ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಕರುಣ್ ನಾಯರ್!

ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಕರುಣ್ ನಾಯರ್!

ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಕರುಣ್ ನಾಯರ್!

ಕರುಣ್ ನಾಯರ್ ಅವರ ಕ್ರಿಕೆಟ್ ಬದುಕೇ ರೋಚಕ. ಕರ್ನಾಟಕದ ರಣಜಿ ವಿಕ್ರಮಗಳ ರೂವಾರಿಗಳಲ್ಲಿ ಒಬ್ಬರಾಗಿ, ಕರ್ನಾಟಕ ತಂಡದ ನಾಯಕನಾಗಿ, ಕೊನೆಗೆ ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡು, ವಿದರ್ಭ ತಂಡದ ಬಾಗಿಲು ಬಡಿದು, ವಿದರ್ಭ ತಂಡ ಸೇರಿಕೊಂಡು, ನಂತರ ಅದೇ ವಿದರ್ಭ ತಂಡದ ನಾಯಕರಾಗಿ ಇದೀಗ ವಿದರ್ಭ ಪರ ಆಡುತ್ತಾ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಆಡಿರುವ ಮೊದಲ ಐದು ಪಂದ್ಯಗಳಲ್ಲಿ ಕರುಣ್ ನಾಯರ್ ನಾಲ್ಕು ಶತಕಗಳೊಂದಿಗೆ ಅಬ್ಬರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅಜೇಯ 112 ರನ್, ಛತ್ತೀಸ್’ಗಢ ವಿರುದ್ಧ ಅಜೇಯ 44 ರನ್, ಚಂಡೀಗಢ ವಿರುದ್ಧ ಅಜೇಯ 163 ರನ್, ತಮಿಳುನಾಡು ವಿರುದ್ಧ ಅಜೇಯ 111 ರನ್ ಮತ್ತು ಉತ್ತರ ಪ್ರದೇಶ ವಿರುದ್ಧ 112 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಐದು ಪಂದ್ಯಗಳಿಂದ 542 ರನ್ ಕಲೆ ಹಾಕಿ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಟಾಪ್ ರನ್ ಸ್ಕೋರರ್ ಎನಿಸಿದ್ದಾರೆ. ಅಷ್ಟೇ ಅಲ್ಲ, ಲಿಸ್ಟ್ ಎ ಕ್ರಿಕೆಟ್’ನಲ್ಲಿ ಅಮೋಘ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್’ನ ಟೂರ್ನಿಯೊಂದರ ಪಂದ್ಯಗಳಲ್ಲಿ ಒಮ್ಮೆಯೂ ಔಟಾಗದೆ 500 ರನ್ ಗಳಿಸಿದ ವಿಶ್ವದ ಮೊದಲ ಆಟಗಾರನೆಂಬ ಹಿರಿಮೆಗೆ ಕರುಣ್ ನಾಯರ್ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ 70 ರನ್ ಗಳಿಸಿದ್ದಾಗ ಕರುಣ್ ಈ ವಿಶ್ವದಾಖಲೆ ನಿರ್ಮಿಸಿದರು.

2024-25ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ 471 ಎಸೆತಗಳನ್ನೆದುರಿಸಿರುವ ವಿದರ್ಭ ತಂಡದ ನಾಯಕ ಕರುಣ್ ನಾಯರ್, 542ರ ಅಮೋಘ ಸರಾಸರಿಯಲ್ಲಿ 4 ಶತಕಗಳ ಸಹಿತ 542 ರನ್ ಗಳಿಸಿದ್ದಾರೆ. ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ 6 ಪಂದ್ಯಗಳಿಂದ 3 ಶತಕಗಳೊಂದಿಗೆ 497 ರನ್ ಕಲೆ ಹಾಕಿದ್ದಾರೆ.

Leave a Reply

Your email address will not be published. Required fields are marked *