
ಟೆನಿಸ್ ಬಾಲ್ ಕ್ರಿಕೆಟ್: ಕಾಲ ಬದಲಾದರೂ ಕ್ರೀಡೆಯ ಮಜಾ ಅದೇ!
90ರ ದಶಕದಲ್ಲಿ ಕರ್ನಾಟಕದ ಆಟದ ಮೈದಾನಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಗೆ ಒಂದು ವಿಭಿನ್ನ ಮೋಡಿ ಇತ್ತು. ಆಗಿನ ದಿನಗಳಲ್ಲಿ ಈ ಆಟ ಸರಳ, ಮನರಂಜನೆಯುಳ್ಳ, ಸ್ನೇಹಪೂರ್ಣವಾಗಿತ್ತು. ಶನಿವಾರ, ಭಾನುವಾರದಂದು ಊರಿನ ಮೈದಾನಗಳಲ್ಲಿ ಹುಡುಗರ ಕೇಕೆಗಳು, ಚೆಂಡು ಬಡಿದ ಶಬ್ದಗಳು ಕೇಳಿಬರುತ್ತಿದ್ದವು.

೯೦ರ ದಶಕದ ಟೆನಿಸ್ ಬಾಲ್ ಕ್ರಿಕೆಟ್:
ಆಟ ಆಡುವುದೇ ಉತ್ಸವವಾಗಿತ್ತು.
ಟೀಂ ಆಯ್ಕೆ ಅಭಿಮಾನದಿಂದ – ಯಾರು ಚೆನ್ನಾಗಿ ಆಡುತ್ತಾರೋ ಅವರು ‘ಕ್ಯಾಪ್ಟನ್’.
ಆಂಗಣದ ಆಟದ ಮೂಲಕ ಸ್ನೇಹ, ಸಂಘಟನೆಯ ಮನೋಭಾವ, ಸಮರ್ಪಣೆ ಬೆಳೆದವು.
ಬಹುಪಾಲು ಪಂದ್ಯಗಳು ರಜಾ ದಿನಗಳ ವೇಳೆಯಲ್ಲಿ ನಡೆಯುತ್ತಿದ್ದವು.
ಆಟವೇ ಒಂದು ಹಬ್ಬದಂತೆ ಕಾಣುತ್ತಿದ್ದಿತು
‘ಔಟ್’ ಬಗ್ಗೆ ವಿವಾದಗಳು ಸಾಮಾನ್ಯವಾಗಿದ್ದವು, ಆದರೆ ದಿನದ ಕೊನೆಗೆ ಎಲ್ಲರೂ ಗೆಳೆಯರೆ.
ಇಂದಿನ ಟೆನಿಸ್ ಬಾಲ್ ಕ್ರಿಕೆಟ್:
ಪೂರ್ತಿಯಾಗಿ ವೃತ್ತಿಪರ ರೂಪಕ್ಕೆ ಬದಲಾಗಿದೆ.
ಟೂರ್ನಮೆಂಟ್‌ಗಳು ಡಿಜಿಟಲ್ ಮಾಧ್ಯಮಗಳ ಮೂಲಕ ಲೈವ್ ಸ್ಟ್ರೀಮ್ ಆಗುತ್ತಿವೆ.
ಜರ್ಸಿ, ಟ್ರೋಫಿ, ಪ್ರಾಯೋಜಕರು, ಬೃಹತ್ ಬಹುಮಾನಗಳು – ಎಲ್ಲವೂ ಸಿದ್ಧ.
ಆಟಗಾರರು ತಯಾರಿ, ಫಿಟ್ನೆಸ್, ಸ್ಟ್ರಾಟೆಜಿ- ತಂತ್ರಗಳ ಬಗ್ಗೆ ತೀವ್ರ ಗಮನ ಕೊಡುತ್ತಿದ್ದಾರೆ.
ಬಡಾವಣೆ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ಲೀಗ್‌ಗಳವರೆಗೆ ಕ್ರಿಕೆಟ್ ಬೆಳೆಯುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಆಟಗಾರರಿಗೆ ಅಭಿಮಾನಿಗಳ ಸೇನೆ!
ಒಂದು ಕಾಲದಲ್ಲಿ… ಮತ್ತು ಇಂದಿಗೂ…
ಆದರೆ ಕಾಲ ಕಳೆದರೂ ಒಂದು ವಿಷಯ ಬದಲಾಗಿಲ್ಲ – ಕ್ರಿಕೆಟ್ ಮೇಲಿನ ಪ್ರೀತಿ!
–ಕ್ರಿಕೆಟ್‌ಪ್ರೇಮ! ಆಟದ ಮೇಲಿನ ಅದ್ಭುತ ಮಮತೆ, ಗೆಲ್ಲಬೇಕೆಂಬ ಆಸೆ, ತಂಡದ ಜೊತೆಗಿನ ಸಂಭ್ರಮ – ಇದು ಹಿಂದೆ ಹೇಗಿತ್ತು, ಇಂದೂ ಹಾಗೆಯೇ ಇದೆ.
-ಸುರೇಶ್ ಭಟ್ ಮುಲ್ಕಿ
ಸ್ಪೋರ್ಟ್ಸ್ ಕನ್ನಡ





