ಕ್ರಿಕೆಟ್ಮಹಿಳಾ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ ಕೆ.ಎಫ್.ಸಿ ಕಿನ್ನಿಗೋಳಿ ಆಶ್ರಯದಲ್ಲಿ ಮಹಿಳೆಯರ ಮುಕ್ತ...

ಮಹಿಳಾ ಕ್ರಿಕೆಟ್ ಉತ್ತೇಜಿಸುವ ಸಲುವಾಗಿ ಕೆ.ಎಫ್.ಸಿ ಕಿನ್ನಿಗೋಳಿ ಆಶ್ರಯದಲ್ಲಿ ಮಹಿಳೆಯರ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ

-

- Advertisment -spot_img
ಮಂಗಳೂರು-ವಿಭಿನ್ನ,ವಿಶಿಷ್ಟ ಚಿಂತನೆ ಮತ್ತು ಪ್ರಯೋಗಗಳಿಂದ ಪ್ರಸಿದ್ಧಿ ಪಡೆದ 25 ವರ್ಷಗಳ ಇತಿಹಾಸದ ಹಿರಿಯ ಸಂಸ್ಥೆ K.F.C ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಉಚಿತ ಪ್ರವೇಶಾತಿಯೊಂದಿಗೆ ಮಹಿಳೆಯರಿಗಾಗಿ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಡಿಸೆಂಬರ್ 23 ಮತ್ತು 24 ರಂದು ಕಿನ್ನಿಗೋಳಿ ಐಕಳ ಪೊಂಪೈ ಪ್ರಥಮ‌ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಎಸ್.ಎಮ್.ಎಸ್ ಪಿಂಕ್ ಪ್ಯಾಂಥರ್ಸ್ ಬ್ರಹ್ಮಾವರ,ಯುನೈಟೆಡ್ ಕಿಂಗ್ಸ್ ಮಜಾಲ್,ಆರ್ಯನ್ ಪಿಂಕ್ ಪ್ಯಾಂಥರ್ಸ್ ಏಳಿಂಜೆ,ಸೈಂಟ್ ಅಲೋಶಿಯಸ್ ಕ್ರಿಕೆಟ್ ಅಕಾಡೆಮಿ,ಜಾಲಿ ಫ್ರೆಂಡ್ಸ್ ಪಂಜಿನಡ್ಕ,ವಿಜಯಾ ಯುವ ಸಂಗಮ ಎಕ್ಕಾರ್(ರಿ),ಸೈಂಟ್ ಅಲೋಶಿಯಸ್ ಪ್ರಿ ಯೂನಿವರ್ಸಿಟಿ  ಮಂಗಳೂರು ಮತ್ತು ಆಂಜನೇಯ ಸಸಿಹಿತ್ಲು ಸಹಿತ ಒಟ್ಟು 8 ತಂಡಗಳು ಭಾಗವಹಿಸಲಿದೆ‌.
K.F.C ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಕಿರು ಪರಿಚಯ
K.F.C ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ಎರಡೂವರೆ ದಶಕಗಳ ಇತಿಹಾಸದ ಸಂಸ್ಥೆ.ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಜಯಿಸಿದ ಕೆ.ಎಫ್.ಸಿ ತಂಡದ ಆಟಗಾರು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ  ಮಟ್ಟದಲ್ಲೂ ಪ್ರತಿಷ್ಠಿತ ತಂಡಗಳನ್ನು ಪ್ರತಿನಿಧಿಸಿರುವುದು ಸಂಸ್ಥೆಯ ಹೆಗ್ಗಳಿಕೆ.
ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಗಣೇಶ್ ಕಿನ್ನಿಗೋಳಿ ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದರೂ,ತಂಡದ ಸದಸ್ಯರಾದ ಗಣೇಶ್,ಪ್ರವೀಣ್,ನೂತನ್,ಅರುಣ್,ಶರತ್,ಯೋಗಾನಂದ,ರಫೀಕ್,ಇಲಿಯಾಸ್,ದಾಮೋದರ್,ಅನಂತ ಪದ್ಮನಾಭ ರಾವ್,ಕೇಶವ ಕರ್ಕೇರ,ವಿಶ್ವನಾಥ,ವಿಖೇಶ್,ಅಮಿತ್,ವಿಘ್ನೇಶ್,ಹರೀಶ್,ಶ್ರೀಶ,ಶಶಿ,ಶಮಿತ್ ಇವರೆಲ್ಲರೂ ಒಗ್ಗೂಡುವಿಕೆಯಲ್ಲಿ ಕಳೆದ 3 ವರ್ಷಗಳಿಂದ ಪುರುಷರಿಗಾಗಿ ಲೀಗ್ ಮಾದರಿಯ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಆಯೋಜಿಸಿದ್ದು,ಇದೀಗ ಮಹಿಳಾ ಕ್ರಿಕೆಟ್ ನ್ನು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗಾಗಿ ಮುಕ್ತ ಕ್ರಿಕೆಟ್ ಟೂರ್ನಮೆಂಟ್ ನಡೆಸಲು ಸನ್ನದ್ದರಾಗಿದ್ದು,ರಾಜ್ಯ ಮತ್ತು ಹೊರ ರಾಜ್ಯದ ಪ್ರತಿಷ್ಠಿತ 8 ತಂಡಗಳು ಸೆಣಸಾಡಲಿದ್ದು,ದ.ಕ-ಉಡುಪಿ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ‌ ನಿಲ್ಲಿಸಲಿದೆ.
ಡಿಸೆಂಬರ್ 23 ಶನಿವಾರ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪಂದ್ಯಾಟದ ಉದ್ಘಾಟನೆ ನೆರವೇರಲಿದ್ದು,M9ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

1 + 5 =

Latest news

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್ ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು...

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

  ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ...
- Advertisement -spot_imgspot_img

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

Must read

- Advertisement -spot_imgspot_img

You might also likeRELATED
Recommended to you