7.6 C
London
Thursday, December 12, 2024
Homeಟೆನಿಸ್ಹಾಲ್ ಆಫ್ ಫೇಮ್ ಕಿರೀಟಕ್ಕೆ ಹೊಸ "ಪೇಸ್"

ಹಾಲ್ ಆಫ್ ಫೇಮ್ ಕಿರೀಟಕ್ಕೆ ಹೊಸ “ಪೇಸ್”

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ತೊಂಬತ್ತರ ದಶಕದ ಚಂದದ ಬೆಳಗಿನ ಕಾಲವದು. ದಿನ ಶುರುವಾಗುತ್ತಿದ್ದದ್ದು ಬೆಳಗ್ಗೆ ಏಳರ ವಾರ್ತೆಗಳಿಂದ. ಯಾವುದೇ ಉದ್ರೇಕ ಉದ್ವೇಗಗಳಿಲ್ಲದೇ ವಾರ್ತೆಗಳನ್ನೋದುತ್ತಿದ್ದ ವಾಚಕರು ಮೊದಲು ಒಂದೆರಡು ನಿಮಿಷಗಳಲ್ಲಿ ವಾರ್ತೆಗಳ ಸಾರಾಂಶವನ್ನು ಹೇಳುತ್ತಿದ್ದರು. ಸಾರಾಂಶದ ಕೊನೆಯ ಸಾಲು ಕ್ರೀಡಾ ಸುದ್ದಿ. ಯಾವುದೋ ದೇಶದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುವ ಕಾಲ. ‘ಭಾರತ್ ಕೀ ಜೀತ್ ‘ ಎನ್ನುವುದು ಸಾರಾಂಶವಾದರೆ ವಾರ್ತೆಗಳನ್ನು ಪೂರ್ತಿ ನೋಡುವುದು, ‘ಹಾರ್ ‘ ಎನ್ನುವ ಕಹಿ ಸಾಲು ವಾರ್ತೆಯ ಸಾರಾಂಶದಲ್ಲಿ ಕೇಳಿಬಂದರೆ ಟಿವಿ ಆಫ್.

ಆದರೆ ಕ್ರಿಕೆಟ್ ಎನ್ನುವ ಆಟವನ್ನು ಮೀರಿಯೂ ಕ್ರೀಡಾ ಸುದ್ದಿ ಕೇಳಲು ಪ್ರೇರೆಪಿಸುತ್ತಿದ್ದದ್ದು ಟೆನ್ನಿಸ್ ಎನ್ನುವ ಸಿರಿವಂತ ಕ್ರೀಡೆ. ಗ್ರಾಂಡ ಸ್ಲಾಮ್ ಟೂರ್ನಿಗಳು ಆರಂಭವಾದರೆ ಸಾಕು, ಹದಿನೈದು ನಿಮಿಷಗಳ ದೂರದರ್ಶನದ ವಾರ್ತೆಗಳು ನಮಗೆ ಜೀವದ್ರವ್ಯ. ಮೊದಲ ಸುತ್ತು, ಎರಡನೇ ಸುತ್ತು, ಉಪಾಂತ್ಯ, ಅಂತಿಮ ಪಂದ್ಯವೆನ್ನುತ್ತ ಪ್ರತಿ ಪಂದ್ಯದ ಫಲಿತಾಂಶ ಕೇಳುತ್ತ ಹೋದರೆ ರೋಮಾಂಚನ. ಭಾರತೀಯತೆಯ ಹೆಮ್ಮೆ. ಹಾಗೆ ಭಾರತೀಯತೆಯ ಹೆಮ್ಮೆಗೆ ಕಾರಣನಾದವರ ಪೈಕಿ ಅಗ್ರಗಣ್ಯ ಈ ಲಿಯಾಂಡರ್ ಫೇಸ್.

ರಾಫಾ ನಡಾಲ್ ,ಫೆಡರರ್ ಎನ್ನುವ ಪದಗಳನ್ನು ನಾವು ತೊದಲುವ ಮುನ್ನವೇ ,ಟೆನ್ನಿಸ್ ಜಗತ್ತಿಗೆ ಭಾರತೀಯ ಹರೆಯದ ಹುಡುಗರನ್ನು ಆಕರ್ಷಿಸಿದವನೀತ. ಪತ್ರಿಕೆಯ ಕೊನೆಯ ಪುಟದಲ್ಲಿ ನಾವು ಹುಡುಕುತ್ತಿದ್ದದ್ದು’ ಲಿಹೇಶ ‘ ಜೋಡಿಯ ಹೆಸರು. ಬಹುಶಃ ಲಿಯಾಂಡರ್ ಹಿರಿಯ. ಮುಂದೊಮ್ಮೆ ಜೋಡಿಯ ನಡುವಿನ ವೈಮನಸ್ಸು ಭಾರತೀಯ ಜೋಡಿಯನ್ನು ಬೇರೆಯಾಗಿಸಿತು. ಅದಾದ ನಂತರವೂ ಲಿಯಾಂಡರ್ ನ ಗೆಲುವುಗಳಲ್ಲಿ ಕೊರತೆಯೇನಾಗಲಿಲ್ಲ.ಪರಿಣಾಮವಾಗಿ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ನ ವಿಭಾಗದಲ್ಲಿ ನಾಲ್ಕೂ ಗ್ರಾಂಡ್ ಸ್ಲಾಮ್ ಗೆದ್ದ ಭಾರತದ ಏಕೈಕ ಮತ್ತು ವಿಶ್ವದ ಮೂರನೇ ಪುರುಷ ಆಟಗಾರನಾದ.

ದೇಶಕ್ಕಾಗಿ ಆಡುವ ಸಂದರ್ಭ ಬಂದಾಗ ಆತನ ಆಟ ಯಾವ ಮಹಾನ್ ಆಟಗಾರರಿಗೂ ಕಮ್ಮಿಯಿರಲಿಲ್ಲ. ನಿಮಗೆ ಗೊತ್ತಿರಲಿ, ಗ್ರಾಂಡ್ ಸ್ಲಾಮ್ ಗಳ ಹೊರತಾಗಿ ಟೆನ್ನಿಸ್ ನಲ್ಲಿ ದೇಶ ದೇಶಗಳ ನಡುವೆ ನಡೆಯುವ ಪಂದ್ಯಾಟವಿರುತ್ತದೆ. ಹಾಗಿರುವ ಟೂರ್ನಿಗಳ ಪೈಕಿ ಡೇವಿಸ್ ಕಪ್ ಅತ್ಯಂತ ಮಹತ್ವದ್ದು. ಒಂದರ್ಥದಲ್ಲಿ ಡೇವಿಸ್ ಕಪ್ ಎನ್ನುವುದು ಟೆನ್ನಿಸ್ ಜಗತ್ತಿನ ವಿಶ್ವಕಪ್ ಇದ್ದಂತೆ.ಇಂಥದ್ದೊಂದು ಟೂರ್ನಿಯಲ್ಲಿ ಲಿಯಾಂಡರ್ ನ ಸಾಧನೆ ವಿಶ್ವದ ಅಗ್ರಗಣ್ಯ ಆಟಗಾರರನ್ನೂ ಮೀರಿಸುವಂಥದ್ದು. ಆಡಿದ 58 ಪಂದ್ಯಗಳಲ್ಲಿ 45 ಡಬಲ್ಸ್ ಪಂದ್ಯಗಳನ್ನು ಗೆದ್ದಿರುವ ಆತ ಒಟ್ಟೂ ಪಂದ್ಯಗಳನ್ನು ಗೆದ್ದ ಅಗ್ರಸ್ಥಾನಿಗಳ ಪೈಕಿ ನಾಲ್ಕನೇ ಶ್ರೇಯಾಂಕದಲ್ಲಿ ನಿಂತಿರುವ ಆಟಗಾರ. ಒಟ್ಟೂ ಗೆಲುವುಗಳ ಲೆಕ್ಕಾಚಾರದಲ್ಲಿ ವಿಶ್ವ ಡೇವಿಸ್ ಕಪ್ ನ ಅತ್ಯಂತ ಯಶಸ್ವಿ ಆಟಗಾರ ಎನ್ನುವ ಹಣೆಪಟ್ಟಿ ಕೂಡ ಆತನದ್ದೇ ಎಂದರೆ ದೇಶಕ್ಕಾಗಿ ಆಡುವಾಗಿನ ಆತನ ಹುಮ್ಮಸ್ಸು ಎಂಥದ್ದಿರಬೇಕು ಊಹಿಸಿ. ಅಟ್ಲಾಂಟಾ ಓಲಿಂಪಿಕ್ಸ್ ನ ಕಂಚು, ಟೂರ್ನಿಯೊಂದರಲ್ಲಿ ವಿಶ್ವಶ್ರೇಷ್ಠ ಆಟಗಾರ ಸಾಂಪ್ರಾಸ್ ನ ಮೇಲಿನ ಗೆಲುವು ಅಭಿಮಾನಿಗಳಿಗೆ ತುಂಬ ನೆನಪಿನಲ್ಲುಳಿಯುವ ಗೆಲವುಗಳು.

ಹೀಗಿದ್ದ ಸಾಧಕನ ಸಾಧನೆಗೆ ಮೊನ್ನೆಯಷ್ಟೇ ಆತನನ್ನು ‘ಅಂತರಾಷ್ಟ್ರೀಯ ಹಾಲ್ ಆಫ್ ಫೇಮ್ ‘ನ ಸೇರಿಸಲಾಯಿತು. ಜೊತೆಗೆ ಮತ್ತೊಬ್ಬ ದಂತಕತೆ ವಿಜಯ್ ಅಮೃತರಾಜ್. ಅದರೆ ಅದ್ಯಾಕೊ ಟೆನ್ನಿಸಿಗಿಂತ ಹೆಚ್ಚು ಗ್ಲಾಮರ್ ನಿಂದ ಮಾಧ್ಯಮವನ್ನು ಆಕರ್ಷಿಸಿದ್ದ ಸಾನಿಯಾಳ ವಿದಾಯಕ್ಕೆ ಸಿಕ್ಕ ಪ್ರಚಾರ ಲಿಯಾಂಡರ್ ನ ಹಾಲ್ ಆಫ್ ಫೇಮ್ ನ ಸೇರ್ಪಡೆಗೆ ಸಿಗಲಿಲ್ಲ ನೋಡಿ. ಅಷ್ಟಾಗಿಯೂ ಈ ಕ್ರೀಡಾ ಮಾಂತ್ರಿಕನ ನಿಜವಾದ ಮೌಲ್ಯ ಅಭಿಮಾನಿಗಳ ಮನಸಿನಿಂದ ಮಾಯವಾಗಿಲ್ಲವೆನ್ನುವುದಂತೂ ಸತ್ಯ. ಸಿಕ್ಕ ಪ್ರಚಾರ ಈ ಮಹಾನ್ ಆಟಗಾರರ ‘ಹಾಲ್ ಆಫ್ ಫೇಮ್ ‘ನ ಸೇರ್ಪಡೆಗೆ ಸಿಗಲಿಲ್ಲ ನೋಡಿ. ಅಷ್ಟಾಗಿಯೂ ಲಿಯಾಂಡರ್ ಎನ್ನುವ ಕ್ರೀಡಾ ಮಾಂತ್ರಿಕನ ನಿಜವಾದ ಮೌಲ್ಯ ಅಭಿಮಾನಿಗಳ ಮನಸಿನಿಂದ ಮಾಯವಾಗಿಲ್ಲವೆನ್ನುವುದಂತೂ ಸತ್ಯ.

Latest stories

LEAVE A REPLY

Please enter your comment!
Please enter your name here

15 + 2 =