ಮಹಾಮಾಯಾ ಗ್ರೂಪ್ ಆಫ್ ಕಂಪನೀಸ್ ಪ್ರಸ್ತುತಪಡಿಸುತ್ತಿದೆ ಐಟಿ ಬಾಕ್ಸ್ ಕ್ರಿಕೆಟ್ ಲೀಗ್ 2025

ಮಹಾಮಾಯಾ ಗ್ರೂಪ್ ಆಫ್ ಕಂಪನೀಸ್ ಪ್ರಸ್ತುತಪಡಿಸುತ್ತಿದೆ ಐಟಿ ಬಾಕ್ಸ್ ಕ್ರಿಕೆಟ್ ಲೀಗ್ 2025

 

ಮಹಾಮಾಯಾ ಗ್ರೂಪ್ ಆಫ್ ಕಂಪನೀಸ್ ಪ್ರಸ್ತುತಪಡಿಸುತ್ತಿದೆ

ಐಟಿ ಬಾಕ್ಸ್ ಕ್ರಿಕೆಟ್ ಲೀಗ್ 2025

ಮಂಗಳೂರು: ಮಹಾಮಾಯಾ ಗ್ರೂಪ್ ಆಫ್ ಕಂಪನೀಸ್ ವತಿಯಿಂದ ಐಟಿ ಉದ್ಯೋಗಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಟಿ ಬಾಕ್ಸ್ ಕ್ರಿಕೆಟ್ ಲೀಗ್ 2025 ಕ್ರಿಕೆಟ್ ಟೂರ್ನಮೆಂಟ್ ಅನ್ನು ಜುಲೈ 19ರಂದು ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಮಂಗಳೂರು ಪ್ರಕ್ರಿಡಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.

ಇತ್ತೀಚೆಗೆ ವೈಭವದಿಂದ ನಡೆದ ಐಟಿ ಚಾಂಪಿಯನ್ಸ್ ಟ್ರೋಫಿಯ ಯಶಸ್ಸಿನ ನಂತರ, ಸಂಘಟಕರಾದ ವೈಭವ್ ಪೈ ಅಂಡ್ ಟೀಮ್ ಕೇವಲ ಎರಡು ತಿಂಗಳೊಳಗೆ ಮತ್ತೊಂದು ಸ್ಪರ್ಧಾತ್ಮಕ ಕ್ರಿಕೆಟ್ ಟೂರ್ನಿಯನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಹೊಸ ಲೀಗ್‌ ಕೂಡ ಇದೇ ರೀತಿ ಉತ್ಸಾಹ ಮತ್ತು ಕ್ರಿಕೆಟ್‌ ಪ್ರೇಮಿಗಳಿಗೆ ಉಡುಗೊರೆ ಆಗಲಿದೆ.

ಟೂರ್ನಮೆಂಟ್‌ನ್ನು ಒವರ್ ಆರ್ಮ್ ಮಾದರಿಯಲ್ಲಿ ನಡೆಸಲಾಗುತ್ತದೆ. ಪ್ರತಿಯೊಂದು ಪಂದ್ಯವೂ 5 ಓವರ್‌ಗಳ ಅವಧಿಯದಾಗಿದ್ದು, ಲೀಗ್ ಮತ್ತು ನಾಕೌಟ್ ವಿಧಾನಗಳಲ್ಲಿ ನಡೆಯಲಿದೆ. ದಿನವಿಡೀ ಕ್ರಿಕೆಟ್ ಉತ್ಸವದ ಜೊತೆಗೆ ಸಾಗಲಿದ್ದು, ವಿವಿಧ ತಂಡಗಳು ತಮ್ಮ ಪ್ರತಿಭೆ ಮತ್ತು ತಂಡದ ಸಾಮರಸ್ಯವನ್ನು ಪ್ರದರ್ಶಿಸಲು ಸಜ್ಜಾಗುತ್ತಿವೆ.

ಈ ಟೂರ್ನಮೆಂಟ್‌ ಐಟಿ ಉದ್ಯೋಗಿಗಳಿಗೆ ದೈನಂದಿನ ಕೆಲಸದ ಒತ್ತಡದಿಂದ ಹೊರಬಂದು, ಟೀಮ್ ಸ್ಪಿರಿಟ್ ಹಾಗೂ ಶಾರೀರಿಕ ಚಟುವಟಿಕೆಗೆ ಉತ್ತೇಜನ ನೀಡುವ ವಿಶಿಷ್ಟ ವೇದಿಕೆಯಾಗಲಿದೆ.

ನೋಂದಣಿಗಾಗಿ ಸಂಪರ್ಕಿಸಿ:
90364 77267 / 77954 55567

“ದೈನಂದಿನ ಒತ್ತಡಕ್ಕೆ ಬ್ರೇಕ್ ಹಾಕಿ, ಬ್ಯಾಟ್ ಹಿಡಿದು ಮೈದಾನಕ್ಕಿಳಿಯೋಣ!” ಎಂಬ ಸಂದೇಶದೊಂದಿಗೆ ಮಹಾಮಾಯಾ ಗ್ರೂಪ್ ಈ ಐಟಿ ಬಾಕ್ಸ್ ಕ್ರಿಕೆಟ್ ಲೀಗ್‌ ಅನ್ನು ಕ್ರೀಡಾ ಪ್ರೇಮಿಗಳಿಗೆ ಸಮರ್ಪಿಸುತ್ತಿದೆ.

 

Leave a Reply

Your email address will not be published. Required fields are marked *