ಎಂಸಿಎಫ್ ತಂಡದ ಭರ್ಜರಿ ಪ್ರದರ್ಶನ: ಸಿಪಿಎಲ್ ಟಿ20 ಟ್ರೋಫಿ ಜಯಿಸಿ ಚಾಂಪಿಯನ್ ಕಿರೀಟ

ಎಂಸಿಎಫ್ ತಂಡದ ಭರ್ಜರಿ ಪ್ರದರ್ಶನ: ಸಿಪಿಎಲ್ ಟಿ20 ಟ್ರೋಫಿ ಜಯಿಸಿ ಚಾಂಪಿಯನ್ ಕಿರೀಟ

ಎಂಸಿಎಫ್ ತಂಡದ ಭರ್ಜರಿ ಪ್ರದರ್ಶನ: ಸಿಪಿಎಲ್ ಟಿ20 ಟ್ರೋಫಿ ಜಯಿಸಿ ಚಾಂಪಿಯನ್ ಕಿರೀಟ

ಮಂಗಳೂರು: ಕಾರ್ಪೊರೇಟ್ ಪ್ರೀಮಿಯರ್ ಲೀಗ್ (CPL T20) ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಎಂಸಿಎಫ್ ತಂಡವು ಅದ್ಭುತ ಆಟದ ಪ್ರದರ್ಶನ ನೀಡಿ ಟ್ರೋಫಿಯನ್ನು ಮುಡಿಗೇರಿಸಿದೆ. ಕೇಶವ್ ಪೂಜಾರಿ ನೇತೃತ್ವದ ಎಂಸಿಎಫ್ ತಂಡವು ಪಣಂಬೂರು ಎನ್‌ಎಂಪಿಎ ಸ್ಟೇಡಿಯಂನಲ್ಲಿ ಏಪ್ರಿಲ್ 18ರಿಂದ 20ರವರೆಗೆ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ಟೀಮ್ ಎಜೆ ಹಾಸ್ಪಿಟಲ್ ವಿರುದ್ಧ 56 ರನ್‌ಗಳಿಂದ ಜಯ ಸಾಧಿಸಿ, ಟೂರ್ನಿಯ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಒಟ್ಟು ಆರು ಕಾರ್ಪೊರೇಟ್ ತಂಡಗಳು ಈ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದವು. ರಯೀಸ್ ಅಗಾ ನೇತೃತ್ವದ ಬಿಎಎಸ್ಎಫ್ ಕ್ರಿಕೆಟರ್ಸ್ ಮಂಗಳೂರು, ಕೇಶವ ಪಿ ನೇತೃತ್ವದ ಟೀಮ್ ಎಂಸಿಎಫ್ ಮಂಗಳೂರು, ಶರಣ್ ಶೆಟ್ಟಿ ನೇತೃತ್ವದ ಟೀಮ್ ಎಜೆ , ರಿತೇಶ್ ಡಿಸಿಲ್ವಾ ನೇತೃತ್ವದ ಟೀಮ್ ಎಂಆರ್‌ಪಿಎಲ್ , ಸಂದೀಪ್ ಕಾಮತ್ ನೇತೃತ್ವದ ಟೀಮ್ ಇನ್ಫೋಸಿಸ್ ಮಂಗಳೂರು ಮತ್ತು ಅನ್ಸಾರ್ EG ಇಂಡಿಯಾ ತಂಡವನ್ನು ಮುನ್ನಡೆಸಿದರು.

ಎಂಸಿಎಫ್ ತಂಡ ಸೆಮಿಫೈನಲ್‌ನಲ್ಲಿ ಇನ್ಫೋಸಿಸ್ ತಂಡವನ್ನು ಸೋಲಿಸಿ ಫೈನಲ್ ತಲುಪಿತು. ಟೀಮ್ ಎಜೆ ಹಾಸ್ಪಿಟಲ್ ತಂಡವು ಎಂಆರ್‌ಪಿಎಲ್ ವಿರುದ್ಧ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಎಂಸಿಎಫ್ ತಂಡ 56 ರನ್‌ಗಳಿಂದ ಗೆಲುವು ಸಾಧಿಸಿ ನಗದು ಬಹುಮಾನ ಮತ್ತು ಟ್ರೋಫಿಯನ್ನು ಗೆದ್ದುಕೊಂಡಿತು. ಎಜೆ ಹಾಸ್ಪಿಟಲ್ ತಂಡ ರನ್ನರ್‌ಅಪ್ ಆಗಿ ನಗದು ಬಹುಮಾನ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳು:

ಮ್ಯಾನ್ ಆಫ್ ದಿ ಫೈನಲ್: ದೀಪಕ್ ರಮೇಶ್ ದೇವಾಡಿಗ (ಎಂಸಿಎಫ್)

ಅತ್ಯುತ್ತಮ ಬ್ಯಾಟ್ಸ್‌ಮನ್: ರಾಜೀವ್ ಆರ್ (ಎಂಸಿಎಫ್)

ಅತ್ಯುತ್ತಮ ಬೌಲರ್: ಲೋಕೇಶ್ ಪುತ್ತೂರು (ಎಜೆ)

ಟೂರ್ನಿಯ ಶ್ರೇಷ್ಠ ಆಟಗಾರ: ದೀಪಕ್ ರಮೇಶ್ ದೇವಾಡಿಗ (ಎಂಸಿಎಫ್)

ಎಸ್ ಎಂ ಕ್ರಿಕೆಟರ್ಸ್ ತಂಡವು ಜಯರಾಮ್ ವಿಜಯ ಅವರ ನೇತೃತ್ವದಲ್ಲಿ ಈ ಮೂರು ದಿನಗಳ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಯಶಸ್ವಿಯಾಗಿ ಆಯೋಜಿಸಿತು. ದೀಪಕ್ ರಮೇಶ್, ಕೇಶವ್ ಪೂಜಾರಿ, ಧರಣೀಶ್ ಜೋಗಿ ಹಾಗೂ ನವೀನ್ ಕುಮಾರ್ ಈ ಟೂರ್ನಿಯ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದರು.

ಧನುಷ್, ಅವಿನಾಶ್ ಬಂಟ್ವಾಳ್, ನವೀನ್ ಕುಮಾರ್ ಬಂಟ್ವಾಳ್ ಮತ್ತು ಧರಣೀಶ್ ಜೋಗಿ ಅವರು ಅಂಪಾಯರ್‌ಗಳಾಗಿ ಕಾರ್ಯನಿರ್ವಹಿಸಿದರು. ಸತೀಶ್ ಸಾಲಿಯಾನ್, ಗೋಪಿ ಮಂಗಳೂರು, ನಯನ್ ಕುಮಾರ್ ಸುಳ್ಯ ಮತ್ತು ಸುರೇಶ್ ಭಟ್ ಮುಲ್ಕಿ ಅವರು ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು.

ಟೂರ್ನಿಯ ನೇರಪ್ರಸಾರವನ್ನು Mangalore ಮೀಡಿಯಾ ಯಶಸ್ವಿಯಾಗಿ ಒದಗಿಸಿತು, ಪರಿಣಾಮ ಟೂರ್ನಿಗೆ ವ್ಯಾಪಕ ಗಮನ ಸೆಳೆಯಿತು.

ಸಿಪಿಎಲ್ ಟಿ20 ಕ್ರಿಕೆಟ್ ಟೂರ್ನಮೆಂಟ್ ಮಂಗಳೂರಿನ ಕಾರ್ಪೊರೇಟ್ ಕ್ರೀಡಾ ಚಟುವಟಿಕೆಯಲ್ಲಿ ಹೊಸ ಆದರ್ಶವನ್ನು ಸ್ಥಾಪಿಸಿದ್ದು, ಮುಂದಿನ ವರ್ಷಗಳಲ್ಲಿಯೂ ಹೆಚ್ಚಿನ ಸ್ಪಂದನೆ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *