ಶಿರ್ವ ಟಿ20 ಕಪ್ 2025: 16 ವರ್ಷದೊಳಗಿನವರ ಅಂಡರ್ 16 ಟಿ20 ಕ್ರಿಕೆಟ್ ಟೂರ್ನಮೆಂಟ್

ಶಿರ್ವ ಟಿ20 ಕಪ್ 2025: 16 ವರ್ಷದೊಳಗಿನವರ ಅಂಡರ್ 16 ಟಿ20 ಕ್ರಿಕೆಟ್ ಟೂರ್ನಮೆಂಟ್

ಶಿರ್ವ ಟಿ20 ಕಪ್ 2025: 16 ವರ್ಷದೊಳಗಿನವರ ಅಂಡರ್ 16 ಟಿ20 ಕ್ರಿಕೆಟ್ ಟೂರ್ನಮೆಂಟ್

ಶಿರ್ವ: ಹಿಂದೂ ಜೂನಿಯರ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಅಸೋಸಿಯೇಷನ್ ಶಿರ್ವ/ಮುಂಬೈ ಪ್ರಾಯೋಜಕತ್ವದಲ್ಲಿ ಎಂಸಿಸಿ ಕ್ರಿಕೆಟ್ ಅಕಾಡೆಮಿ ಶಿರ್ವ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸಹಯೋಗದಲ್ಲಿ “ಶಿರ್ವ ಟಿ20 ಕಪ್ 2025” ಎನ್ನುವ 16 ವರ್ಷದೊಳಗಿನವರ ಟಿ20 ಕ್ರಿಕೆಟ್ ಪಂದ್ಯಾವಳಿ ಮೇ 2 ರಿಂದ 5 ರವರೆಗೆ ಶಿರ್ವದ ಹಿಂದೂ ಪಿಯು ಕಾಲೇಜು ಮೈದಾನದಲ್ಲಿ ಜರಗಲಿದೆ.

ಕ್ರಿಕೆಟ್ ಕ್ರೀಡೆಯನ್ನು ಗ್ರಾಮೀಣ ಮಟ್ಟದಲ್ಲಿ ಉತ್ತೇಜಿಸುವ ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಟೂರ್ನಮೆಂಟ್ ಆಯೋಜಿಸಲಾಗಿದೆ. 9 ವಿವಿಧ ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಇದು ಯುವ ಆಟಗಾರರಿಗೆ ತಮ್ಮ ಕ್ರಿಕೆಟ್ ಸಾಮರ್ಥ್ಯ ತೋರಿಸಲು ಉತ್ತಮ ಅವಕಾಶವಾಗಿದೆ.

ಪ್ರತಿದಿನದ ಪಂದ್ಯಗಳು ಬೆಳಿಗ್ಗೆ ಪ್ರಾರಂಭವಾಗಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಉತ್ಸಾಹದ ಪಂದ್ಯಗಳ ಸಾಕ್ಷಿಯಾಗುವ ಅವಕಾಶವಿದೆ.

ಇದು ಸ್ಥಳೀಯ ಮಟ್ಟದಲ್ಲಿ ಹಮ್ಮಿಕೊಳ್ಳಲಾದ ಪ್ರಮುಖ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಟೂರ್ನಮೆಂಟ್‌ಗೆ ಉತ್ತೇಜನ ನೀಡುವಂತೆ ಆಯೋಜಕರಲ್ಲಿ ಓರ್ವರಾಗಿರುವ ಸದಾನಂದ ಶಿರ್ವ ಇವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *