Home ಕ್ರಿಕೆಟ್ ಐಸಿಸಿ ಚಾಂಪಿಯನ್ಸ್ ಟ್ರೋಫಿ: ರಿಷಭ್ ಪಂತ್‌ಗಿಂತ ರಾಹುಲ್ ಯಾಕೆ ಬೆಟರ್?

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರಿಷಭ್ ಪಂತ್‌ಗಿಂತ ರಾಹುಲ್ ಯಾಕೆ ಬೆಟರ್?

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರಿಷಭ್ ಪಂತ್‌ಗಿಂತ ರಾಹುಲ್ ಯಾಕೆ ಬೆಟರ್?

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರಿಷಭ್ ಪಂತ್‌ಗಿಂತ ರಾಹುಲ್ ಯಾಕೆ ಬೆಟರ್?

ಮಿನಿ ವಿಶ್ವಕಪ್ ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಿನ್ನು ಒಂದು ತಿಂಗಳಷ್ಟೇ ಬಾಕಿ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೆಬ್ರವರಿ 19ರಂದು ಆರಂಭವಾಗಲಿದ್ದು, ಪಂದ್ಯಗಳು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿವೆ.

ಮಿನಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಜನವರಿ 12ರಂದು ನಡೆಯಲಿದ್ದು, ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯುವುದು ಬಹುತೇಕ ಖಚಿತ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗಿ ಕೆ.ಎಲ್ ರಾಹುಲ್ ಆಯ್ಕೆಯಾಗುವ ಸಾಧ್ಯತೆಯಿದೆ. ಟೆಸ್ಟ್ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಆದರೆ ಅಂಕಿ ಅಂಶಗಳ ಪ್ರಕಾರ ರಿಷಭ್ ಪಂತ್’ಗಿಂತ ರಾಹುಲ್ ಅವರೇ ಉತ್ತಮ ಆಯ್ಕೆ.

ಏಕದಿನ ಕ್ರಿಕೆಟ್’ನಲ್ಲಿ ರಾಹುಲ್ Vs ರಿಷಭ್ ಪಂತ್

ಕೆ.ಎಲ್ ರಾಹುಲ್
ಪಂದ್ಯ: 77
ರನ್: 2851
ಸರಾಸರಿ: 49.15
ಸ್ಟ್ರೈಕ್’ರೇಟ್: 87.56
ಶತಕ: 07
ಅರ್ಧಶತಕ: 18
ಬೌಂಡರಿ: 226
ಸಿಕ್ಸರ್: 61

ರಿಷಭ್ ಪಂತ್
ಪಂದ್ಯ: 31
ರನ್: 871
ಸರಾಸರಿ: 33.50
ಸ್ಟ್ರೈಕ್’ರೇಟ್: 106.21
ಶತಕ: 01
ಅರ್ಧಶತಕ: 05
ಬೌಂಡರಿ: 91
ಸಿಕ್ಸರ್: 26

ಗಾಯದಿಂದ ಚೇತರಿಸಿಕೊಂಡ ನಂತರ ರಿಷಭ್ ಪಂತ್ ಕೇವಲ ಒಂದು ಏಕದಿನ ಪಂದ್ಯವಾಡಿದ್ದಾರೆ. ಮತ್ತೊಂದೆಡೆ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಏಕದಿನ ತಂಡದ ಖಾಯಂ ವಿಕೆಟ್ ಕೀಪರ್ ಆಗಿರುವ ಕೆ.ಎಲ್ ರಾಹುಲ್ ಕಳೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಭಾರತ ಫೈನಲ್ ಪ್ರವೇಶಿಸಲು ಕಾರಣರಾಗಿದ್ದರು. ಆ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ 10 ಪಂದ್ಯಗಳಿಂದ 452 ರನ್ ಕಲೆ ಹಾಕಿದ್ದರು. ಐದನೇ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಏಕದಿನ ತಂಡದ ಆಧಾರಸ್ಥಂಭವಾಗಿರುವ ರಾಹುಲ್, ಮಿನಿ ವಿಶ್ವಕಪ್”ನಲ್ಲಿ ತಂಡದ ಮೊದಲ ಪ್ರಾಶಸ್ತ್ಯದ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆಯಾಗಲಿದ್ದಾರೆ.

LEAVE A REPLY

Please enter your comment!
Please enter your name here

7 + 19 =

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರಿಷಭ್ ಪಂತ್‌ಗಿಂತ ರಾಹುಲ್ ಯಾಕೆ ಬೆಟರ್?

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರಿಷಭ್ ಪಂತ್‌ಗಿಂತ ರಾಹುಲ್ ಯಾಕೆ ಬೆಟರ್? ಮಿನಿ ವಿಶ್ವಕಪ್ ಖ್ಯಾತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಿನ್ನು ಒಂದು ತಿಂಗಳಷ್ಟೇ ಬಾಕಿ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೆಬ್ರವರಿ 19ರಂದು ಆರಂಭವಾಗಲಿದ್ದು, ಪಂದ್ಯಗಳು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿವೆ. ಮಿನಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ಜನವರಿ 12ರಂದು ನಡೆಯಲಿದ್ದು, ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯುವುದು ಬಹುತೇಕ ಖಚಿತ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗಿ ಕೆ.ಎಲ್ ರಾಹುಲ್ ಆಯ್ಕೆಯಾಗುವ ಸಾಧ್ಯತೆಯಿದೆ. ಟೆಸ್ಟ್ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಆದರೆ ಅಂಕಿ ಅಂಶಗಳ ಪ್ರಕಾರ ರಿಷಭ್ ಪಂತ್’ಗಿಂತ ರಾಹುಲ್ ಅವರೇ ಉತ್ತಮ ಆಯ್ಕೆ. ಏಕದಿನ ಕ್ರಿಕೆಟ್’ನಲ್ಲಿ ರಾಹುಲ್ Vs ರಿಷಭ್ ಪಂತ್ ಕೆ.ಎಲ್ ರಾಹುಲ್ ಪಂದ್ಯ: 77 ರನ್: 2851 ಸರಾಸರಿ: 49.15 ಸ್ಟ್ರೈಕ್’ರೇಟ್: 87.56 ಶತಕ: 07 ಅರ್ಧಶತಕ: 18 ಬೌಂಡರಿ: 226 ಸಿಕ್ಸರ್: 61

Send this to a friend