ಕಳೆದ ವಾರ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಿತೀಶ್ ಗೌಡ ಸಾರಥ್ಯದಲ್ಲಿ ಹಾಗೂ ವಾಯುಪುತ್ರ ಕ್ರಿಕೆಟರ್ಸ್ ಸಹಯೋಗದೊಂದಿಗೆ ನಡೆದ 2 ದಿನಗಳ ಹಗಲಿನ ಪಂದ್ಯಾಕೂಟದ ಪ್ರಶಸ್ತಿಯನ್ನು ನ್ಯಾಶ್ ಬೆಂಗಳೂರು ತಂಡ ಜಯಿಸಿಕೊಂಡಿದೆ.
ಫೈನಲ್ ಪಂದ್ಯದಲ್ಲಿ ನ್ಯಾಶ್ ತಂಡ ಸೃಷ್ಟಿ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪ್ರಥಮ ಪ್ರಶಸ್ತಿಯ ರೂಪದಲ್ಲಿ 1,23,456 ರೂ ನಗದು ಹಾಗೂ ರನ್ನರ್ಸ್ ತಂಡ 54,321ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ವೈಯಕ್ತಿಕ ಪ್ರಶಸ್ತಿಗಳನ್ನು ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ನ್ಯಾಶ್ ನ ಅಕ್ಷಯ್,ಬೆಸ್ಟ್ ಬೌಲರ್ ಮಾರ್ಕ್ ಮಹೇಶ್, ಬೆಸ್ಟ್ ಕೀಪರ್ ಸೃಷ್ಟಿಯ ಆದರ್ಶ್ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ಸೃಷ್ಟಿಯ ಕಾಶಿ ಪಡೆದುಕೊಂಡರು.
ಪಂದ್ಯಾಕೂಟದ ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಸಂಗಡಿಗರು,ವೀಕ್ಷಕ ವಿವರಣೆಕಾರರಾಗಿ ಶಿವನಾರಾಯಣ ಐತಾಳ್ ಕೋಟ ಹಾಗೂ ಪ್ರಶಾಂತ್ ಅಂಬಲಪಾಡಿ ಸಹಕರಿಸಿದರೆ,ಯಶಸ್ವಿ ಪಂದ್ಯಾಕೂಟದ ನೇರ ಪ್ರಸಾರವನ್ನು M.Sports ಬಿತ್ತರಿಸಿತ್ತು.
ಆರ್.ಕೆ.ಆಚಾರ್ಯ ಕೋಟ