ಕ್ರಿಕೆಟ್ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

-

- Advertisment -spot_img

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

ಖ್ಯಾತ ಕ್ರಿಕೆಟ್ ಆಟಗಾರ ವಿಠಲ್ ರಿಶಾನ್ ನಾಯಕ್ ಅವರು ದುಬೈನ ಪ್ರಸಿದ್ಧ ಕ್ರಿಕೆಟ್ ತಂಡವಾದ ಕರ್ನಾಟಕ ಕ್ರಿಕೆಟ್ ಲೀಗ್ ತಂಡದ ಮುಖ್ಯ ಸಲಹೆಗಾರರಾಗಿ ಇದೀಗ ಆಯ್ಕೆಯಾಗಿರುತ್ತಾರೆ.

ಅರಬ್ ಸಂಯುಕ್ತ ರಾಷ್ಟ್ರದ ದುಬೈಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಆಟದ ಮೂಲಕ ವಿಶೇಷ ಸಂಚಲನ ಸೃಷ್ಟಿಸುತ್ತಿರುವ ಉಡುಪಿ ಕುಂದಾಪುರ ಸಮೀಪದ ಸೂರಾಲಿನ ಪ್ರತಿಭೆ ವಿಠಲ್ ರಿಶಾನ್ ನಾಯಕರ ಸೇವೆ ಸಾಧನೆಯನ್ನು ಪರಿಗಣಿಸಿ ಅರಬ್ ಸಂಯುಕ್ತ ರಾಷ್ಟ್ರದ ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆ ಕರ್ನಾಟಕ ಕ್ರಿಕೆಟ್ ಲೀಗ್ ತಂಡವು ವಿಠಲ್ ರಿಶಾನ್ ಅವರನ್ನು ಗೌರವಾನ್ವಿತ ಸಲಹೆಗಾರರನ್ನಾಗಿ ನೇಮಿಸಿದೆ.

ಈಗಾಗಲೇ ಗಲ್ಫ್ ಮಧ್ಯಪ್ರಾಚ್ಯ ದೇಶಗಳಿಗೆ ವಿಠಲ್ ರಿಶಾನ್ ನಾಯಕ್ ಅವರು ಸ್ಪೋರ್ಟ್ಸ್ ಕನ್ನಡ ಚಾನೆಲಿನ ಮುಖ್ಯ ಕಾರ್ಯನಿರ್ವಾಹಕ ಪ್ರತಿನಿಧಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೇ ಬರುವ ನವೆಂಬರ್ 22 ಮತ್ತು 23ರಂದು ಕರ್ನಾಟಕ ಕ್ರಿಕೆಟ್ ಲೀಗ್ ಸಂಸ್ಥೆಯ ಆಶ್ರಯದಲ್ಲಿ ದುಬೈನಲ್ಲಿ ಬೃಹತ್ ಕ್ರಿಕೆಟ್ ಪಂದ್ಯಾಟವು ಜರಗಲಿದ್ದು ಗಲ್ಫ್ ರಾಷ್ಟ್ರದ ಬಹುತೇಕ ಬಲಿಷ್ಠ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ.ಈ ಹಿನ್ನೆಲೆಯಲ್ಲಿ ವಿಠಲ್ ರಿಶಾನ್ ಅವರ ಆಯ್ಕೆ ನೆರವೇರಿದೆ.

ಕರ್ನಾಟಕ ಕ್ರಿಕೆಟ್ ಲೀಗ್ ಸಂಸ್ಥೆಯು ಅರಬ್ ಸಂಯುಕ್ತ ರಾಷ್ಟ್ರದಲ್ಲಿರುವ ಗಲ್ಫ್ ಗೆಳೆಯರು ಕರ್ನಾಟಕ ಕುಟುಂಬ ಸಂಸ್ಥೆಯ ಸಹಸಂಸ್ಥೆಯಾಗಿದೆ.ಈ ಸಂಸ್ಥೆಯು ಹಲವಾರು ವರ್ಷಗಳಿಂದ ಸಾಮಾಜಿಕ,ಸಾಂಸ್ಕೃತಿಕ ಚಟುವಟಿಕೆಯ ಜೊತೆಗೆ ಸಹಾಯ,ಸಹಕಾರ,ಸಂಪರ್ಕ,ಮಾಹಿತಿ,ಉದ್ಯೋಗ,ಕ್ರೀಡೆ ಸೇರಿದಂತೆ ಜನೋಪಯೋಗಿ ಸೇವಾ ಕೈಂಕರ್ಯವನ್ನು ನಿರಂತರವಾಗಿ ನಡೆಸುತ್ತಾ ಸಾವಿರಾರು ಕನ್ನಡಿಗರಿಗೆ ಆಸರೆಯನ್ನು ನೀಡುತ್ತಿದೆ.ಸುಮಾರು 5000ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ ದುಬೈನ ಬಹುದೊಡ್ಡ ಸಂಘಟನೆಯಾಗಿದೆ.

ಇದೀಗ ಈ ಸಂಸ್ಥೆಯು ನಮ್ಮೂರ ಕ್ರೀಡಾ ಪ್ರತಿಭೆ ಹಾಗೂ ಪಾದರಸದಂತೆ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ವಿಠಲ್ ರಿಶಾನ್ ಅವರನ್ನು ಕರ್ನಾಟಕ ಲೀಗ್ ತಂಡದ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿರುವುದು ಉಡುಪಿಗೆ ಹೆಮ್ಮೆ.ಕರ್ನಾಟಕ ಕ್ರಿಕೆಟ್ ಲೀಗನ ನೂತನ ಜವಾಬ್ದಾರಿಯು ವಿಠಲ ರಿಶಾನರ ಸೇವಾ ತತ್ಪರತೆಯ ಮಿನುಗುವ ಮುಕುಟಕ್ಕೆ ಮಗದೊಂದು ಮುತ್ತಿನ ಮಣಿ.ವಿಠಲ ರಿಶಾನ್ ನಾಯಕರಿಗೆ ಸ್ಪೋರ್ಟ್ಸ್ ಕನ್ನಡ ಕ್ರೀಡಾವಾಹಿನಿ ಹಾಗೂ ಉಡುಪಿಯ ಜನತೆಯ ಪರವಾಗಿ ಉಜ್ವಲ ಯಶಸ್ಸು ಭವಿಷ್ಯ ಪ್ರಾರ್ಥಿಸಿ ಹೃತ್ಪೂರ್ವಕ ಶುಭಹಾರೈಕೆಗಳು.

ಪಿ.ಲಾತವ್ಯ ಆಚಾರ್ಯ ಉಡುಪಿ.

LEAVE A REPLY

Please enter your comment!
Please enter your name here

19 − fourteen =

Latest news

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...
- Advertisement -spot_imgspot_img

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

Must read

- Advertisement -spot_imgspot_img

You might also likeRELATED
Recommended to you