ಸಮುದಾಯ ಯುವಕ ಮಂಡಲ ತಲ್ಲೂರು ಮತ್ತು ತಲ್ಲೂರು ಫ್ರೆಂಡ್ಸ್ ತಲ್ಲೂರು ಪ್ರಾಯೋಜಕತ್ವದಲ್ಲಿ ತಲ್ಲೂರು ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ 4 ನೇ ಬಾರಿಗೆ ತಲ್ಲೂರು ಪ್ರೀಮಿಯರ್ ಲೀಗ್
(T.P.L-4) 60 ಗಜಗಳ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 3 ಹಾಗೂ 4 ರಂದು ತಲ್ಲೂರು ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಬ್ಲಾಡಿ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಒಟ್ಟು 13 ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯ ಉಪಾಂತ್ಯ ಪಂದ್ಯಗಳಲ್ಲಿ ಕ್ರಮವಾಗಿ
ಸಮುದಾಯ ಸೂಪರ್ ಕಿಂಗ್ಸ್ , ಎಮ್.ಸಿ.ಸಿ ಗರಡಿ ಎ ತಂಡವನ್ನು ಹಾಗೂ ಸಬ್ಲಾಡಿ ನೈಟ್ ರೈಡರ್ಸ್, ಕೋಟೆಬಾಗಿಲು ಫ್ರೆಂಡ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.

ಫೈನಲ್ ನಲ್ಲಿ ಸಬ್ಲಾಡಿ ನೈಟ್ ರೈಡರ್ಸ್ ,ಸಮುದಾಯ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ
ಜಯಿಸಿದೆ.


ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಉಮೇಶ್ ಆಚಾರ್ಯ, ಬೆಸ್ಟ್ ಬೌಲರ್ ಬಾಲಚಂದ್ರ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶಶಾಂಕ್ ಶೆಟ್ಟಿ ಪಡೆದುಕೊಂಡರು…
