ಟೆನ್ನಿಸ್ ಕ್ರಿಕೆಟ್ ವಲಯದಲ್ಲಿ ಈ ಋತುವಿನ ಅತ್ಯಂತ ಶ್ರೀಮಂತ ಪಂದ್ಯಾವಳಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಲಿದೆ. ರವಿಕುಮಾರ್ ಕಿತ್ತನಹಳ್ಳಿ,ಡಿ.ಸಿ.ಗಂಗಾಧರ್ ಗೌಡ್ರು ಹಾಗೂ ಸೃಷ್ಟಿ ಲೋಕೇಶ್ ರವರ ತ್ರಿಮೂರ್ತಿಗಳ ಸಾರಥ್ಯದಲ್ಲಿ ಬೆಂಗಳೂರಿನ ಮಾದವಾರ ನೈಸ್ ರೋಡ್ ಮೈದಾನದಲ್ಲಿ 25 ಬುಧವಾರದಿಂದ 29 ರವಿವಾರದ ತನಕ 5 ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯಲಿದೆ.
12 ಫ್ರಾಂಚೈಸಿಗಳು ಸ್ಪರ್ಧಾ ಕಣದಲ್ಲಿದ್ದು, ದಾಸನಪುರ ಹಾಗೂ ಹೆಸರಘಟ್ಟ ಹೋಬಳಿಯ ಆಟಗಾರರಿಗೆ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಜೈ ಕರ್ನಾಟಕದ ಸವ್ಯಸಾಚಿ ಕ್ರಿಕೆಟಿಗ ಪ್ರದೀಪ್ ಗೌಡ, ಫ್ರೆಂಡ್ಸ್ ಮಾಜಿ ಕ್ರಿಕೆಟಿಗ ಆದರ್ಶ ಗೌಡ, ಕಾಶಿ ಸಹಿತ ಒಬ್ಬ ಐಕಾನ್ ಆಟಗಾರರು ಒಂದೊಂದು ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪಂದ್ಯಾವಳಿಯ ವಿಜೇತ ತಂಡಗಳು 7.5 ಲಕ್ಷ ಮೌಲ್ಯದ ನಗದು ಮತ್ತು 6 ಲಕ್ಷ ಮೌಲ್ಯದ ಬೆಳ್ಳಿಯ ಬಹುಮಾನಗಳಿಂದ ಪುರಸ್ಕರಿಸಲಾಗುತ್ತಿದೆ. ಪ್ರಥಮ ಸ್ಥಾನಿ ತಂಡ 4 ಲಕ್ಷ ನಗದು, ವಿಜೇತ ತಂಡ 2 ಲಕ್ಷ ನಗದು, ತೃತೀಯ ಸ್ಥಾನಿ ತಂಡ 1ಲಕ್ಷ,
ಚತುರ್ಥ ಸ್ಥಾನಿ ತಂಡ 50 ಸಾವಿರ ನಗದು ಸಹಿತ ಬೆಳ್ಳಿ ಟ್ರೋಫಿಗಳು ಹಾಗೂ ಬೆಳ್ಳಿ ಪದಕಗಳು,
ಪ್ರತಿ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ 7 ಸಾವಿರ ಮೌಲ್ಯದ ಬೈಸಿಕಲ್,ವಿಶೇಷವಾಗಿ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ದ್ವಿಚಕ್ರ ವಾಹನ,ಶ್ರೇಷ್ಠ ಎಸೆತಗಾರ ಹಾಗೂ ಶ್ರೇಷ್ಠ ದಾಂಡಿಗರಿಗೂ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಗುತ್ತಿದೆ.
12 ಫ್ರಾಂಚೈಸಿಗಳು,ಮಾಲೀಕರು, ಐಕಾನ್ ಹಾಗೂ ತಂಡಗಳ ಚಿತ್ರ ಸಹಿತ ವಿವರ ಈ ಕೆಳಗಿನಂತಿದೆ.
1)ಯಶೋಗಂಗಾ ಸ್ಪೋರ್ಟ್ಸ್ ಕ್ಲಬ್
2)ರೂರಲ್ ಸಾಮ್ರಾಟ್ ಫ್ರೆಂಡ್ಸ್
3)ವಾಯುಪುತ್ರ ಕ್ರಿಕೆಟರ್ಸ್
4)ಹನುಮಾನ್ ವಾರಿಯರ್ಸ್
5)ದಾಸನಪುರ ರಾಕರ್ಸ್
6)ರೆಡ್ ಬುಲ್ಸ್
7) ವಿ.ಜಿ.ಜೆ ಜಾಗ್ವರ್ಸ್
8) ಜೆ.ಬಿ.ಸಿ.ಸಿ ಅಂಚೆಪಾಳ್ಯ
9) ಜಿ.ವೈ.ಸಿ
10) M.R ಕ್ರಿಕೆಟ್ ಟೀಮ್
11) ಜಿ.ಜೆ ಆರ್ಮಿ
12) E.K ಈಗಲ್ಸ್
ಕಳೆದ ವಾರ ನಡೆದಿದ್ದ ಆಕ್ಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ಹಾಗೂ ಪ್ರಸಿದ್ಧ ಕಾಮೆಂಟೇಟರ್ ಪ್ರಶಾಂತ ಅಂಬಲಪಾಡಿ ವೀಕ್ಷಕ ವಿವರಣೆ ನೀಡಲಿದ್ದು, M.Sports ನೇರ ಪ್ರಸಾರ ಬಿತ್ತರಿಸಿದರೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಆರ್.ಕೆ.ಆಚಾರ್ಯ ಕೋಟ