3ನೇ ದಿನದಾಟದ ಅಂತ್ಯಕ್ಕೆ ಭಾರತಕ್ಕೆ 244 ರನ್‌ಗಳ ಮುನ್ನಡೆ – ಇಂಗ್ಲೆಂಡ್ ಎದುರು ಬೃಹತ್ ಗುರಿಯ ಚಿತ್ತ
3ನೇ ದಿನದಾಟದ ಅಂತ್ಯಕ್ಕೆ ಭಾರತಕ್ಕೆ 244 ರನ್‌ಗಳ ಮುನ್ನಡೆ.. ಟೀಮ್ ಇಂಡಿಯಾ ಗುರಿ ಗಟ್ಟಿಗೊಳಿಸಲು ಸಜ್ಜು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 13 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 64 ರನ್ ಗಳಿಸಿತ್ತು. ಕೆಎಲ್ ರಾಹುಲ್ 28 ರನ್ , ಕರುಣ್ ನಾಯರ್ 7 ರನ್ ಗಳಿಸಿ ಮೈದಾನದಲ್ಲಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 244 ರನ್‌ಗಳ ಮುನ್ನಡೆಯಲ್ಲಿದೆ. ಪ್ರಸ್ತುತ ಎರಡು ದಿನಗಳ ಆಟ ಬಾಕಿ ಇದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದರು. ಆರಂಭದಿಂದಲೂ ಬಿಗುವಿನ ದಾಳಿ ನಡೆಸಿದ ಸಿರಾಜ್ ಮತ್ತು ಆಕಾಶ್ ದೀಪ್ ತಮ್ಮ ಕ್ಲಾಸಿಕ್ ಬೌಲಿಂಗ್ ಪ್ರದರ್ಶನ ನೀಡಿದರು. ಆಂಗ್ಲರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಸಫಲರಾದರು. ಇಂಗ್ಲೆಂಡ್‌ಗೆ ಭಾರತ ಎಷ್ಟು ಗುರಿಯನ್ನು ನಿಗದಿಪಡಿಸಬೇಕು ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಏಕೆಂದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 371 ರನ್‌ಗಳ ಗುರಿಯನ್ನು ನೀಡಿತು. ಇಂಗ್ಲೆಂಡ್