
17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ ಸಾವಿರ ಪಂದ್ಯಗಳಲ್ಲಿ ಅಷ್ಟೂ ತಂಡಗಳು ಕನಿಷ್ಠ 200 ಪಂದ್ಯಗಳಲ್ಲಾದರೂ ಹೀನಾಯವಾಗಿ ಸೋತಿವೆ. ಆದರೆ ಯಾವ ಫ್ರಾಂಚೈಸಿ owner ಕೂಡ ಈ ಸಂಜೀವ್ ಗೋಯೆಂಕಾನಂತೆ ವರ್ತಿಸಿಲ್ಲ.
ನಿನ್ನೆ ಹೈದರಾಬಾದ್ ತಂಡದ ವಿಧ್ವಂಸಕ ಆಟಕ್ಕೆ ಲಕ್ನೋ ತಂಡ ಧೂಳೀಪಟವಾದ ನಂತರ ಲಕ್ನೋ ಕ್ಯಾಪ್ಟನ್ ಕೆ.ಎಲ್ ರಾಹುಲ್ ಜೊತೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದ ವೀಡಿಯೊ ವೈರಲ್ ಆಗಿದೆ. ರಾಹುಲ್ ಮೇಲೆ ಗೋಯೆಂಕಾ ರೇಗಾಡುತ್ತಿದ್ದದ್ದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಕ್ರಿಕೆಟ್ ABCD ಗೊತ್ತಿಲ್ಲದ ವ್ಯಕ್ತಿಯೊಬ್ಬ, ಜೀವನದಲ್ಲಿ ಎಂದಿಗೂ ಬ್ಯಾಟನ್ನೇ ಹಿಡಿಯದ ಮನುಷ್ಯನೊಬ್ಬ ಎದುರಲ್ಲಿ ನಿಂತು ಕ್ರಿಕೆಟ್ ಪಾಠ ಹೇಳುತ್ತಿದ್ದರೆ, ರಾಹುಲ್ ಮಾತ್ರ ಎಲ್ಲೂ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದ.

ಇದೇ ಸಂಜೀವ್ ಗೋಯೆಂಕಾ ನಮ್ಮ ದೇಶದ ಕ್ರಿಕೆಟ್ ಹೆಮ್ಮೆ ಎಂ.ಎಸ್ ಧೋನಿಯವರನ್ನು ಹೀಗೇ ಅವಮಾನಿಸಿದ್ದರು. 2017ರಲ್ಲಿ ರೈಸಿಂಗ್ ಪುಣೆ ತಂಡದ ಓನರ್ ಆಗಿದ್ದ ಗೋಯೆಂಕಾ, ತಂಡ ಸತತ ಸೋಲುಗಳನ್ನು ಕಾಣುತ್ತಿದ್ದ ಹಿನ್ನೆಲೆಯಲ್ಲಿ ತಂಡದ ನಾಯಕತ್ವದಿಂದ ಧೋನಿ ಅವರನ್ನು ಕೆಳಗಿಳಿಸುವ ನಿರ್ಧಾರ ತೆಗೆದುಕೊಂಡಿದ್ದರು.
ಮಿಸ್ಟರ್ ಸಂಜೀವ್ ಗೋಯೆಂಕಾ..,
ನೀವು ದುಡ್ಡಿನಲ್ಲಿ ದೊಡ್ಡವರಾಗಿರಬಹುದು. ಇಡೀ ವ್ಯವಸ್ಥೆಯನ್ನೇ ಖರೀದಿಸುವಷ್ಟು ಶ್ರೀಮಂತನಾಗಿರಬಹುದು. ಆದರೆ ಹೃದಯ ಶ್ರೀಮಂತಿಕೆಯೇ ಇಲ್ಲದ ಮೇಲೆ, ಕನಿಷ್ಠ ಕಾಮನ್’ಸೆನ್ಸ್ ಇಲ್ಲದ ಮೇಲೆ ನಿಮ್ಮಲ್ಲಿ ಎಷ್ಟು ದುಡ್ಡಿದ್ದರೇನು ಪ್ರಯೋಜನ..?
Yes.. ತಂಡ ನಿಮ್ಮ ನಿರೀಕ್ಷೆಗೆ ತಕ್ಕಂತೆ ಆಡದಿದ್ದಾಗ, ಸಾವಿರಾರು ಕೋಟಿ ಬಂಡವಾಳ ಹಾಕಿರುವ ನಿಮಗೆ ನಾಯಕನನ್ನು ಪ್ರಶ್ನಿಸುವ ಹಕ್ಕು ಮತ್ತು ಅಧಿಕಾರ ಇದ್ದೇ ಇದೆ. ಆದರೆ ಅದಕ್ಕೊಂದು ಸಮಯ, ಸಂದರ್ಭ ಎಂಬುದು ಬೇಡವೇ..? ಇದೆಲ್ಲಾ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಬೇಕಾದ ವಿಚಾರ. ಅದು ಬಿಟ್ಟು ಒಬ್ಬ ಪುಡಾರಿಯಂತೆ ವರ್ತಿಸುವುದು..?
ಸಂಜೀವ್ ಗೋಯೆಂಕಾ ಅವರೇ..
ನೆನಪಿರಲಿ.. ರಾಹುಲ್ ಈ ದೇಶದ ಕ್ರಿಕೆಟ್ ಹೀರೋ. ಕರ್ನಾಟಕದ ಹೆಮ್ಮೆ. ಅವನನ್ನು ಅವಮಾನಿಸುವ ಯಾವ ಅಧಿಕಾರವೂ ನಿಮಗಿಲ್ಲ. ದುಡ್ಡು ಚೆಲ್ಲಿದ್ದೀರಿ ಎಂಬ ಕಾರಣಕ್ಕೆ ಆತ ನಿಮ್ಮ ಮನೆಯ ಆಳಲ್ಲ. ರಾಹುಲ್ ನಾಯಕತ್ವ ನಿಮಗೆ ಇಷ್ಟವಿಲ್ಲ ಎಂದಾದರೆ, ಮುಂದಿನ ವರ್ಷ ಅವನನ್ನು ತಂಡದಲ್ಲಿ ಮುಂದುವರಿಸದಿರುವ ಆಯ್ಕೆ ನಿಮ್ಮ ಕೈಯಲ್ಲೇ ಇದೆ. ಆದರೆ ಈ ರೀತಿಯ ವರ್ತನೆಯನ್ನು ಯಾವ ಕ್ರಿಕೆಟ್ ಪ್ರೇಮಿಯೂ ಸಹಿಸಲಾರ.
ಪ್ರಿಯ ರಾಹುಲ್..
ಕ್ರೀಡಾಪಟುವೊಬ್ಬನ ಜೊತೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವಿಲ್ಲದವನ ತಂಡದ ಸಹವಾಸವೇ ಬೇಡ ನಿನಗೆ.. ಮುಂದಿನ ವರ್ಷ mega auctionಗೆ ಬಂದು ಬಿಡು. ನಿನ್ನಂತ ಒಬ್ಬ versatile ಕ್ರಿಕೆಟಿಗನ ಮೌಲ್ಯ ಏನೆಂಬುದು ಅಲ್ಲಿ ಅರ್ಥವಾಗುತ್ತದೆ.
ಲಕ್ನೋ ತಂಡ ಐಪಿಎಲ್’ಗೆ ಕಾಲಿಟ್ಟು ಇದು ಮೂರನೇ ವರ್ಷ. ಎರಡು ಬಾರಿ ಇದೇ ರಾಹುಲ್ ನಾಯಕತ್ವದಲ್ಲಿ (ಕಳೆದ ವರ್ಷ ಕೊನೆಯ ಕೆಲ ಪಂದ್ಯಗಳಲ್ಲಿ ಕೃಣಾಲ್ ಪಾಂಡ್ಯ ನಾಯಕನಾಗಿದ್ದ) ಲಕ್ನೋ ತಂಡ ಪ್ಲೇ ಆಫ್ ತಲುಪಿತ್ತು. ಈ ಬಾರಿಯೂ ತಂಡದ ಪ್ಲೇ ಆಫ್ ಬಾಗಿಲೇನೂ ಮುಚ್ಚಿ ಹೋಗಿಲ್ಲ. ಒಂದು ವೇಳೆ ಮುಚ್ಚಿದರೂ ಅದೇನು ಮಹಾಪರಾಧವೇನಲ್ಲ. ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಇದ್ದದ್ದೇ. ಗೆದ್ದಾಗ standನಲ್ಲಿ ನಿಂತು ಸಂಭ್ರಮಿಸಿದವರು ಸೋತಾಗ ತಂಡದ ಜೊತೆ ನಿಲ್ಲಬೇಕಾದ ಸೌಜನ್ಯತೆ, ಹೃದಯ ಶ್ರೀಮಂತಿಕೆ ಪ್ರದರ್ಶಿಸಬೇಕು.
ಅಲ್ಲ ಗೋಯೆಂಕಾ ಅವರೇ.. ಒಂದೇ ಒಂದು ಪಂದ್ಯ ಸೋತಿದ್ದಕ್ಕೆ ಈ ರೀತಿ ವರ್ತಿಸಿದ್ದೀರಲ್ಲಾ..
17 ವರ್ಷಗಳಿಂದ RCB ತಂಡ ಅದೆಷ್ಟು ಬಾರಿ ಇಂತಹ ಹೀನಾಯ ಸೋಲುಗಳನ್ನು ಕಂಡಿಲ್ಲ..! ಯಾವತ್ತಾದರೂ RCB ಫ್ರಾಂಚೈಸಿ ಓನರ್ಸ್ ತನ್ನ ಆಟಗಾರರನ್ನು ಹೀಗೆ ಅವಮಾನಿಸಿದ್ದನ್ನು ನೋಡಿದ್ದೀರಾ..? ದುಡ್ಡಿದ್ದ ಮಾತ್ರಕ್ಕೆ ನೀವು ದೊಡ್ಡವರಾಗುವುದಿಲ್ಲ. ದೊಡ್ಡತನ ಎಂಬುದು ನಡವಳಿಕೆಯಲ್ಲಿರಬೇಕು. Sportsmanship spiritನ ಅರ್ಥವೇ ಗೊತ್ತಿಲ್ಲದ ನಿಮ್ಮಂಥವರಿಂದ ಅದನ್ನೆಲ್ಲಾ ನಿರೀಕ್ಷಿಸಲು ಸಾಧ್ಯವೇ ಇಲ್ಲ..!