Home ಕ್ರಿಕೆಟ್ ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳ ಮಾನವೀಯ ಕಾರ್ಯಗಳನ್ನು ಮೆಚ್ಚಿ ಪೆರ್ಡೂರು,ಪುತ್ತಿಗೆ,ಶಿವಪುರ ಮತ್ತು ಯುನೈಟೆಡ್ ಸೌಲ್ಸ್ ಹಿರಿಯಡ್ಕ ತಂಡಗಳು ಮುಂದಿನ‌ ಸೀಸನ್ ನಲ್ಲಿ ಆ ಭಾಗದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾಟಗಳಿಗೆ ಸಂಪೂರ್ಣ ಉಚಿತ ಪ್ರವೇಶಾತಿಯ ಅವಕಾಶವನ್ನು ನೀಡಲಿದೆ ಎಂದು ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹ: ಎರಡು ತಂಡಗಳಿಗೆ ಉಚಿತ ಪ್ರವೇಶ ಸೌಲಭ್ಯ

ಇತ್ತೀಚೆಗೆ ನಡೆದ ಹೆಮ್ಮಾಡಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡವು ತಮಗೆ ದೊರೆತ ರೂ.40,000 ನಗದು ಬಹುಮಾನವನ್ನು ಉಡುಪಿಯ ಕ್ರಿಕೆಟಿಗ ಅಶೋಕ್ ಮೂಡುಬೆಟ್ಟು ಅವರಿಗೆ ನೆರವಿನ ರೂಪದಲ್ಲಿ ನೀಡುವ ಮೂಲಕ ಕ್ರೀಡಾ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಈ ಮಾನವೀಯ ಕಾರ್ಯವನ್ನು ಸ್ಪೋರ್ಟ್ಸ್ ಕನ್ನಡ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡದ ಈ ಸಮಾಜಮುಖಿ ಕಾರ್ಯವನ್ನು ಮೆಚ್ಚಿದ ಪೆರ್ಡೂರು, ಪುತ್ತಿಗೆ, ಶಿವಪುರ ಹಾಗೂ ಯುನೈಟೆಡ್ ಸೌಲ್ಸ್ ಹಿರಿಯಡ್ಕ ತಂಡಗಳು, ತಾವು ಮುಂದಿನ ದಿನಗಳಲ್ಲಿ ಆಯೋಜಿಸುವ ಟೂರ್ನಿಗಳಲ್ಲಿ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡಕ್ಕೆ ವಿಶೇಷ ವಿನಾಯಿತಿ ನೀಡಲು ನಿರ್ಧರಿಸಿವೆ.

ಇದೇ ರೀತಿಯಲ್ಲಿ, ಬ್ಲೂಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡವು ಕೆಲ ಸಮಯದ ಹಿಂದೆ ತಾವು ಗೆದ್ದ ನಗದು ಬಹುಮಾನವನ್ನು ಹಾವು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದ ವಿಘ್ನೇಶ್ ಸೋನಾ ಎಂಬ ಯುವಕನ ಚಿಕಿತ್ಸೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿತ್ತು.

ಈ ಎರಡು ತಂಡಗಳ ಸಮಾಜಸೇವಾ ಮನೋಭಾವವನ್ನು ಗೌರವಿಸಿ, ಪೆರ್ಡೂರು, ಪುತ್ತಿಗೆ, ಶಿವಪುರ ಹಾಗೂ ಯುನೈಟೆಡ್ ಸೌಲ್ಸ್ ಹಿರಿಯಡ್ಕ ತಂಡಗಳು ತಾವು ಆಯೋಜಿಸುವ ಮುಂದಿನ ಟೂರ್ನಿಗಳಲ್ಲಿ ಕಟ್ಟೆ ಫ್ರೆಂಡ್ಸ್ ಕಾಳಾವರ ಹಾಗೂ ಬ್ಲೂಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ (Free Entry) ಸೌಲಭ್ಯ ಕಲ್ಪಿಸಲು ತೀರ್ಮಾನಿಸಿವೆ.

ಕ್ರೀಡೆಯ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಇಂತಹ ಕಾರ್ಯಗಳು ಇತರ ತಂಡಗಳಿಗೂ ಸ್ಫೂರ್ತಿಯಾಗಲಿ ಎಂಬ ಆಶಯವನ್ನು ಆಯೋಜಕ ತಂಡಗಳು ವ್ಯಕ್ತಪಡಿಸಿವೆ.

LEAVE A REPLY

Please enter your comment!
Please enter your name here

four × three =

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳ ಮಾನವೀಯ ಕಾರ್ಯಗಳನ್ನು ಮೆಚ್ಚಿ ಪೆರ್ಡೂರು,ಪುತ್ತಿಗೆ,ಶಿವಪುರ ಮತ್ತು ಯುನೈಟೆಡ್ ಸೌಲ್ಸ್ ಹಿರಿಯಡ್ಕ ತಂಡಗಳು ಮುಂದಿನ‌ ಸೀಸನ್ ನಲ್ಲಿ ಆ ಭಾಗದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾಟಗಳಿಗೆ ಸಂಪೂರ್ಣ ಉಚಿತ ಪ್ರವೇಶಾತಿಯ ಅವಕಾಶವನ್ನು ನೀಡಲಿದೆ ಎಂದು ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹ: ಎರಡು ತಂಡಗಳಿಗೆ ಉಚಿತ ಪ್ರವೇಶ ಸೌಲಭ್ಯ ಇತ್ತೀಚೆಗೆ ನಡೆದ ಹೆಮ್ಮಾಡಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡವು ತಮಗೆ ದೊರೆತ ರೂ.40,000 ನಗದು ಬಹುಮಾನವನ್ನು ಉಡುಪಿಯ ಕ್ರಿಕೆಟಿಗ ಅಶೋಕ್ ಮೂಡುಬೆಟ್ಟು ಅವರಿಗೆ ನೆರವಿನ ರೂಪದಲ್ಲಿ ನೀಡುವ ಮೂಲಕ ಕ್ರೀಡಾ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಈ ಮಾನವೀಯ ಕಾರ್ಯವನ್ನು ಸ್ಪೋರ್ಟ್ಸ್ ಕನ್ನಡ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡದ ಈ

Send this to a friend