Home ಕ್ರಿಕೆಟ್ Someone from RCB ಎಂದಿದ್ದವನಿಗೆ ಎಂಥಾ ಗತಿ ಬಂತು ನೋಡಿ!

Someone from RCB ಎಂದಿದ್ದವನಿಗೆ ಎಂಥಾ ಗತಿ ಬಂತು ನೋಡಿ!

Someone from RCB ಎಂದಿದ್ದವನಿಗೆ ಎಂಥಾ ಗತಿ ಬಂತು ನೋಡಿ!

Someone from RCB ಎಂದಿದ್ದವನಿಗೆ ಎಂಥಾ ಗತಿ ಬಂತು ನೋಡಿ!

ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-2025 ಟೂರ್ನಿಯಲ್ಲಿ ಸತತ 4ನೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದ ಚೆನ್ನೈ, ನಂತರದ ನಾಲ್ಕೂ ಪಂದ್ಯಗಳನ್ನು ಸೋತಿದೆ. ಮಂಗಳವಾರ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿತ್ತು. ಇದು ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಎದುರಿಸಿದ ಸತತ ನಾಲ್ಕನೇ ಸೋಲು. ಈ ಪಂದ್ಯದಲ್ಲಿ ಚೆನ್ನೈ ನಾಯಕ ರುತುರಾಜ್ ಕೇವಲ ಒಂದು ರನ್ ಗಳಿಸಿ ಪಂಜಾಬ್ ಪರ ಆಡುತ್ತಿರುವ ನ್ಯೂಜಿಲೆಂಡ್ ವೇಗಿ ಲ್ಯೂಕಿ ಫರ್ಗ್ಯುಸನ್’ಗೆ ವಿಕೆಟ್ ಒಪ್ಪಿಸಿದ್ದರು. ರುತುರಾಜ್ ಫರ್ಗ್ಯುಸನ್ ಬೌಲಿಂಗ್’ನಲ್ಲಿ ಔಟಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲೊಂದು ವೀಡಿಯೊ ವೈರಲ್ ಆಗಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಬೆಂಗಳೂರಿಗೆ ಬಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಗಾಯಕ್ವಾಡ್ ಆಡಿದ್ದ ಮಾತೊಂದು ಈಗ ಭಾರೀ ಸದ್ದು ಮಾಡುತ್ತಿದೆ. ಖಾಸಗಿ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದ ರುತುರಾಜ್ ಮೈಕ್ ಹಿಡಿದು ಮಾತಾಡಲು ಶುರು ಮಾಡಿದಾಗ ಮೈಕ್ ಕೈ ಕೊಟ್ಟಿತ್ತು. ಆಗ ‘ಇದು ಆರ್.ಸಿ.ಬಿಯವರದ್ದೇ ಕಿತಾಪತಿ’ ಇರಬೇಕು, someone from RCB ಎಂದು ರುತುರಾಜ್ ಹೇಳಿದ್ದ.

ಈ ಉಡಾಫೆ ಮತ್ತು ವ್ಯಂಗ್ಯದ ಮಾತು ಆರ್.ಸಿ.ಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಮಂಗಳವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರುತುರಾಜ್’ನನ್ನು ಔಟ್ ಮಾಡಿದ ಲ್ಯೂಕಿ ಫರ್ಗ್ಯುಸನ್ ಈ ಹಿಂದೆ ಆರ್.ಸಿ.ಬಿ ಪರ ಆಡಿದವರು. ಇದನ್ನೇ ಬಳಸಿಕೊಂಡಿರುವ ಆರ್.ಸಿ.ಬಿ ಅಭಿಮಾನಿಗಳು ನಿನ್ನನ್ನು ಈ ಬಾರಿ ಔಟ್ ಮಾಡಿದ್ದು someone from RCB ಎಂದು ರುತುರಾಜ್ ಗಾಯಕ್ವಾಡ್’ನನ್ನು ಕಿಚಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

fourteen + 20 =

Someone from RCB ಎಂದಿದ್ದವನಿಗೆ ಎಂಥಾ ಗತಿ ಬಂತು ನೋಡಿ!

Someone from RCB ಎಂದಿದ್ದವನಿಗೆ ಎಂಥಾ ಗತಿ ಬಂತು ನೋಡಿ! ಐದು ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-2025 ಟೂರ್ನಿಯಲ್ಲಿ ಸತತ 4ನೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿದ್ದ ಚೆನ್ನೈ, ನಂತರದ ನಾಲ್ಕೂ ಪಂದ್ಯಗಳನ್ನು ಸೋತಿದೆ. ಮಂಗಳವಾರ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿತ್ತು. ಇದು ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಎದುರಿಸಿದ ಸತತ ನಾಲ್ಕನೇ ಸೋಲು. ಈ ಪಂದ್ಯದಲ್ಲಿ ಚೆನ್ನೈ ನಾಯಕ ರುತುರಾಜ್ ಕೇವಲ ಒಂದು ರನ್ ಗಳಿಸಿ ಪಂಜಾಬ್ ಪರ ಆಡುತ್ತಿರುವ ನ್ಯೂಜಿಲೆಂಡ್ ವೇಗಿ ಲ್ಯೂಕಿ ಫರ್ಗ್ಯುಸನ್’ಗೆ ವಿಕೆಟ್ ಒಪ್ಪಿಸಿದ್ದರು. ರುತುರಾಜ್ ಫರ್ಗ್ಯುಸನ್ ಬೌಲಿಂಗ್’ನಲ್ಲಿ ಔಟಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲೊಂದು ವೀಡಿಯೊ ವೈರಲ್ ಆಗಿದೆ. ಐಪಿಎಲ್ ಆರಂಭಕ್ಕೂ ಮುನ್ನ ಬೆಂಗಳೂರಿಗೆ ಬಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಗಾಯಕ್ವಾಡ್ ಆಡಿದ್ದ ಮಾತೊಂದು ಈಗ ಭಾರೀ ಸದ್ದು

Send this to a friend