ಕ್ರಿಕೆಟ್ಜೂಲನ್ ಗೋಸ್ವಾಮಿ ಅಂದರೆನೇ ಫೈಟಿಂಗ್ ಸ್ಪಿರಿಟ್!

ಜೂಲನ್ ಗೋಸ್ವಾಮಿ ಅಂದರೆನೇ ಫೈಟಿಂಗ್ ಸ್ಪಿರಿಟ್!

-

- Advertisment -spot_img
ಜೂಲನ್ ಗೋಸ್ವಾಮಿ ಅಂದರೆನೇ  ಫೈಟಿಂಗ್ ಸ್ಪಿರಿಟ್!
ಆಕೆ ಇಂದು ಜಾಗತಿಕ ಕ್ರಿಕೆಟಿಗೆ ಗುಡ್ ಬೈ ಹೇಳಲಿದ್ದಾರೆ!
ಲಾರ್ಡ್ಸ್ ಮೈದಾನದಲ್ಲಿ ಇಂದು ಆಕೆಗೆ ಭಾವಪೂರ್ಣ ವಿದಾಯ!
ಇಂದು ಬಹಳಷ್ಟು ಸ್ಪರ್ಧಾತ್ಮಕವೇ ಆಗಿರುವ ಭಾರತೀಯ ಮಹಿಳಾ ಕ್ರಿಕೆಟ್ ರಂಗದಲ್ಲಿ ಇವತ್ತಿನ ದಿನದಲ್ಲಿ  ಇಂಗ್ಲೆಂಡಿನ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್ ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿ ಆಗಲಿದೆ!
40 ವರ್ಷ ಪ್ರಾಯದ ಭಾರತೀಯ ಕ್ರಿಕೆಟಿನ ಆಲರೌಂಡರ್ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂದು ಗುಡ್ ಬೈ  ಹೇಳಲಿದ್ದಾರೆ!
ಅವರು ಇನ್ನೂ ಆಡಲಿ ಎಂದು ನೀವು ಆಸೆ ಪಡಲು ಸಾಧ್ಯ ಇಲ್ಲ! ಏಕೆಂದರೆ ಆಕೆಗೆ ಪ್ರಾಯ 40! ಇಂದಿನ ನಂತರ ನಮ್ಮ   ‘ ಚಕಡಾ ಎಕ್ಸಪ್ರೆಸ್ ‘ ಓಡುವುದಿಲ್ಲ ಅನ್ನುವುದು ಅಪಾರ ನೋವಿನ ಸಂಗತಿ.
ಇಪ್ಪತ್ತು ವರ್ಷ ದೇಶಕ್ಕಾಗಿ ಆಡುವುದು, ನಾಲ್ವತ್ತು ವರ್ಷ ತುಂಬಿದರೂ  ವೇಗದ ಬೌಲರ್ ಆಗಿಯೇ ಮಿಂಚುವುದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ!
ಇಂದು ಭಾರತ ಇಂಗ್ಲೆಂಡಿನ ವಿರುದ್ಧದ ODI ಸರಣಿಯನ್ನು  ಗೆಲ್ಲುವುದರ ಜೊತೆಗೆ ಜೂಲನ್ ಗೋಸ್ವಾಮಿಗೆ  ವಿದಾಯ ಹೇಳುವುದು ಭಾರತದ  ಕ್ರಿಕೆಟ್ ಪ್ರೇಮಿಗಳಿಗೆ ನಿಜವಾದ ರೋಮಾಂಚನವನ್ನು ಕೊಡಲಿದೆ!
ಆಕೆಯು ಬಾರ್ನ್ ಫೈಟರ್! ಅಲ್ಟಿಮೇಟ್ ಚಾಂಪಿಯನ್! ಕೊನೆಯ ಚೆಂಡಿನವರೆಗೂ ಸೋಲನ್ನು ಒಪ್ಪಿಕೊಳ್ಳದೇ ಹೋರಾಡುವ  ಪ್ರಬಲ ಇಚ್ಛಾಶಕ್ತಿ! ಬೆಟ್ಟದಷ್ಟು ಭರವಸೆ ಮತ್ತು ಆತ್ಮವಿಶ್ವಾಸದ ಪ್ರತೀಕ! ಎಲ್ಲಕ್ಕಿಂತಲೂ ಮಿಗಿಲಾಗಿ ಯಾರೊಂದಿಗೂ ಜಗಳ ಮಾಡದ ಸಜ್ಜನಿಕೆಯ ಕ್ರಿಕೆಟರ್!
ಬಂಗಾಳದ ಚಕಡಾ ಎಂಬ ಪುಟ್ಟ ಗ್ರಾಮದಲ್ಲಿ ಕೆಳಮಧ್ಯಮ ವರ್ಗದ ಕುಟುಂಬ ಒಂದರಲ್ಲಿ ಜನಿಸಿದ ಆಕೆಗೆ ಬಾಲ್ಯದಲ್ಲಿ ಫುಟ್ಬಾಲ್ ಮಾತ್ರ ಆಸಕ್ತಿ ಇತ್ತು. ಆದರೆ 1992ರ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದ ನಂತರ ಜೂಲನ್ ಕ್ರಿಕೆಟನಲ್ಲಿ ಆಸಕ್ತಿ ಹೊಂದಿದರು. ಹದಿನೈದನೇ ವರ್ಶಕ್ಕೆ ಅವರ ಕ್ರಿಕೆಟ್ ತರಬೇತಿಯು ಆರಂಭ ಆಯಿತು.
ತನ್ನ ಊರಲ್ಲಿ ಕ್ರಿಕೆಟ್ ಕೋಚಿಂಗ್ ಇಲ್ಲದ ಕಾರಣ ಅವರು ದಿನವೂ ಎರಡೂವರೆ ಗಂಟೆ ಉಸಿರುಕಟ್ಟುವ ರೈಲಿನಲ್ಲಿ ಪ್ರಯಾಣ ಮಾಡಿ ಕೊಲ್ಕತ್ತಕ್ಕೆ ಬರುತ್ತಿದ್ದರು. ಸಂಜೆ ಕತ್ತಲಾದ ನಂತರ ಅದೇ ದಾರಿಯಲ್ಲಿ ಮತ್ತೆ ಹಿಂದೆ ಬರುವುದು ಮತ್ತು ಸುಸ್ತಾಗಿ ಬೇಗ ಮಲಗುವುದು……ಹೀಗೇ ಸಾಗಿತ್ತು ಅವರ ದಿನಚರಿ. ಅದರಿಂದಾಗಿ ಶಿಕ್ಷಣ ಹಿಂದೆ ಬಿತ್ತು! ಆಕೆಗೆ ಯಾರೂ ಪ್ರಾಯೋಜಕರು ಸಿಗದ ಕಾರಣ ಹೆತ್ತವರು ತುಂಬಾ ಸಾಲ ಕೂಡ ಮಾಡಬೇಕಾಯಿತು.
ಆಕೆಯ ಕಠಿಣ ಪರಿಶ್ರಮ, ಆಕ್ರಮಣಕಾರಿ ಪ್ರವೃತ್ತಿ, ಬಲಿಷ್ಠ ತೋಳುಗಳು, ವೇಗದ ಓಟ, ಹೋರಾಟದ ಮನೋಭಾವ  ಆಕೆಯನ್ನು ಜಗತ್ತಿನ ಅತ್ಯುತ್ತಮ ವೇಗದ ಬೌಲರ್ ಆಗಿ ರೂಪಿಸಿದವು. ಅದರ ಜೊತೆಗೆ ಆಕೆ ಮಧ್ಯಮ ಹಂತದ ಬ್ಯಾಟರ್ ಕೂಡ ಆಗಿ ಭಾರತದ ನೆರವಿಗೆ ಬಂದರು.
19ನೇ ವರ್ಷಕ್ಕೆ ಭಾರತೀಯ ಮಹಿಳಾ ತಂಡದ ಮೂಲಕ ಜಾಗತಿಕ ಕ್ರಿಕೆಟ್ ರಂಗವನ್ನು ಪ್ರವೇಶಿಸಿದ ಆಕೆ ಮುಂದೆ ಇಪ್ಪತ್ತು ವರ್ಷ ಭಾರತಕ್ಕಾಗಿ ಆಡಿದರು! ಕೆಲವು ವರ್ಷಗಳ ಕಾಲ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಕೂಡ ಆಗಿ ಮೆರೆದರು.
ಕ್ರಿಕೆಟಿನ ಮೂರೂ ಪ್ರಕಾರಗಳಲ್ಲಿ ಆಕೆಯ ದಾಖಲೆಗಳು ಅತ್ಯುತ್ತಮ ಆಗಿವೆ. ಅದರಲ್ಲಿ ಕೂಡ ಏಕದಿನದ ಪಂದ್ಯಗಳಲ್ಲಿ ಆಕೆಯ ದಾಖಲೆಗಳು ಆಕೆಯ ಶ್ರೇಷ್ಟತೆಗೆ ಸಾಕ್ಷಿ ಹೇಳುತ್ತವೆ!
ಜೂಲನ್ ದಾಖಲೆಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿ ಬರೋಣ ಬನ್ನಿ….
1) 203 ಏಕದಿನದ ಪಂದ್ಯ ಆಡಿರುವ ಜೂಲನ್ ಪಡೆದಿರುವ ಅಂತಾರಾಷ್ಟ್ರೀಯ ವಿಕೆಟಗಳ ಸಂಖ್ಯೆಯು 253! ಇದು ಜಗತ್ತಿನಲ್ಲಿಯೇ ಅತೀ ಹೆಚ್ಚು! ಬೇರೆ ಯಾವ ಮಹಿಳಾ ಬೌಲರ್ ಕೂಡ ಇನ್ನೂ 200ರ ಗಡಿ ದಾಟಿಲ್ಲ!
2)ಆಕೆ ಇಂದು ವೇಗದಲ್ಲಿ ಕೂಡ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ!
3) ಏಕದಿನದ ಪಂದ್ಯಗಳಲ್ಲಿ ಆಕೆ ಲಾಸ್ಟ್ ಓವರ್ ಪರಿಣಿತ ಬೌಲರ್! ತನ್ನ ನಿಯಂತ್ರಣದಿಂದ ಆಕೆ ಭಾರತಕ್ಕೆ ಹತ್ತಾರು ಮ್ಯಾಚ್ ಗೆಲ್ಲಿಸಿ ಕೊಟ್ಟಿದ್ದಾರೆ. ಒಮ್ಮೆ ಲಾಸ್ಟ್ ಓವರ್ ಬೌಲಿಂಗ್ ಮಾಡಿ ಕೇವಲ ಎರಡು ರನ್ ಡಿಫೆಂಡ್ ಮಾಡಿ ಭಾರತವನ್ನು  ಗೆಲ್ಲಿಸಿದ ಉದಾಹರಣೆ ಇದೆ! ಹಲವು ಬಾರಿ ಲಾಸ್ಟ್ ಓವರ್ ಮೇಡನ್ ವಿಕೆಟ್ ಕೂಡ ಅವರ ದಾಖಲೆಯ ಭಾಗ!
4) ಅವರಿಗೆ 2007ರಲ್ಲಿ ‘ಐಸಿಸಿ ಬೆಸ್ಟ್ ಮಹಿಳಾ ಕ್ರಿಕೆಟರ್’ ವಿಶ್ವಮಟ್ಟದ ಪ್ರಶಸ್ತಿಯು ಬಂದಿತ್ತು!
5) ಜೂಲನ್ ಗೊಸ್ವಾಮಿ ಅವರಿಗೆ 2020ರಲ್ಲಿ ‘ದಶಕದ ಬೆಸ್ಟ್ ಮಹಿಳಾ ಕ್ರಿಕೆಟರ್’ ಪ್ರಶಸ್ತಿಯು ದೊರೆಯಿತು! ಮತ್ತು ಆ ಪ್ರಶಸ್ತಿ ಗೆದ್ದ ಮೊದಲ ಭಾರತೀಯರು ಅವರೇ!
ಆಕೆಯ ಫೈಟಿಂಗ್ ಸ್ಪಿರಿಟ್ ಅದ್ಭುತ ಎನ್ನುವುದಕ್ಕೆ ನೂರಾರು ಸಾಕ್ಷಿಗಳು ನಮಗೆ ದೊರೆಯುತ್ತವೆ.
2017ರ ಮಹಿಳಾ ವಿಶ್ವಕಪ್ ಕೂಟದಲ್ಲಿ ಆಕೆಯೇ ಮುಂದೆ ನಿಂತು ಹೋರಾಟ ಸಂಘಟಿಸಿ ಭಾರತವನ್ನು ಫೈನಲಿನವರೆಗೆ ತೆಗೆದುಕೊಂಡು ಬಂದಿದ್ದರು. ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡಕ್ಕೆ ಸೋತಾಗ ಇಡೀ ಕ್ರಿಕೆಟ್ ತಂಡ ಕಣ್ಣೀರು ಹಾಕಿತ್ತು. ಜೂಲನ್ ಪಿಚ್ ಮಧ್ಯದಲ್ಲಿ ಕೂತು ಕಣ್ಣೀರು ಸುರಿಸಿದ ದೃಶ್ಯವು ನನಗೆ ಮರೆತುಹೋಗುವುದಿಲ್ಲ!
ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರತ್ಯೇಕವಾದ ಬೌಲಿಂಗ್ ಕೋಚ್ ಇಲ್ಲದ ಕಾರಣ ಆಕೆ ಬೌಲರ್ ಕಮ್ ಬೌಲಿಂಗ್ ಕೋಚ್ ಆಗಿ ಕೂಡ ಭಾರತದ ಸೇವೆಯನ್ನು  ಮಾಡಿದರು. ಅತ್ಯಂತ ಕ್ಲಿಷ್ಟಕರವಾದ ಪಂದ್ಯಗಳನ್ನು ಆಕೆ ಭಾರತಕ್ಕಾಗಿ ಗೆಲ್ಲಿಸಿಕೊಟ್ಟರು. ಜೂಲನ್ ಕೈಯ್ಯಲ್ಲಿ ಚೆಂಡು ಇರುವ ತನಕ ಭಾರತದ ಕ್ರಿಕೆಟ್ ತಂಡವು  ಸೋಲುವುದಿಲ್ಲ ಅನ್ನುವುದು ಜನಪ್ರಿಯ ನಂಬಿಕೆ! ಅದನ್ನು ಅವರು ಎಂದಿಗೂ ಸುಳ್ಳು ಮಾಡಿಲ್ಲ!
ಜೂಲನ್ ದಾಖಲೆಗಾಗಿ ಯಾವ ಪಂದ್ಯವನ್ನೂ ಆಡದೆ ಭಾರತದ ಗೆಲುವಿಗಾಗಿ ಆಡಿದರು.
ಒಂದು ಕಾಲದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು ಹಿನ್ನಡೆಯನ್ನು ಅನುಭವಿಸುತ್ತಾ ಇದ್ದಾಗ ಇದೇ ಜೂಲನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್, ಮಿತಾಲಿ ರಾಜ್, ಕೃಷ್ಣಮೂರ್ತಿ, ಸ್ಮೃತಿ  ಮಂದಾನಾ ಮೊದಲಾದವರು  ಭಾರತದ ಕೀರ್ತಿಯ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದು ಉಲ್ಲೇಖನೀಯ. ಅದರಲ್ಲಿಯೂ ಜೂಲನ್ ಮಹಿಳಾ ಕ್ರಿಕೆಟಿನ ‘ಅಮೇಜಾನ್ ನದಿ’ ಎಂದು ನಾವು  ಖಂಡಿತ ಕರೆಯಬಹುದು!
ಆಕೆಗೆ ಈಗಾಗಲೇ ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಎಲ್ಲವೂ ದೊರೆತಿವೆ. ಈ ವರ್ಷ ‘ಧ್ಯಾನಚಂದ್ ಖೇಲ್ ರತ್ನ’ ಪ್ರಶಸ್ತಿಯು ಕೂಡ  ದೊರೆಯಲಿ ಎನ್ನುವುದು ನನ್ನ  ಹಾರೈಕೆ. ಆಕೆಯ ಹೆಸರಿನಲ್ಲಿ ಭಾರತೀಯ ಅಂಚೆ ಇಲಾಖೆಯು ಸ್ಟಾಂಪ್ ಬಿಡುಗಡೆ ಮಾಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಆಕೆಯ ಬದುಕಿನ ಹೋರಾಟದ ಕತೆಯನ್ನು ಆಧಾರವಾಗಿಟ್ಟುಕೊಂಡು ಪ್ರೇರಣಾದಯಕ
‘ ಚಕಡಾ ಎಕ್ಸಪ್ರೆಸ್’ ಎಂಬ ಹಿಂದೀ ಸಿನೆಮಾವು 2017ರಲ್ಲಿ ಬಿಡುಗಡೆ ಆಗಿದೆ. ಆ ಸಿನೆಮಾವನ್ನು ನೀವು ನೋಡಿದರೆ ಪಶ್ಚಿಮ ಬಂಗಾಳದ ‘ನೆಹರೂ ಪಾರ್ಕಿನಿಂದ’ ಆರಂಭವಾಗಿ ಇಂಗ್ಲೆಂಡಿನ ವೈಭವದ ‘ಲಾರ್ಡ್ಸ್  ಮೈದಾನದವರೆಗೆ’  ತಲುಪಿದ ಅವರ ಯಶೋಗಾಥೆಯು ನಮ್ಮ ಕಣ್ಣ ಮುಂದೆ ಬರುತ್ತದೆ! ಆಕೆಯ ಬಗ್ಗೆ ನಿಜವಾಗಿ ಹೆಮ್ಮೆ ಮೂಡುತ್ತದೆ.
ಆಕೆಯು ಭಾರತದ ಮಹಿಳಾ ಕ್ರಿಕೆಟ್ ವೈಭವದ ಒಂದು ‘ಸುವರ್ಣ ಅಧ್ಯಾಯ’ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ!
ಓವರ್ ಟು ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್! ಅಲ್ವಿದಾ ಜೂಲನ್ ಗೋಸ್ವಾಮಿ  ಮೇಡಂ!

LEAVE A REPLY

Please enter your comment!
Please enter your name here

thirteen + 11 =

Latest news

Vodka онлайн казино – обзор

Vodka онлайн казино - обзор ...

Пин Ап казино – Официальный сайт Pin Up Casino вход на зеркало

Пин Ап казино - Официальный сайт Pin Up Casino вход на зеркало ...

OnLuck Casino: Quick Play for Instant Thrills and Fast Wins

When you’re in the mood for a burst of excitement without the long‑haul grind, OnLuck Casino offers a playground...

MonsterWin: Bei Schnell‑Erfolgen und Blitz‑Slots zuschlagen

Wenn du nach einem Nervenkitzel suchst, der in Sekunden spürbar ist, liefert MonsterWin ein Arsenal an Spielen, die die...
- Advertisement -spot_imgspot_img

Dynabet: Quick‑Hit Slots and Lightning‑Fast Roulette for Short‑Session Thrills

When your phone buzzes and you’re on a quick coffee break, you want a casino that responds as fast...

Ballersbet: Quick‑Fire Gaming for the On‑The‑Go Player

1. Why Ballersbet Loves Short, High‑Intensity SessionsBallersbet has carved out a niche for players who crave adrenaline without the...

Must read

- Advertisement -spot_imgspot_img

You might also likeRELATED
Recommended to you