Home ಕ್ರಿಕೆಟ್ ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ ಶ್ರೀ ಕೃಷ್ಣ ಕ್ಷೇತ್ರ.

ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ ಶ್ರೀ ಕೃಷ್ಣ ಕ್ಷೇತ್ರ.

ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ ಶ್ರೀ ಕೃಷ್ಣ ಕ್ಷೇತ್ರ.

ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ  ಶ್ರೀ ಕೃಷ್ಣ ಕ್ಷೇತ್ರ.

ಧರ್ಮ ಕ್ರೀಡೆ ಸಾಹಿತ್ಯ ಸಂಸ್ಕೃತಿಯ ಮಹಾಪೋಷಕರಾಗಿದ್ದ ಶ್ರೀಶಿರೂರುಮಠದ ಪೀಠಾಧಿಪತಿ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಸ್ಮರಣಾರ್ಥ ಸ್ಪೋರ್ಟ್ಸ್ ಕನ್ನಡ ಕ್ರೀಡಾವಾಹಿನಿ ಹಾಗೂ ಶ್ರೀಪಾದರ ಆಪ್ತ ಶಿಷ್ಯವೃಂದದವರ ಸಹಯೋಗದೊಂದಿಗೆ ಮೇ ತಿಂಗಳಲ್ಲಿ ರಾಜ್ಯಮಟ್ಟದಲ್ಲಿ ಶ್ರೀಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್ ಕ್ರಿಕೆಟ್ 2026 ಪಂದ್ಯಾವಳಿಯು ಭರ್ಜರಿಯಾಗಿ ನೆರವೇರಲಿದೆ.

ಕರ್ನಾಟಕದ ಟೆನಿಸ್ ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ –2026 ಭರ್ಜರಿ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಶ್ರೀ ಕ್ಷೇತ್ರದ ಆಶೀರ್ವಾದದೊಂದಿಗೆ ನಡೆಯಲಿರುವ ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್ 2026ರ ಮೇ 1, 2 ಮತ್ತು 3ರಂದು ಹಗಲು–ರಾತ್ರಿ ಪಂದ್ಯಗಳೊಂದಿಗೆ ನಡೆಯಲಿದೆ.

ಈ ಲೆಜೆಂಡ್ಸ್ ಕಪ್‌ನಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸುವ ಹೆಸರಾಂತ ತಂಡಗಳು ಭಾಗವಹಿಸಲಿದ್ದು, ಕ್ರೀಡಾಭಿಮಾನಿಗಳಿಗೆ ರೋಚಕ ಹಾಗೂ ಉತ್ಸಾಹಭರಿತ ಪಂದ್ಯಾವಳಿಗಳನ್ನು ನೀಡುವ ನಿರೀಕ್ಷೆಯಿದೆ. ಟೆನಿಸ್ ಬಾಲ್ ಕ್ರಿಕೆಟ್‌ಗೆ ಹೊಸ ಮಟ್ಟದ ಗೌರವ ತರುವ ಉದ್ದೇಶದಿಂದ ಈ ಟೂರ್ನಮೆಂಟ್ ರೂಪುಗೊಂಡಿದೆ.

ಕ್ರೀಡೆ, ಸಂಸ್ಕೃತಿ ಮತ್ತು ಸಂಭ್ರಮ ಒಂದೇ ವೇದಿಕೆಯಲ್ಲಿ ಬೆರೆಸುವ ಈ ಲೆಜೆಂಡ್ಸ್ ಕಪ್‌ನ್ನು ಶ್ರೀ ಕ್ಷೇತ್ರದ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಲಾಗುತ್ತಿದ್ದು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕ್ರೀಡಾ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಪಂದ್ಯಾವಳಿಯ ನೇರ ಪ್ರಸಾರ ಮತ್ತು ಇತರೆ ಕ್ರೀಡಾ ಮಾಹಿತಿಗಾಗಿ ಸ್ಪೋರ್ಟ್ಸ್ ಕನ್ನಡ ಮೀಡಿಯಾ ವಿಶೇಷವಾಗಿ ಕಾರ್ಯನಿರ್ವಹಿಸಲಿದ್ದು, ಈ ಟೂರ್ನಮೆಂಟ್ ರಾಜ್ಯಮಟ್ಟದಲ್ಲಿ ಗಮನ ಸೆಳೆಯುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

14 − 4 =

ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ ಶ್ರೀ ಕೃಷ್ಣ ಕ್ಷೇತ್ರ.

ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್–2026: ಕ್ರೀಡಾ ಹಬ್ಬಕ್ಕೆ ಸಜ್ಜಾದ  ಶ್ರೀ ಕೃಷ್ಣ ಕ್ಷೇತ್ರ. ಧರ್ಮ ಕ್ರೀಡೆ ಸಾಹಿತ್ಯ ಸಂಸ್ಕೃತಿಯ ಮಹಾಪೋಷಕರಾಗಿದ್ದ ಶ್ರೀಶಿರೂರುಮಠದ ಪೀಠಾಧಿಪತಿ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಸ್ಮರಣಾರ್ಥ ಸ್ಪೋರ್ಟ್ಸ್ ಕನ್ನಡ ಕ್ರೀಡಾವಾಹಿನಿ ಹಾಗೂ ಶ್ರೀಪಾದರ ಆಪ್ತ ಶಿಷ್ಯವೃಂದದವರ ಸಹಯೋಗದೊಂದಿಗೆ ಮೇ ತಿಂಗಳಲ್ಲಿ ರಾಜ್ಯಮಟ್ಟದಲ್ಲಿ ಶ್ರೀಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ ಕಪ್ ಕ್ರಿಕೆಟ್ 2026 ಪಂದ್ಯಾವಳಿಯು ಭರ್ಜರಿಯಾಗಿ ನೆರವೇರಲಿದೆ. ಕರ್ನಾಟಕದ ಟೆನಿಸ್ ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಶ್ರೀ ಲಕ್ಷ್ಮೀವರತೀರ್ಥಶ್ರೀ ಲೆಜೆಂಡ್ಸ್ –2026 ಭರ್ಜರಿ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಶ್ರೀ ಕ್ಷೇತ್ರದ ಆಶೀರ್ವಾದದೊಂದಿಗೆ ನಡೆಯಲಿರುವ ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್ 2026ರ ಮೇ 1, 2 ಮತ್ತು 3ರಂದು ಹಗಲು–ರಾತ್ರಿ ಪಂದ್ಯಗಳೊಂದಿಗೆ ನಡೆಯಲಿದೆ. ಈ ಲೆಜೆಂಡ್ಸ್ ಕಪ್‌ನಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸುವ ಹೆಸರಾಂತ ತಂಡಗಳು ಭಾಗವಹಿಸಲಿದ್ದು, ಕ್ರೀಡಾಭಿಮಾನಿಗಳಿಗೆ ರೋಚಕ ಹಾಗೂ ಉತ್ಸಾಹಭರಿತ ಪಂದ್ಯಾವಳಿಗಳನ್ನು ನೀಡುವ ನಿರೀಕ್ಷೆಯಿದೆ. ಟೆನಿಸ್ ಬಾಲ್ ಕ್ರಿಕೆಟ್‌ಗೆ ಹೊಸ ಮಟ್ಟದ ಗೌರವ ತರುವ ಉದ್ದೇಶದಿಂದ ಈ ಟೂರ್ನಮೆಂಟ್ ರೂಪುಗೊಂಡಿದೆ.

Send this to a friend