Categories
ಕ್ರಿಕೆಟ್

ಡೈನಾಮಿಕ್ ಡ್ಯಾಶರ್ಸ್ ದಂಡಿನದಿಬ್ಬ ತಂಡ “ಲಕ್ಷ್ಮೀಪುರ ಪ್ರಿಮಿಯರ್ ಲೀಗ್-2019″ರ ಚಾಂಪಿಯನ್

ಲಕ್ಷ್ಮೀಪುರ ಲಯನ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ,ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟ ಮಧುಗಿರಿ ಸಮೀಪದ ಬಡವನಹಳ್ಳಿ ಅಂಕಣದಲ್ಲಿ 2 ದಿನಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ ಪ್ರಥಮ ಆವೃತ್ತಿಯ “ಲಕ್ಷ್ಮೀಪುರ ಪ್ರಿಮಿಯರ್ ಲೀಗ್” ಕಳೆದ ಶನಿವಾರ 12 ಮತ್ತು ರವಿವಾರ 13 ರಂದು ಜರುಗಿತ್ತು.

ಶಶಿಕುಮಾರ್ ಸಾರಥ್ಯದಲ್ಲಿ ಯುವ ಸ್ನೇಹಿತರ ಪಡೆಯ ಸಹಕಾರದೊಂದಿಗೆ ತುಮಕೂರು ಪರಿಸರದ 2 ಐಕಾನ್ ಆಟಗಾರರನ್ನು ಒಳಗೊಂಡ 10 ಫ್ರಾಂಚೈಸಿಗಳು ಪ್ರತಿಷ್ಟಿತ ಪ್ರಶಸ್ತಿಗಾಗಿ ಸೆಣಸಾಡಿತ್ತು.

ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾಕೂಟದ ಮೊದಲ ಕ್ವಾಲಿಫೈಯರ್ ಸುತ್ತಿನಲ್ಲಿ ವಂಶಿ ಮಧುಗಿರಿಯನ್ನು ಸೋಲಿಸಿದ ಡೈನಾಮಿಕ್ ಡ್ಯಾಶರ್ಸ್ ದಂಡಿನದಿಬ್ಬ ನೇರವಾಗಿ ಫೈನಲ್ ಗೆ ಜಿಗಿದಿತ್ತು. ಎಲಿಮಿನೇಟರ್ ಸುತ್ತಿನಲ್ಲಿ ರಾಕ್ ತುಮಕೂರು, ಪ್ರಿನ್ಸ್ ತಂಡವನ್ನು ಸೋಲಿಸಿದರೆ 2 ನೇ ಕ್ವಾಲಿಫೈಯರ್ ನಲ್ಲಿ ರಾಕ್ ತುಮಕೂರು ತಂಡವನ್ನು ವಂಶಿ ಬ್ರದರ್ಸ್ ತಂಡ ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿತ್ತು.

ಫೈನಲ್ ನಲ್ಲಿ ಡೈನಾಮಿಕ್ ಡ್ಯಾಶರ್ಸ್ ತಂಡ ವಂಶಿ ಬ್ರದರ್ಸ್ ಮಧುಗಿರಿಯ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.ಪ್ರಥಮ ಪ್ರಶಸ್ತಿಯಾಗಿ 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ವಂಶಿ ಬ್ರದರ್ಸ್ 50,000 ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು.

ವೈಯಕ್ತಿಕ ಬಹುಮಾನಗಳು ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ರಾಕ್ ತುಮಕೂರಿನ ಶಂಕು, ಬೆಸ್ಟ್ ಬೌಲರ್ ಡೈನಾಮಿಕ್ ನ ಅರ್ಜುನ್, ಬೆಸ್ಟ್ ಕೀಪರ್ ಪ್ರಿನ್ಸ್ ನೆಪೋಲಿ, ಬೆಸ್ಟ್ ಕೀಪರ್ ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಡೈನಾಮಿಕ್ ನ ರ‌್ಯಾಂಡಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವಂಶಿಯ ಗಿರೀಶ್ ಪಡೆದುಕೊಂಡರು.

2 ವಾರಗಳ ಹಿಂದೆ ನಡೆದ ಆಟಗಾರರ ಹರಾಜು‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಅನುಭವಿ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ಈ ಪಂದ್ಯಾಕೂಟದ ವೀಕ್ಷಕ ವಿವರಣೆಯ ಸಾರಥ್ಯವನ್ನು ವಹಿಸಿದ್ದರು.

ಗಿರೀಶ್ ರಾವ್ ನೇತೃತ್ವದ “ಕ್ರಿಕ್ ಸೇ” ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಬಿತ್ತರಿಸಿತ್ತು.

ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

4 × one =