ಕಾರ್ಕಳ-ಯುವ ಸಂಘಟಕ,ವೀಕ್ಷಕ ವಿವರಣೆಕಾರ ಮನೀಷ್ ಶೆಟ್ಟಿ ಕಾಂತಾವರ ಇವರ ಸಾರಥ್ಯದಲ್ಲಿ ಕಾಂತಾವರ ಹೈಸ್ಕೂಲ್ ಮೈದಾನದಲ್ಲಿ 5 ನೇ ಆವೃತ್ತಿಯ “ಕಾಂತಾವರ ಟ್ರೋಫಿ-2023” ಅಂಡರ್ ಆರ್ಮ್ಸ್ ಕ್ರಿಕೆಟ್ ಪಂದ್ಯಾಟ ಜರುಗಿತು.
ಒಟ್ಟು 24 ತಂಡಗಳು ಭಾಗವಹಿಸಿದ ಈ ಪಂದ್ಯಾವಳಿಯ ಫೈನಲ್ ಕುರುಪಾಡಿ ಫ್ರೆಂಡ್ಸ್ ಅಜೆಕಾರು-ಅಗಸ್ತ್ಯ ಮದಗ ಹೆಬ್ರಿ ನಡುವಿನ ರೋಚಕ ಕದನ ಟೈನಲ್ಲಿ ಅಂತ್ಯಗೊಂಡಿತ್ತು.ಅಂತಿಮವಾಗಿ ಟಾಸ್ ಮೂಲಕ ಕುರುಪಾಡಿ ಫ್ರೆಂಡ್ಸ್ ತಂಡವನ್ನು ವಿಜಯಿ ತಂಡವೆಂದು ಘೋಷಿಸಲಾಯಿತು.
ಫೈನಲ್ ಪಂದ್ಯಶ್ರೇಷ್ಟ ಸಂಭ್ರಮ್ ದೇವಾಡಿಗ ಅಗಸ್ತ್ಯ ಮದಗ ಹೆಬ್ರಿ,ಬೆಸ್ಟ್ ಬ್ಯಾಟರ್ ಆಕಾಶ್ ಕುರುಪಾಡಿ ಫ್ರೆಂಡ್ಸ್, ಬೆಸ್ಟ್ ಬೌಲರ್ ರಕ್ಷಕ್ ಅಗಸ್ತ್ಯ ಮದಗ ಹಾಗೂ ಸರಣಿ ಶ್ರೇಷ್ಠ ಬ್ರದರ್ಸ್ ಅಜೆಕಾರಿನ ಉದಯ್ ಪಡೆದುಕೊಂಡರು.
ಸಮಾರಂಭದ ವೇದಿಕೆಯಲ್ಲಿ ಅರುಣ್ ಕುಮಾರ್ ನಿಟ್ಟೆ, ಸ್ವರೂಪ್ ಶೆಟ್ಟಿ ಬೆಳ್ಮಣ್,ಸುಧಾಕರ್ ಸಾಲ್ಯಾನ್ ಕಾಂತಾವರ,ಪ್ರಭಾಕರ್ ಕುಲಾಲ್ ಬೇಲಾಡಿ,ಮಹಾವೀರ ಪಾಂಡಿ,ಶ್ರೀಮತಿ ಅಮಿತಾ ಕೆ ಪೂಜಾರಿ,ಪ್ರಕಾಶ್ ಶೆಟ್ಟಿ, ಸಂಜೀವ ಕೋಟ್ಯಾನ್,ಮನೋಹರ ಕುಲಾಲ್,ಲಿಂಗಪ್ಪ ದೇವಾಡಿಗ ಇನ್ನಿತರರು ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಯಲ್ಲಿ ಅಜಯ್ ರಾಜ್ ಮಂಗಳೂರು, ಪ್ರಶಾಂತ್ ನಿಟ್ಟೆ ಹಾಗೂ ತೀರ್ಪುಗಾರರಾಗಿ ಸತೀಶ್ ಮೂಡಬಿದ್ರೆ,ದುರ್ಗಾ ಪ್ರಸಾದ್ ಮೂಡಬಿದ್ರೆ ಸಹಕರಿಸಿದರು.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಂಡಿತು.