಮೆಂಟನ್ನು ಟ್ರೂ ನೆಸ್ಟರ್ ಮತ್ತು ವೆಬಿಜ್ ಸಂಸ್ಥೆಗಳು ನಿಫಾ ಸ್ಟ್ರೈಕರ್ಸ್ ಉಡುಪಿ ತಂಡದ ಸಹಯೋಗದಲ್ಲಿ ಹಾಗೂ ಸನ್‌ರೈಸ್ ಹೊನ್ನಾಳ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸುತ್ತಿವೆ.

ಟೂರ್ನಮೆಂಟ್‌ನಲ್ಲಿ ಸೀಮಿತ 8 ತಂಡಗಳು ಭಾಗವಹಿಸಲಿದ್ದು, ಟೆನಿಸ್ ಬಾಲ್ ಆಧಾರಿತ ಲೀಗ್ ಕಮ್ ನಾಕೌಟ್ ರೀತಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತೀ ತಂಡಕ್ಕೂ ಎರಡು ಖಚಿತ ಪಂದ್ಯಗಳು ದೊರೆಯಲಿವೆ. 5 ಓವರ್‌ಗಳ 13 ಪಂದ್ಯಗಳು ನಡೆಯಲಿದ್ದು, ಅಂತಿಮವಾಗಿ ಚಾಂಪಿಯನ್ ಆಯ್ಕೆಗೊಳ್ಳಲಿದ್ದಾರೆ.

ಪ್ರಥಮ ಬಹುಮಾನ: 5001 ದಿರ್ಹಾಮ್
ರನ್ನರ್ಸ್ ಅಪ್: 3001 ದಿರ್ಹಾಮ್

ಅದರ ಜೊತೆಗೆ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ವಿಭಿನ್ನ ಬಹುಮಾನಗಳು ನೀಡಲಾಗುತ್ತವೆ —

ಬೆಸ್ಟ್ ಬ್ಯಾಟ್ಸ್ಮನ್: ಬ್ಯಾಟ್

ಬೆಸ್ಟ್ ಬೌಲರ್: ಶೂಸ್

ಬೆಸ್ಟ್ ಕೀಪರ್: ವಾಚ್

ಬೆಸ್ಟ್ ಫೀಲ್ಡರ್: ಪರ್ಫ್ಯೂಮ್

ಮ್ಯಾನ್ ಆಫ್ ದ ಸೀರೀಸ್: ಎಲ್‌ಇಡಿ ಟಿವಿ

ಫೈನಲ್ ಮ್ಯಾನ್ ಆಫ್ ದ ಮ್ಯಾಚ್: ಚಿನ್ನದ ನಾಣ್ಯ

ಪ್ರವೇಶ ಶುಲ್ಕ: 750 AED ಆಗಿದ್ದು, ನೋಂದಣಿ ಕೊನೆಯ ದಿನಾಂಕ ಅಕ್ಟೋಬರ್ 25, 2025 ಎಂದು ಆಯೋಜಕರು ತಿಳಿಸಿದ್ದಾರೆ.

ಟೂರ್ನಮೆಂಟ್‌ನ ನೇರಪ್ರಸಾರವನ್ನು ಸ್ಪೋರ್ಟ್ಸ್ ಕನ್ನಡ ಮೀಡಿಯಾ ಲೈವ್ ಮೂಲಕ ಪ್ರಸಾರ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ರಹ್ಮತ್ ಹೊನ್ನಾಳ: +971568713554

Leave a Reply

Your email address will not be published. Required fields are marked *