ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಫ್ರೆಂಡ್ಸ್ ಬೆಂಗಳೂರು ವಿಭಿನ್ನ ಚಿಂತನೆ
ಬೆಂಗಳೂರು-ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿ ಚಿಂತನೆಯೊಂದಿಗೆ,ತಂಡಗಳನ್ನು ಕಟ್ಟಿ ಬೆಳೆಸಲು ಕಷ್ಟ ಸಾಧ್ಯವಾದ ಈ ಕಾಲ ಘಟ್ಟದಲ್ಲೂ ಪ್ರಚಲಿತವಿರುವ ತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ
ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ಸ್ ಅಸೋಸಿಯೇಷನ್(ರಿ) ಇವರ ಆಶ್ರಯದಲ್ಲಿ ಸತತ ಎರಡನೇ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ “ಫ್ರೆಂಡ್ಸ್ ಕಪ್-2024” ಆಯೋಜಿಸಲಾಗಿದೆ.
ಪೀಣ್ಯ ಎರಡನೇ ಹಂತದ ಬಳಿ ಪಾಳು ಬಿದ್ದ ಜಮೀನನ್ನು ಸತತ ಐದಾರು ತಿಂಗಳ ಶ್ರಮದಿಂದ ಅತ್ಯಂತ ಸುಂದರ ಕ್ರೀಡಾಂಗಣವಾಗಿ ನಿರ್ಮಿಸಿ,ಫ್ರೆಂಡ್ಸ್ ಕಪ್-2023 ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು,
ಉಚಿತ ಎಂಟ್ರಿಯೊಂದಿಗೆ ಆಯೋಜಿಸಿ ಯಶಸ್ಸು ಸಾಧಿಸಿದ್ದು ಅಪಾರ ಜನಮನ್ನಣೆಗೆ ಪಾತ್ರವಾಗಿತ್ತು.ಕಳೆದ ಮೂರು ವರ್ಷಗಳಿಂದ ಗೆಲುವಿನ ಲಯದಲ್ಲಿ ಇದ್ದ ಫ್ರೆಂಡ್ಸ್ ಬೆಂಗಳೂರು 2023 ಫ್ರೆಂಡ್ಸ್ ಕಪ್ ಪಂದ್ಯಾಟದ ಬಳಿಕದ ಋತುವಿನಲ್ಲಿ ಸತತ 8 ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಗೆದ್ದು ಬೀಗಿದೆ.
ರೇಣುಗೌಡ ಸಾರಥ್ಯದ ಫ್ರೆಂಡ್ಸ್ ಬೆಂಗಳೂರು ತಂಡ ಇದೀಗ ಅದೇ ಮೈದಾನದಲ್ಲಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಇದೇ ಬರುವ ಮಾರ್ಚ್ 22,23 ಮತ್ತು 24 ರಂದು ಆಯೋಜಿಸಿದೆ.
16 ತಂಡಗಳ ನಡುವಿನ ಸೆಣಸಾಟ-ವಿದೇಶದ 2 ತಂಡಗಳು-ಹೊರ ರಾಜ್ಯದ 4 ತಂಡಗಳು ಭಾಗಿ
ಫ್ರೆಂಡ್ಸ್ ಬೆಂಗಳೂರು ತಂಡ 2023 ರಲ್ಲಿ ಆಯೋಜಿಸಿದ್ದ ಪಂದ್ಯಾಟದಲ್ಲಿ ಶ್ರೀಲಂಕಾ,ಲಕ್ನೋ,ಮಧ್ಯಪ್ರದೇಶ,
ಮುಂಬಯಿ ಸಹಿತ ಒಟ್ಟು 49 ತಂಡಗಳು ಭಾಗವಹಿಸಿದ್ದು,
ಈ ಬಾರಿ ವಿದೇಶದ 2 ತಂಡ,ಹೊರ ರಾಜ್ಯದ 4 ತಂಡ ಹಾಗೂ 2023-24 ಕ್ರಿಕೆಟ್ ಋತುವಿನಲ್ಲಿ ಅತೀ ಹೆಚ್ಚು ಪಂದ್ಯಾಟಗಳಲ್ಲಿ ಭಾಗವಹಿಸಿದ ಕರ್ನಾಟಕದ 10 ತಂಡಗಳಿಗೆ ಅವಕಾಶ ನೀಡಲಾಗಿದ್ದು,ದೇಶ ವಿದೇಶಗಳಲ್ಲಿ ಅಪಾರ ಸಾಧನೆಗೈದ ಟೆನಿಸ್ಬಾಲ್ ಕ್ರಿಕೆಟ್ ನ ಖ್ಯಾತನಾಮ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಫ್ರೆಂಡ್ಸ್ ಕಪ್ ನ ವಿಜೇತ ತಂಡ 5,05,000 ರೂ,ದ್ವಿತೀಯ ಸ್ಥಾನಿ 2,50,000 ರೂ ನಗದು ಸಹಿತ ಮಿನುಗುವ ಆಕರ್ಷಕ ಫ್ರೆಂಡ್ಸ್ ಕಪ್ ಗಳನ್ನು ಪಡೆಯಲಿದ್ದಾರೆ.
ಫ್ರೆಂಡ್ಸ್ ಬೆಂಗಳೂರು ವಿನೂತನ ಪ್ರಯೋಗ-ಆಯೋಜಕರಿಂದಲೇ ಪ್ರಾಯೋಜಕರ ವ್ಯವಸ್ಥೆ-ವ್ಯವಸ್ಥಾಪಕರಿಗಿಲ್ಲ ಖರ್ಚು ವೆಚ್ಚದ ಚಿಂತೆ
ಇತ್ತೀಚಿನ ದಿನಗಳಲ್ಲಿ ತಂಡಗಳನ್ನು ಕಟ್ಟಿ ಬೆಳೆಸಲು ಅತ್ಯಂತ ಕಷ್ಟ ಸಾಧ್ಯವಾದ ಈ ಕಾಲ ಘಟ್ಟದಲ್ಲಿ
ಫ್ರೆಂಡ್ಸ್ ಬೆಂಗಳೂರು ತಂಡ ಈ ಬಗ್ಗೆ ವಿನೂತನ ಚಿಂತನೆ ನಡೆಸಿ ಫ್ರೆಂಡ್ಸ್ ಕಪ್ ನಲ್ಲಿ ಕಾರ್ಯರೂಪಕ್ಕೆ ತರಲಿದ್ದಾರೆ
ಫ್ರೆಂಡ್ಸ್ ಕಪ್-2024 ರಲ್ಲಿ ಭಾಗವಹಿಸುವ ಎಲ್ಲಾ 16 ತಂಡಗಳಿಗೂ ಆಯೋಜಕರೇ ಪ್ರಾಯೋಜಕರನ್ನು ನೀಡುತ್ತಿರುವುದು ಟೆನಿಸ್ಬಾಲ್ ಕ್ರಿಕೆಟ್ ಕ್ಷೇತದಲ್ಲೆ ಇದೇ ಮೊದಲಾಗಿದೆ.
“ಅಳಿವಿನಂಚಿನಲ್ಲಿರುವ ಕ್ರಿಕೆಟ್ ಉಳಿಸಿ ಬೆಳೆಸುವುದು ಈ ಪಂದ್ಯಾಟದ ಮುಖ್ಯ ಉದ್ದೇಶ” ಎಂದು ಫ್ರೆಂಡ್ಸ್ ಬೆಂಗಳೂರು ತಂಡದ ಪ್ರವರ್ತಕರಾದ ರೇಣು ಗೌಡ ಇವರು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.