ಕಾರ್ಕಳ-ಆರ್.ಸಿ.ಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಹೆಬ್ರಿ ವಲಯ ಇವರ ಆಶ್ರಯದಲ್ಲಿ ಸಂಘಟನೆಯ ಉತ್ತಮ ಸಾಮಾಜಿಕ ಯೋಜನೆಗಳ ಸಹಾಯಾರ್ಥವಾಗಿ ಆಹ್ವಾನಿತ ಪ್ರತಿಷ್ಠಿತ ಸಂಸ್ಥೆಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಮಾರ್ಚ್ ದಿನಾಂಕ 29 ಶುಕ್ರವಾರದಂದು ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು 3000 ರೂ ಪ್ರವೇಶ ದರ ಪಾವತಿಸಬೇಕಿದೆ.
ಟೂರ್ನಮೆಂಟ್ ನ ಪ್ರಥಮ ಪ್ರಶಸ್ತಿ ವಿಜೇತ ತಂಡ 22,222 ರೂ ನಗದು,ದ್ವಿತೀಯ 11,111 ರೂ ನಗದು ಸಹಿತ ಆಕರ್ಷಕ ಬಹುಮಾನಗಳನ್ನು ಪಡೆಯಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೋಟ ದಾಮೋದರ ಆಚಾರ್ ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ 9972718414 ಮತ್ತು 9845479943 ಈ ನಂಬರ್ ಗಳನ್ನು ಸಂಪರ್ಕಿಸಬಹುದು