ಕಾರವಾರದಲ್ಲಿ ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕ್ರಿಕೆಟ್ ಟೂರ್ನಿ

ಕಾರವಾರದಲ್ಲಿ ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕ್ರಿಕೆಟ್ ಟೂರ್ನಿ

ಕಾರವಾರದಲ್ಲಿ ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕ್ರಿಕೆಟ್ ಟೂರ್ನಿ

ಕಾರವಾರ: ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ವತಿಯಿಂದ ಏಪ್ರಿಲ್ 25ರಿಂದ 27ರವರೆಗೆ ಕಾರವಾರದ ಮಾಲಾ ದೇವಿ ಕ್ರೀಡಾಂಗಣದಲ್ಲಿ ‘ಉತ್ತರ ಕನ್ನಡ ಜಿಲ್ಲಾ ಮಟ್ಟದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ’ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಪಂದ್ಯಾವಳಿಯ ವಿಜೇತರಿಗೆ ಪ್ರಥಮ ಬಹುಮಾನ ₹ 75 ಸಾವಿರ, ದ್ವಿತೀಯ ₹ 55 ಸಾವಿರ, ತೃತೀಯ ಬಹುಮಾನ ₹ 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ಹಲವಾರು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.

6 ಓವರುಗಳ ಈ ಪಂದ್ಯಾವಳಿಯನ್ನು ಭಾರಿ ವಿಜ್ರಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದ್ದು, ಪಂದ್ಯಾವಳಿಯ ನೇರ ಪ್ರಸಾರ ಇರುತ್ತದೆ. ಇಂಡಿಯನ್ ಯೂಥ್ ಕಾಂಗ್ರೆಸ್ ಸಹಕಾರದೊಂದಿಗೆ ಕರ್ನಾಟಕ ಪ್ರದೇಶ್ ಯುವ ಕಾಂಗ್ರೆಸ್ ಹಮ್ಮಿಕೊಂಡ ಪಂದ್ಯಾವಳಿಯನ್ನು ಸ್ಪೋರ್ಟ್ಸ್ ಕನ್ನಡ ಬಿತ್ತರಿಸಲಿದೆ.

Leave a Reply

Your email address will not be published. Required fields are marked *