
ಭಾರತ್ ಟ್ರೋಫಿ 2025ರಲ್ಲಿ ಕಣಕ್ಕಿಳಿಯಲಿದೆ ಕರ್ನಾಟಕದ ತಂಡ
ನವೆಂಬರ್ 2025ರಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ ಭಾರತ್ ಟ್ರೋಫಿ 2025 – ಸ್ಟೇಟ್ ಚಾಂಪಿಯನ್‌ಶಿಪ್ ದೇಶದ ಕ್ರಿಕೆಟ್ ಪ್ರೇಮಿಗಳು ಮತ್ತು ಯುವ ಕ್ರೀಡಾಪಟುಗಳಿಗೆ ಭಾರೀ ಕಾತುರದ ಸ್ಪರ್ಧೆಯಾಗಿದೆ. ಈ ಟೂರ್ನಿಯು ದೇಶದ 16 ರಾಜ್ಯಗಳ ತಂಡಗಳನ್ನು ಒಳಗೊಂಡು, ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಭಾರತದ ಎಲ್ಲಾ ರಾಜ್ಯಗಳಿಂದ ಅತ್ಯುತ್ತಮ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿನ ಉತ್ಕೃಷ್ಟ ಆಟಗಾರರು ತಮ್ಮ ರಾಜ್ಯಗಳ ಗೌರವಕ್ಕಾಗಿ ಕಣಕ್ಕಿಳಿಯಲಿದ್ದಾರೆ.

ಈ ಟೂರ್ನಿಯ ವಿಶೇಷ ಅಂಶವೆಂದರೆ, ಕರ್ನಾಟಕದಿಂದ ಕೂಡ ಒಂದು ತಂಡ ಭಾಗವಹಿಸಲಿದೆ. ಅದು ಕನಾಟಕ ಟೆನಿಸ್ ಬಾಲ್ ಕ್ರಿಕೆಟ್ ನ ವಿವಿಧ ತಂಡದ ಮಾಲೀಕರುಗಳು ಒಟ್ಟು ಸೇರಿ ರಚಿಸಿರುವಂತಹ ನಮ್ಮ ಕರ್ನಾಟಕದ ತಂಡ. ಕರ್ನಾಟಕ ತಂಡ ಈ ಟೂರ್ನಿಯಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ. ಯುವ ಪ್ರತಿಭೆಗಳನ್ನು ಬೆಳೆಸುವ ಉದ್ದೇಶದಿಂದ ತಂಡದ ಮಾಲೀಕರು ಈ ತಂಡವನ್ನು ರಚಿಸಲಿದ್ದು ಕರ್ನಾಟಕದ ಕ್ರೀಡಾ ಸಾಮರ್ಥ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸುವ ಉದ್ದೇಶ ಹೊಂದಿದ್ದಾರೆ.
ಟೂರ್ನಿಯ ಬಹುಮಾನಗಳೂ ಅತ್ಯಂತ ಆಕರ್ಷಕವಾಗಿದ್ದು, ವಿಜೇತರಿಗೆ ₹15 ಲಕ್ಷ ನಗದು ಮತ್ತು ಟ್ರೋಫಿ, ರನ್ನರ್ ಅಪ್‌ಗೆ ₹7 ಲಕ್ಷ ನಗದು ಮತ್ತು ಟ್ರೋಫಿ ನೀಡಲಾಗುವುದು. ಪಾಲ್ಗೊಳ್ಳುವ ತಂಡಗಳಿಗಾಗಿ ಪ್ರವೇಶ ಶುಲ್ಕ ₹1 ಲಕ್ಷ ನಿಗದಿಪಡಿಸಲಾಗಿದೆ. ಪಂದ್ಯಗಳನ್ನು **7070 SPORTS** ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು.
ಕರ್ನಾಟಕದಿಂದ ಏಕೈಕ ತಂಡವಾಗಿ ಭಾರತ್ ಟ್ರೋಫಿ 2025ಕ್ಕೆ ಕರ್ನಾಟಕದ ತಂಡ ಸಜ್ಜಾಗಲಿದೆ! ಕರ್ನಾಟಕದ ಪ್ರತಿನಿಧಿಯಾಗಿ ಭಾರತ್ ಟ್ರೋಫಿ 2025ರಲ್ಲಿ ಕಣಕ್ಕಿಳಿಯಲಿರುವಈ ತಂಡ ಭಾರತ್ ಟ್ರೋಫಿಯಲ್ಲಿ ಕರ್ನಾಟಕದ ಧ್ವಜವನ್ನು ಎತ್ತಿ ಹಿಡಿಯುವಂತಾಗಲಿ ಮತ್ತು ಹೊಸ ಅಧ್ಯಾಯವನ್ನು ಬರೆಯಲಿ ಎಂಬುದು ಕರ್ನಾಟಕದ ನಮ್ಮೆಲ್ಲರ ಆಶಯ.





