ವೈದಿಕ ಕ್ರೀಡೋತ್ಸವ ಸಮಿತಿ ವತಿಯಿಂದ ವೈದಿಕರಿಗಾಗಿ ವಿಪಿಎಲ್ 2025 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ

ವೈದಿಕ ಕ್ರೀಡೋತ್ಸವ ಸಮಿತಿ ವತಿಯಿಂದ ವೈದಿಕರಿಗಾಗಿ ವಿಪಿಎಲ್ 2025 ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ

ನೀವು ಜಿ ಎಸ್ ಬಿ ವೈದಿಕರಾ? ನೀವು ಕ್ರಿಕೆಟ್ ಪ್ರೇಮಿನಾ? ಕ್ರಿಕೆಟ್ ಆಡ್ಬೇಕಾ? ಇಲ್ಲಿದೆ ಅವಕಾಶ. ವೈದಿಕ ಕ್ರೀಡೋತ್ಸವ ಸಮಿತಿಯ ವಿಪಿಎಲ್ ನಲ್ಲಿ ಭಾಗಿಯಾಗಬಹುದು.

ವೈದಿಕರಿಗಾಗಿ ವಿಪಿಎಲ್- ವೈದಿಕ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿರುವ ವೈದಿಕ ಕ್ರೀಡೋತ್ಸವ ಸಮಿತಿ ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಐದು ವಿಪಿಎಲ್ ಸೀಸನ್ ಮುಗಿಸಿರುವ ವೈದಿಕ ಕ್ರೀಡೋತ್ಸವ ಸಮಿತಿಯ ಸೂತ್ರಧಾರ ಪಂಡಿತ್ ಕಾಶಿನಾಥ್ ಆಚಾರ್ಯ ವಿಪಿಎಲ್ -2025 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಶ್ರೀ ಕೃಷ್ಣಾಷ್ಟಮಿಯ ಶುಭದಿನದಂದು ಈ ಪಂದ್ಯಾವಳಿಯ ದಿನಾಂಕಗಳನ್ನು ಪ್ರಕಟ ಮಾಡಲಾಯಿತು. 2025ರ ಜನವರಿ 25 ಮತ್ತು 26 ರಂದು ಈ ಟೂರ್ನಮೆಂಟ್ ನಡೆಸಲಾಗುವುದು ಎಂದು ಶ್ರೀಯುತ ಪಂಡಿತ್ ಕಾಶಿನಾಥ್ ಆಚಾರ್ಯ ಇವರು ಸ್ಪೋರ್ಟ್ಸ್ ಕನ್ನಡಕ್ಕೆ ಮಾಹಿತಿ ತಿಳಿಸಿದ್ದಾರೆ. ಈ ಸಂದರ್ಭ ಕ್ರಿಕೆಟ್ ಜೊತೆ ಜೊತೆಗೆ ಮಕ್ಕಳು , ಮಹಿಳೆಯರಿಗೆ, ಪುರುಷರಿಗೆ ಮತ್ತು ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಕಾರ್ಯಕ್ರಮವು ವೈದಿಕರಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಗುರಿ ಹೊಂದಿದೆ. ಬಹುಮಾನಗಳ ಹೊರತಾಗಿ, ಆಟಗಾರರಿಗೆ ವೇದ ಪುಸ್ತಕಗಳು, ಪಂಚಾಂಗ, ಧೋತಿ ಶಾಲು ನೀಡಿ ಗೌರವಿಸಲಾಗುತ್ತದೆ. ಬರಿಮಾರು ಮಹಾಮಾಯ ಟೆಂಪಲ್ ಗ್ರೌಂಡ್ ನಲ್ಲಿ ಈ ಟೂರ್ನಮೆಂಟ್ ನಡೆಯಲಿದೆ. ಮುಂದಿನ ದಿನಗಳಲ್ಲಿ ತಂಡಗಳು ಸೇರಿದಂತೆ ಮತ್ತಿತರ ಅಪ್ ಡೇಟ್ ನೀಡಲಾಗುತ್ತದೆ.

Leave a Reply

Your email address will not be published. Required fields are marked *