ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಡಾ.ತಿಮ್ಮಪ್ಪಯ್ಯ ಟ್ರೋಫಿ ಟೂರ್ನಿಯಲ್ಲಿ ಬರೋಡ ಕ್ರಿಕೆಟ್ ಸಂಸ್ಥಮ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬರೋಡ ತಂಡ ಮಹಾರಾಷ್ಟ್ರ ತಂಡವನ್ನು ಇನ್ನಿಂಗ್ಸ್ ಹಾಗೂ 96 ರನ್’ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಬರೋಡ ತಂಡದ ಯಶಸ್ಸಿನಲ್ಲಿ
ಕರ್ನಾಟಕದ ಮಾಜಿ ಎಡಗೈ ಮಧ್ಯಮ ವೇಗದ ಬೌಲರ್ ಶ್ರೀನಾಥ್ ಅರವಿಂದ್ ಅವರ ಪಾತ್ರ ದೊಡ್ಡದು. 39 ವರ್ಷಗ ಎಸ್. ಅರವಿಂದ್ ಬರೋಡ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ. ಎರಡು ವರ್ಷಗಳ ಅವಧಿಗೆ ಬರೋಡ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವ ಅರವಿಂದ್ ಪ್ರತಿಷ್ಠಿತ ಕೆ.ಎಸ್.ಸಿ.ಎ ಟೂರ್ನಿಯಲ್ಲಿ ಬರೋಡ ತಂಡ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಕರ್ನಾಟಕ ಕ್ರಿಕೆಟ್ ಕಂಡ ದಿಗ್ಗಜ ವೇಗದ ಬೌಲರ್’ಗಳಲ್ಲಿ ಒಬ್ಬರಾಗಿರುವ ಎಸ್.ಅರವಿಂದ್ ರಾಜ್ಯ ತಂಡ 2013ರಿಂದ 2015ರ ಅವಧಿಯಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಇರಾನಿ ಕಪ್ ಗೆದ್ದಾಗ ಆ ತಂಡದ ಸದಸ್ಯರಾಗಿದ್ದರು. 2018ರಿಂದ 2022ರವರೆಗೆ ಎಸ್.ಅರವಿಂದ್ ಕರ್ನಾಟಕ ತಂಡದ ಬೌಲಿಂಗ್ ಕೋಚ್ ಕಾರ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಕರ್ನಾಟಕ ತಂಡ ರಣಜಿ ಸೆಮಿಫೈನಲ್ ಪ್ರವೇಶಿಸಿದ್ದೇ ಉತ್ತಮ ಸಾಧನೆಯಾಗಿತ್ತು.
ಕರ್ನಾಟಕ ಪರ 56 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಎಸ್. ಅರವಿಂದ್ 186 ವಿಕೆಟ್’ಗಳನ್ನು ಪಡೆದಿದ್ದಾರೆ. 39 ವರ್ಷದ ಅರವಿಂದ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ – ಎನ್.ಸಿ.ಎ ಲೆವೆಲ್-2 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸಿದ್ದಾರೆ.